ಪ್ರತಿಭಾ ಪತ್ರಿಕೆ - ಸೆಪ್ಟಂಬರ್ 2025 ಸಂಪಾರಕರ ಮಾತು ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ. ಹಾಗೇನೆ, ಬಹುಮಾನಿತ ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ. ಎಂದಿನಂತೆ ನಿಮ್ಮ ಕೆ ವಿ ಜಯರಾಮ್ ಅವರು ಅನೇಕ ಚಿತ್ರಗಳನ್ನು ಕಳಿಸಿದ್ದಾರೆ. ಹಾಗೆ ಒಂದು ವಿಶೇಷ ಎಂದರೆ ಬಾಲಕ ಆದಿತ್ಯ ಅದ್ಬುತವಾಗಿ ಗಣೇಶನ ಪೆನ್ಸಿಲ್ ಡ್ರಾಯಿಂಗ್ ಅನ್ನು ಬರೆದಿದ್ದಾನೆ. ಮೊದಲೇ ಹೇಳಿದಂತೆ ಇನ್ನು ಮುಂದೆ ವಿಶೇಷ ವ್ಯಕ್ತಿ ಅನ್ನುವುದರ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾರ್ಪಡಿಸುತ್ತಿದ್ದೇನೆ ಏಕೆಂದರೆ ಅನೇಕರು ತಾವೇನು ವಿಶೇಷ ವ್ಯಕ್ತಿಯಲ್ಲ ಎಂದು ಹಿಂಜರಿದ್ದರು. ಆದ್ದರಿಂದ ಈ ಮಾರ್ಪಾಡನ್ನು ಮಾಡಲಾಗಿದೆ. ಈ ಸಲದ ಸ್ಪರ್ಧೆ ದಯವಿಟ್ಟು ತಾವೆಲ್ಲ ಭಾಗವಹಿಸಲೇಬೇಕೆಂದು ನನ್ನ ಭಾವನೆ ಮುಖ್ಯವಾಗಿ ರಾಮಾಯಣ ಮಹಾಭಾರತಗಳಲ್ಲಿ ಆಸಕ್ತಿಯುಳ್ಳವರು ಹಿರಿಯರು ದಯವಿಟ್ಟು ಭಾಗವಹಿಸಿ ಏನಾದರೂ ಹೊಸದು ಮಾಡಬೇಕೆಂಬ ಆಲೋಚನೆಯಿಂದ ನಾನು ಈ...
ಪ್ರತಿಭಾ ಪತ್ರಿಕೆ - ನವೆಂಬರ್ 2025 ಸಂಪಾದಕರ ಬರಹ ದೊಡ್ಡ ಲೇಖನಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿ ಪರಿಚಯದಲ್ಲಂತೂ ಪೂರ್ತಿಯಾಗಿ ಓದುತ್ತಿಲ್ಲದ ಕಾರಣ ವ್ಯಕ್ತಿ ಪರಿಚಯವನ್ನು ಇನ್ನೂ ಸಂಕ್ಷಿಪ್ತವಾಗಿ ಈ ಸಂಚಿಕೆಯಿಂದ ಹಾಕಲಾಗುತ್ತದೆ. ದಯವಿಟ್ಟು ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಿ. ಬಹುಮಾನವನ್ನು 250 ರೂ ಗಳಿಂದ 500 ರೂ ಗಳಿಗೆ ಹೆಚ್ಚಿಸಲಾಗಿದೆ. ಬಹುಮಾನದ ವಿಲ್ಲದ ಸ್ಪರ್ಧೆಗಳು ಸ್ವಾರಸ್ವಕರವಾಗಿರುತ್ತದೆ. ಆದ್ದರಿಂದ ಅದರಲ್ಲಿಯೂ ಭಾಗವಹಿಸಿ. ನೀವೇ ಬರೆದ ಕಥೆ ಕವನ ಹಾಸ್ಯ ಚಿತ್ರಕಲೆ ಮುಂತಾದವುಗಳನ್ನು ದಯವಿಟ್ಟು ಕಳಿಸಿ . ಇತ್ತೀಚೆಗೆ ನಿಮ್ಮ ಅಭಿಪ್ರಾಯಗಳು ಕಡಿಮೆಯಾಗಿವೆ. ದಯವಿಟ್ಟು ಬರೆಯಿರಿ . ಪ್ರತಿಭಾ ಪತ್ರಿಕೆಯ ಪದ್ಯ - ಎ ಎಸ್ ಜಯರಾಂ ಪ್ರತೀ ತಿಂಗಳ ಹೊಸ ಬೆಳಕು, ಕಥೆ, ಕವನ, ಚಿಂತನೆ, ಚುಟುಕು, "ಪ್ರತಿಭಾ" ಇಂಬು ತುಂಬುವ ಒಲುಮೆ! ಹಾಸ್ಯ ಹೊಳೆ ಹರಿಸುವ ಮಾಸಿಕ ಚಿಲುಮೆ || 1 || ಕಲೆಯ ಕಣಜವೇ ಇಲ್ಲಿ ಹರಿಯುವುದು, ಸಂಸ್ಕೃತಿಯು ಮುಂದಕ್ಕೆ ನಡೆಯುವುದು. ಸುದ್ದಿಯ ಪರಿಜ್ಞಾನ, ಹೊಸ ತಂತ್ರದ ಜ್ಞಾನ, ಪ್ರತಿಯೊಂದು ಪುಟ ಹಬ್ಬದ ಚಂದನ || 2 || ಸ್ಪರ್ಧೆಯ ದಾರಿಯಲ್ಲಿ ಸ್ಪೂರ್ತಿ ಸಿಡಿಯ...
Monthly Magazine Monthly Magazine ಪ್ರತಿಭಾ ಪತ್ರಿಕೆ -ಡಿಸಂಬರ್ 2024 ಈ ಸಂಚಿಕೆಯಲ್ಲಿ ಸಂಪಾದಕರ ಮಾತು ಪದಬಂಧ ಸ್ಪರ್ಧೆಯ ಉತ್ತರಗಳು ; ಮುಂದಿನ ಸಂಚಿಕೆಯ ಸ್ಪರ್ಧೆ ವಿಶೇಷ ವ್ಯಕ್ತಿ ಲೇಖನಗಳು ನೀವೆಷ್ಟು ಚುರುಕು ? ಬಡಾವಣೆ ಸುದ್ದಿ ಒಂದು ವಜ್ರದ ಕಥೆ ಭಾಗ 4 ನಿಮ್ಮ ಅಭಿಪ್ರಾಯಗಳು 1) ಸಂಪಾದಕರ ಮಾತು ಕೆಲವರು ಅದ್ಭುತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೀರಿ ಹಾಗೂ ಎಲ್ಲವನ್ನು ಓದುತ್ತಿದ್ದೀರಿ ಆದರೆ ಅನೇಕರು ಕಾಲಾವಕಾಶದ ಅಭಾವದಿಂದಲೂ ಏನೋ ಪೂರ್ತಿಯಾಗಿ ಮ್ಯಾಗ್ಜಿನ್ ಓದುತ್ತಿಲ್ಲ ದಯವಿಟ್ಟು ಓದಿ ನೀವು, ಹೊಸ ರುಚಿ ನಿಮ್ಮ ಸಾಧನೆಗಳು ಇನ್ನಿತರ ಸಣ್ಣ ಕವನಗಳು ಹಾಸ್ಯ ಎಲ್ಲವನ್ನು ಬರೆದು ಕಳಿಸಬಹುದು ಆದರೆ ಅವೆಲ್ಲವೂ ನಿಮ್ಮ ಸ್ವಂತದ್ದೇ ಆಗಿರಬೇಕು ಎಲ್ಲಿಂದನೋ ನೋಡಿದ್ದು ಓದಿದ್ದು ಮಾತ್ರ ಕಳಿಸುವುದು ಬೇಡ. ಏನಾದರೂ ಬರೆದು ಕಳಿಸಿ ನಿಮ್ಮ ಸ್ನೇಹಿತರಿಗೂ ಈ ಲಿಂಕ್ ಗಳನ್ನು ಕಳಿಸಿ. ಈ ಸಲ ಹೆಚ್ಚು ಮಾತಿಲ್ಲದ ಅಕ್ಷರಗಳೇ ಪ್ರಧಾನವಾದ ಸಂಚಿಕೆ ಆದ್ದರಿಂದ ಇವೆಲ್ಲವನ್ನು ಅಕ್ಷರಗಳಿಂದಲೇ ತುಂಬಿಸುತ್ತಿದ್ದೇನೆ. ಈ ಸಲದ ಸ್ಪರ್ಧೆಯು ಉತ್ತಮವಾಗಿದ್ದು ನಮ್ಮೆಲ್ಲರಿಗೂ ಅನುಕೂಲಕರವಾಗಿ...
Comments
Post a Comment