ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ

 

       

ಪ್ರತಿಭಾ ಪತ್ರಿಕೆ - ಸೆಪ್ಟಂಬರ್ 2025 


 

 ಸಂಪಾರಕರ ಮಾತು

ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ. 

ಹಾಗೇನೆ, ಬಹುಮಾನಿತ  ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ.

 ಎಂದಿನಂತೆ ನಿಮ್ಮ ಕೆ ವಿ ಜಯರಾಮ್ ಅವರು ಅನೇಕ ಚಿತ್ರಗಳನ್ನು ಕಳಿಸಿದ್ದಾರೆ. ಹಾಗೆ ಒಂದು ವಿಶೇಷ ಎಂದರೆ  ಬಾಲಕ ಆದಿತ್ಯ ಅದ್ಬುತವಾಗಿ ಗಣೇಶನ ಪೆನ್ಸಿಲ್ ಡ್ರಾಯಿಂಗ್ ಅನ್ನು ಬರೆದಿದ್ದಾನೆ.

 ಮೊದಲೇ ಹೇಳಿದಂತೆ ಇನ್ನು ಮುಂದೆ ವಿಶೇಷ ವ್ಯಕ್ತಿ ಅನ್ನುವುದರ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾರ್ಪಡಿಸುತ್ತಿದ್ದೇನೆ ಏಕೆಂದರೆ ಅನೇಕರು ತಾವೇನು ವಿಶೇಷ ವ್ಯಕ್ತಿಯಲ್ಲ ಎಂದು  ಹಿಂಜರಿದ್ದರು. ಆದ್ದರಿಂದ ಈ ಮಾರ್ಪಾಡನ್ನು ಮಾಡಲಾಗಿದೆ.

 ಈ ಸಲದ ಸ್ಪರ್ಧೆ ದಯವಿಟ್ಟು ತಾವೆಲ್ಲ ಭಾಗವಹಿಸಲೇಬೇಕೆಂದು ನನ್ನ ಭಾವನೆ ಮುಖ್ಯವಾಗಿ ರಾಮಾಯಣ ಮಹಾಭಾರತಗಳಲ್ಲಿ ಆಸಕ್ತಿಯುಳ್ಳವರು ಹಿರಿಯರು ದಯವಿಟ್ಟು ಭಾಗವಹಿಸಿ ಏನಾದರೂ ಹೊಸದು ಮಾಡಬೇಕೆಂಬ ಆಲೋಚನೆಯಿಂದ ನಾನು ಈ ಪ್ರಯತ್ನವನ್ನು ಮಾಡಿದ್ದೇನೆ.ಚಿಕ್ಕದಾಗಿ ಕೆಲವೇ ಸಾಲುಗಳಲ್ಲಿ ' ಬಿಟ್ಟಪದ ತುಂಬುವಂತೆ ಮಾಡಿದ್ದೇನೆ .

 ವಿಚಾರ- ಹೊಟ್ಟೆ ಕರಗಿಸುವ ಉಪಾಯ



ಕಳೆದ ಸಂಚಿಕೆ ಬಹುಮಾನ

ಪ್ರಥಮ ಬಹುಮಾನ ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ ಲಭಿಸಿದೆ .ಅವರು ಈಗ ಅಮೆರಿಕದಲ್ಲಿ ಇದ್ದಾರೆ . ಇನ್ನು ಕೆಲವೇ ದಿನಗಳಲ್ಲಿ ಅವರು ಭಾರತಕ್ಕೆ ಬರಲಿದ್ದಾರೆ. ಆಗ ಅವರಿಗೆ ಬಹುಮಾನ ನೀಡಲಾಗುವುದು.

 ಡಾಕ್ಟರ್ ಚಂದ್ರಶೇಖರ್ ರಾವ್ ಅವರ ಎರಡು ವಿಶೇಷ ಬಹುಮಾನಗಳನ್ನು ಶ್ರೀಮತಿ ಏ.ಸುಬ್ಬಲಕ್ಷ್ಮಿ ಹಾಗೂ ಶ್ರೀಮತಿ ಸೌಮ್ಯ ನಾಗರಾಜ್ ಅವರು ಗಳಿಸಿದ್ದಾರೆ.

ಶ್ರೀಮತಿ ಎಂ ಜೆ ಸುಶೀಲ ಹಾಗೂ ಡಾ || ಎ ಎಸ್ ಚಂದ್ರಶೇಖರ ರಾವ್ ಅವರುಗಳಿಗೆ , ಓತೀಕ್ಯಾತದ   ಕಥೆಗೆ ಉತ್ತರ ಬರೆದಿದ್ದಕ್ಕೆ , ಶ್ರೀಮತಿ ಎ ಸುಬ್ಬಲಕ್ಷ್ಮಿ ಅವರಿಂದ ವಿಶೇಷ ಬಹುಮಾನ .

ಬಹುಮಾನ ಪಡೆದ ಎಲ್ಲರಿಗೂ ಹಾಗೂ ವಿಶೇಷ ಬಹುಮಾನ ಕೊಟ್ಟ ಶ್ರೀಮತಿ ಎ ಸುಬ್ಬಲಕ್ಷ್ಮಿ ಅವರಿಗೂ ಧನ್ಯವಾದಗಳು 

 ರಂಗೋಲಿಗಳು 

1) ಶ್ರೀಮತಿ ರಾಜೇಶ್ವರಿ ನಾಗರಾಜ್

   

 
 

2) ಶ್ರೀಮತಿ ಗೀತಾ ಕೃಷ್ಣ ಮಾರ್ತಿ

ಲಕ್ಷ್ಮಿ ಮಂಟಪ 

 
 

3) ಶ್ರೀಮತಿ ಪದ್ಮಾ ಆರಾಧ್ಯ

 
 

4) ಶ್ರೀಮತಿ ಸವಿತಾ ಗೋವಿಂದ್

 
 

5) ಶ್ರೀಮತಿ ನಾಗವೇಣಿ

 
 

6) ಶ್ರೀಮತಿ ಸ್ವರ್ಣ ಸುಧೀರ್

 
 

7) ಶ್ರೀಮತಿ ಭವ್ಯ ರಘು

 
 

8) ಶ್ರೀಮತಿ ಕಾಂತಿ ಮತ್ತು ಶ್ರೀಮತಿ ಲತಾ

 
 

9) ಶ್ರೀಮತಿ ರೇಣುಕಾ ಪ್ರಸಾದ್

 

10) ಕುಮಾರಿ ಮಾಧುರಿ

 
 

ರಂಗೋಲಿ ಸ್ಪರ್ಧೆಯ ಬಹುಮಾನ ಶ್ರೀಮತಿ ಗೀತಾ ಕೃಷ್ಣಮೂರ್ತಿ ಅವರಿಗೆ ಲಭಿಸಿದೆ.ಅವರಿಗೆ ಅಭಿನಂದನೆಗಳು .

ಇವರ ಇನ್ನೊಂದು ರಂಗೋಲಿ, ವಿಜಯವಾಣಿ ಪತ್ರಿಕೆಯಲ್ಲಿ 01/09/2025 ರಂದು  ಪ್ರಕಟವಾಗಿದೆ!

 
 

 ಬಾಗಿಲ ಮುಂದೆ ಅತಿ ದೊಡ್ಡದಾಗಿ ರಂಗೋಲಿ ಹಾಕಿ ಸ್ಪರ್ಧಿಗೆ ಕಳಿಸಿದ್ದ ಶ್ರೀಮತಿ ಕಾಂತಿ ಮತ್ತು ಶ್ರೀಮತಿ ಲತಾ ಸಹೋದರಿಯರಿಗೆ ನನ್ನ ತಾಯಿ ಶ್ರೀ ಏ ಸುಬ್ಬಲಕ್ಷ್ಮಿ ಅವರಿಂದ ವಿಶೇಷ ಬಹುಮಾನ ಲಭಿಸಿದೆ.

ಶ್ರೀಮತಿ ಕಾಂತಿ ಮತ್ತು ಶ್ರೀಮತಿ ಲತಾ ಅವರುಗಳಿಗೆ ಅಭಿನಂದನೆಗಳು 

ಹಾಗೂ ವಿಶೇಷ ಬಹುಮಾನ ಕೊಟ್ಟ ಶ್ರೀಮತಿ ಎ ಸುಬ್ಬಲಕ್ಷ್ಮಿ ಅವರಿಗೂ ಧನ್ಯವಾದಗಳು 

 ಈ ಸಂಚಿಕೆಯ  ಬಹುಮಾನಿತ  ಸ್ಪರ್ಧೆ

ರಾಮಾಯಣ /ಮಹಾಭಾರತ

1) ... ನು  ಭೇಟೆಗಾಗಿ ಕಾಡಿಗೆ ಹೋದನು

2) ....

3) - - -

4).... ನು ...  ಇದಕ್ಕೆ ಕಾರಣ ಎಂದು ಅರಿತನು.

5) - - -

6) - - .

7).... ನು....ನ್ನು ಸಂಹರಿಸಿ ----

8) - - ನು -ನ್ನು -ಲ್ಲಿ---

9) ---

10) - - ನು - - - ಯುದ್ಧಮಾಡಿ, ಜಯಶಾಲಿ ಆದನು.

11) ನಂತರ - -ನ್ನು ಮತ್ತೆ - - - -.

12) ಎಲ್ಲರೂ ... ನ್ನು ಕೊಂಡಾಡಿದರು.

ನೀವು ಮಾಡಬೇಕಾದದ್ದು ಇಷ್ಟೇ . ಮೊದಲು ಕೆಲವು ಪದಗಳನ್ನು ತುಂಬಿ, ರಾಮಾಯಣದ ಒಂದು ಪ್ರಸಂಗ ಒಂದುವಂತೆ ಬರೆಯಿರಿ .

ನಂತರ ಆ ಪದಗಳೆಲ್ಲ ತೆಗೆದು, ಬೇರೆ ಪದಗಳನ್ನು ತುಂಬಿ ಮಹಾಭಾರತ ಒಂದು ಪ್ರಸಂಗ ಬರುವಂತೆ ಬರೆಯಿರಿ. ನಂತರ ಎರಡನ್ನೂ ನನಗೆ ಕಳುಹಿಸಿ .

ಯಾರು ಅತ್ಯಂತ ಅರ್ಥಪೂರ್ಣವಾಗಿ ಸನ್ನಿವೇಶಕ್ಕೆ ಹೊಂದುವಂತೆ ಬರೆದಿರುತ್ತಾರೋ  ಅವರಿಗೆ ಬಹುಮಾನ .

ನಿಯಮಗಳು:

-ನಾನು ಕೊಟ್ಟಿರುವ ಅಕ್ಷರಗಳನ್ನು ಬದಲಾಯಿಸುವಂತಿಲ್ಲ.

-ಬಿಟ್ಟ ಜಾಗಗಳಲ್ಲಿ ಹೆಚ್ಚೆಂದರೆ 4 ರಿಂದ 5 ಪದಗಳನ್ನು ಮಾತ್ರ ತುಂಬಬೇಕು.

 -ಅಲ್ಲಿರುವ ಇಡೀ ವಾಕ್ಯ ಬಿಟ್ಟಿರುವ ಕಡೆ , ಉದಾಹರಣೆಗೆ 2 ಹಾಗೂ  3 ಸಂಖ್ಯೆಗಳಲ್ಲಿ, ಒಂದೊಂದೇ ವಾಕ್ಯಗಳನ್ನು ಬರೆಯಬೇಕು.

-

ಉದಾಹರಣೆ 

1) ತಿಮ್ಮ  ನು ಭೇಟೆಗಾಗಿ ಕಾಡಿಗೆ ಹೋದನು

2) ಬಹಳ ಹೊತ್ತು ಕಾದನು.

3) ಕಾಡಿನಲ್ಲಿ ಯಾವ ಪ್ರಾಣಿಯೂ ಕಾಣಲಿಲ್ಲ. 

4) ತಿಮ್ಮ ನು, ತಾನು ನಿದ್ದೆಯ  ಸಮಯದಲ್ಲಿ ಬಂದಿರುವುದೇ   ಇದಕ್ಕೆ ಕಾರಣ ಎಂದು ಅರಿತನು.

( ಇದು  ರಾಮಾಯಣ ಅಥವಾ ಮಹಾಭಾರತ ಅಲ್ಲ . ಸುಮ್ಮನೆ ನಿಮಗೆ ಅರ್ಥ ಆಗಲೆಂದು ಬರೆದಿರುವುದು )

 ನಿಧಾನವಾಗಿ ಯೋಚಿಸಿ ಪ್ರಯತ್ನಿಸಿ . 

ವ್ಯಕ್ತಿ ಪರಿಚಯ- ಶ್ರೀ ಪ್ರಸಾದ್ ಬಿ ಎಸ್ ಕೆ 

ಒಂದು ಸಾಮಾನ್ಯ ದಿನದಲ್ಲಿ ಪ್ರಾರಂಭವಾದ ಹವ್ಯಾಸ, ಇಂದು ಸಾವಿರಾರು ಶ್ರೋತೃಗಳ ಹೃದಯ ಗೆದ್ದ ಸಂಗೀತಯಾನವಾಗಿದೆ. ಇದೇ ನನ್ನ ಹೈಸ್ಕೂಲ್ ಸಹಪಾಠಿ ಪ್ರಸಾದ್ ಅವರ ಅವರ ಕಿರುಪರಿಚಯ.

ಬಾಲ್ಯದಿಂದಲೇ ಸಂಗೀತದ ಮೇಲೆ ಆಸಕ್ತಿ ಹೊಂದಿರದೇ ಇದ್ದರೂ ಅವರು ನಿವೃತ್ತಿಯ ನಂತರ ಹವ್ಯಾಸಕ್ಕಾಗಿ ಪ್ರಾರಂಭಿಸಿ, ಪ್ರತಿ ಹಾಡನ್ನೂ ಮನಸ್ಸಿಗೆ ಹತ್ತಿರವಾಗಿಸಿಕೊಂಡು ಕೇಳುತ್ತಿದ್ದರು. ಸ್ವರದ ಮೇಲೆ ನಂಬಿಕೆ, ಭಾವನೆಯಲ್ಲಿ ಆಳ, ಹಾಗೂ ಗಾಯನದ ಮೇಲಿನ ಪ್ರೀತಿ ಅವರನ್ನು ಸ್ಮ್ಯೂಲ್ ವೇದಿಕೆಯತ್ತ ಕರೆದೊಯ್ದಿತು.

👉 ಮೊದಲ ಹಾಡು ಹಾಡಿದಾಗ, ಕೆಲವೇ ಜನರು ಕೇಳಿದರು. ಆದರೆ ಪ್ರತೀ ಹಾಡಿನಲ್ಲಿ ತೋರಿಸಿದ ಸತ್ಯಸಂಧತೆ ಮತ್ತು ಭಾವನಾತ್ಮಕತೆ ಶ್ರೋತೃಗಳನ್ನು ಆಕರ್ಷಿಸಿತು. ನಿಧಾನವಾಗಿ ಅವರು ಹಲವರ ಹೃದಯಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದರು.

ಕನ್ನಡದ ಹಳೆಯ ಚಲನಚಿತ್ರ ಹಿಟ್‌ಗಳಿಂದ ಹಿಡಿದು, ಭಾವಗೀತೆಗಳು, ಭಕ್ತಿಗೀತೆಗಳು, ರೊಮ್ಯಾಂಟಿಕ್ ಡ್ಯೂಯೆಟ್‌ಗಳವರೆಗೂ ಅವರ ಸ್ವರದಲ್ಲಿ ಪ್ರತಿಯೊಂದು ಹಾಡು ಹೊಸ ಜೀವ ಪಡೆದಂತಾಗುತ್ತದೆ.

🎼 ಅವರ ವಿಶೇಷತೆ ಏನು?

ಹಾಡಿನ ಅರ್ಥವನ್ನು ಮನಸ್ಸಿನಲ್ಲಿ ಕಟ್ಟಿಕೊಂಡು, ಅದನ್ನು ಶ್ರೋತೃ ಹೃದಯಕ್ಕೆ ತಲುಪಿಸುವ ಶಕ್ತಿ.

ಸ್ವರದ ಶುದ್ಧತೆ, ಸರಿಯಾದ ಲಯ ಹಾಗೂ ತಾಳದೊಂದಿಗೆ ಗಾಯನ.

ಜೊತೆಯ ಗಾಯಕರೊಂದಿಗೆ ಸಹಗಾಯನದಲ್ಲಿ  ತೋರಿಸುವ ಹೊಂದಾಣಿಕೆ.

🌟 ಸ್ಮ್ಯೂಲ್ ಅವರ ಜೀವನದಲ್ಲಿ ಏನು ಬದಲಾಯಿಸಿತು?

Gaayaka20 ಎಂಬ ಗಾನ-ನಾಮದಲ್ಲಿ ಹಾಡಿರುವ ಇವರಿಗೆ ಸ್ಮ್ಯೂಲ್ ಕೇವಲ ಒಂದು ಅಪ್ಲಿಕೇಶನ್ ಅಲ್ಲ – ಅದು ಸ್ವಪ್ನಗಳಿಗೆ ವೇದಿಕೆ. ತಮ್ಮ ಗಾಯನದ ಮೂಲಕ ಅವರು ಅನೇಕ ಶ್ರೋತೃಗಳನ್ನು ಸ್ಪರ್ಶಿಸಿದ್ದು, ಸಂಗೀತಾಸಕ್ತರೊಂದಿಗೆ ಬಲವಾದ ಬಾಂಧವ್ಯವನ್ನು ನಿರ್ಮಿಸಿದ್ದಾರೆ.

ಇಂದು ಅವರು ಕೇವಲ ಒಬ್ಬ ಹವ್ಯಾಸಿ ಗಾಯಕನಷ್ಟೇ ಅಲ್ಲ, ಸಂಗೀತವನ್ನು ಬದುಕುವ ವ್ಯಕ್ತಿ. ಅವರ ಗಾಯನ ಶ್ರೋತೃಗಳಿಗೆ ಸಂತೋಷ ನೀಡುತ್ತದೆ, ನೆನಪುಗಳನ್ನು ಜಾಗೃತಗೊಳಿಸುತ್ತದೆ ಮತ್ತು ಕೆಲವೊಮ್ಮೆ ಕಣ್ಣೀರನ್ನೂ ತರಿಸುತ್ತದೆ.

 ಅವರ ಕಥೆ ನಮಗೆ ತಿಳಿಸುವ ಸಂದೇಶ:

"ಪ್ರಾಮಾಣಿಕತೆ ಮತ್ತು ಭಾವದಿಂದ ಹಾಡಿದರೆ, ಯಾವ ವೇದಿಕೆಯಾಗಿದ್ದರೂ ಅದು ಹೃದಯ ಗೆಲ್ಲುತ್ತದೆ." 🎤

ಅನೇಕ ಹಿಂದಿ ಹಾಡುಗಳನ್ನ ಕನ್ನಡಕ್ಕೆ ಅನುವಾದಿಸಿ ಅದೇ ರಾಗದಲ್ಲಿ ಹಾಡಿರುವುದು ಇವರ ವಿಶೇಷ ಪ್ರತಿಭೆ.

ಈ ಕೆಳಗಿನ ಲಿಂಕ್ ಒತ್ತಿ, ಕೇಳಿ 

https://www.smule.com/sing-recording/1445704735_4966551586

ಸುಮಾರು 30 ಸಾವಿರ ( ಪುನರಾವರ್ತಿ ಸೇರಿ ) ಹಾಡುಗಳನ್ನು ಹಾಡಿದ್ದಾರೆ . ಒಂದೇ ದಿನ 65 ಹಾಡು ಹಾಡಿರುವುದು ಅವರ ಒಂದು ದಾಖಲೆ .

ಈ ಕೆಳಗಿನ ಲಿಂಕ್ ಒತ್ತಿ, ಕೇಳಿ 

https://www.smule.com/sing-recording/900845981_5061304495

 ನಿವೃತ್ತಿಯ ನಂತರದ ಜೀವನವನ್ನು ಅತ್ಯಂತ ಸಮಂಜಸವಾಗಿ ಇವರು ಉಪಯೋಗಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರಿಗೆ ಧನ್ಯವಾದಗಳು 

ಸೂಚನೆ : ಇದೇ ರೀತಿ ನೀವು ಯಾವುದಾದರೂ ಒಂದು ವಿಷಯದಲ್ಲಿ ಏನಾದರೂ ಸಾಧನೆಮಾಡಿದ್ದರೆ , ಬರೆದು ಕಳಿಸಿ .

 ನೀವೂ ಮಾಡಿ  



 ಚಿತ್ರಕಲೆ

ಆದಿತ್ಯ ( 9 ವರ್ಷದ ಬಾಲಕ )

 
 

ಶ್ರೀ ಕೆ ವಿ ಜಯರಾಂ 

-ಎಲೆ ಮರೆಯಿಂದ ನೋಡಿತ್ತಿರುವ ತರುಣಿಯ ಕಣ್ಣು .

         

-ಡೊನಾಲ್ಡ್ ಟ್ರಂಪ್ 

-ಕಾಡಿನಲ್ಲಿ ಜಿಂಕೆ 

-ಕೇರಳದ ಹೌಸ್ ಬೋಟ್  ಒಳಗೊಂಡ ಚಿತ್ರ 

 "ಊಟ" -ಸಣ್ಣ ಕಥೆ . - ಲೇಖಕರು : ಡಾ|| ಎ ಎಸ್ ಚಂದ್ರಶೇಖರ ರಾವ್ 

ಊಟದ ಬಗ್ಗೆ ಅನೇಕ ಗಾದೆಗಳು ಮತ್ತು ಉಲ್ಲೇಖಗಳು ಇವೆ. "ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಒಂದೊತ್ತುಂಡವ ಯೋಗಿ, ಎರಡೊತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ, ನಾಲ್ಕುಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ" ಮುಂತಾದುವು. ನಾವು ಮಾಡುವ ಊಟದಲ್ಲಿ ೧/೩ ಭಾಗ ಮಾತ್ರ ನಮಗೆ ಅಗತ್ಯ. ಇನ್ನುಳಿದ ೨/೩ ಭಾಗ ವೈದ್ಯರು ಜೀವಿಸುವುದಕ್ಕೆ - ಅಂದರೆ ಖಾಯಿಲೆ ಬಂದು ವೈದ್ಯರಲ್ಲಿಗೆ ಹೋಗಬೇಕಾಗುತ್ತದೆ ಎಂಬ ಅರ್ಥದಲ್ಲಿ ಈ ಉಲ್ಲೇಖ ಇದೆ. ನಮ್ಮ ಭಾರತದ ಸಂಸ್ಕೃತಿಯ ಪ್ರಕಾರ ಹಿತವಾದ, ಮಿತವಾದ ಮತ್ತು ಸಮತೋಲನವಾದ ಆಹಾರ ಸೇವಿಸಿದರೆ ಆರೋಗ್ಯವಂತರಾಗಿರಬಹುದು. ವೈದ್ಯಕೀಯ ವಿಜ್ಞಾನದ ಪ್ರಕಾರವೂ ಹಿತ, ಮಿತ, ಸಮತೋಲನ ಆಹಾರ ಆರೋಗ್ಯಕರ.

ನಮ್ಮ ಪುರಾತನ ಕಾಲದಿಂದಲೂ ಊಟದ ಬಗ್ಗೆ ಹಲವು ಸಲಹೆಗಳುಂಟು. ಅಲ್ಲದೆ ಪ್ರಮುಖವಾದ ಮತಗಳೂ ಸಹ ಬೋಧಿಸುವುದುಂಟು. ನಾವು ಮಾಡುವ ಊಟ ನಾವು ದುಡಿದದ್ದಾಗಿರಬೇಕು. 'ದುಡಿದು ತಿನ್ನು' ಎಂಬ ಬೋಧನೆ ಪ್ರಾಚೀನವಾದದ್ದೇ. ಬೇರೆಯವರ ಅನ್ನ ನಾವು ತಿನ್ನಬಾರದು. ಅತಿಯಾಗಿ ತಿನ್ನಬಾರದು, ಜೀವ ಸತ್ವ ಮುಂತಾದವುಗಳು ಸಮತೋಲನದಲ್ಲಿರಬೇಕು.

ಇನ್ನು ಅಹಾರ ಪದಾರ್ಥಗಳ ವಿಚಾರ. ಈಗಿನ ಕಾಲದಲ್ಲಿ ನಮ್ಮ ಭಾರತೀಯ ಆಹಾರಗಳ ಪಾಶ್ಚಾತ್ಯ ದೇಶಗಳ ಅನುಕರಣೆ ಆಗಿದೆ. ಜನಗಳಿಗೆ ಈ 'ಜಂಕ್' ಆಹಾರ ತುಂಬ ಇಷ್ಟವಾದಂತಿದೆ. ಈಗಿನ ಮಕ್ಕಳೂ ಕೂಡ 'ಬರ್ಗರ್' 'ಪಿಜ್ಜಾ' ಇಂತಹ ತಿನಿಸುಗಳನ್ನೇ ಇಷ್ಟಪಡುತ್ತಾರೆ. ಇತ್ತೀಚಿಗೆ 'ಮ್ಯಾಗಿ' ಒಂದು ರೀತಿಯ ಶ್ಯಾವಿಗೆಯ ತಿನಿಸು ಮಕ್ಕಳಿಗೆಲ್ಲ ಅತ್ಯಂತ ಪ್ರಿಯವಾಗಿದೆ. ಆದರೆ ಅದರಲ್ಲಿ ಹಲವು ವಿಷಪದಾರ್ಥಗಳಿವೆ ಎಂತ ಈ ತಿನಿಸನ್ನು ಸರ್ಕಾರ ನಿಷೇಧಿಸಿದೆ. ಅದರಲ್ಲಿ ಸೀಸದ ಪ್ರಮಾಣ ಹೆಚ್ಚಿದೆ ಮತ್ತು ಅದು ಹಾನಿಕರ ಎಂದು ತಿಳಿಸಲಾಗಿದೆ. ಇದು ಮೇಲ್ನೋಟಕ್ಕೆ ಒಂದು ತಿನಿಸು ಹೀಗಿದೆ ಎಂದಾದರೆ ಅನೇಕ ಆಹಾರ ಪದಾರ್ಥಗಳೂ ಕಲುಷಿತವಾಗಿದೆ ಎಂದು ತಿಳಿದು ಬಂದಿದೆ. ಮಾವಿನ ಕಾಯಿಗಳನ್ನು ಬೇಗ ಹಣ್ಣು ಮಾಡುವುದಕ್ಕೋಸ್ಕರ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸುತ್ತಾರೆ. ಇವು ಹಾನಿಕರ ಎಂದು ಸಾಬೀತಾಗಿದೆ. ಇಂತಹ ಹಣ್ಣುಗಳನ್ನು ತಿಂದರೆ, ಕಣ್ಣು, ಗಂಟಲು ಬೇನೆ, ವಾಂತಿ ಉಂಟಾಗಬಹುದು. ಇದು ಮಾವಿನ ಹಣ್ಣುಗಳಿಗೇ ಸೀಮಿತವಾದುದಲ್ಲ. ಇನ್ನಿತರ ಹಣ್ಣುಗಳಿಗೂ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾರೆ. ಇವೂ ಸಹ ಆರೋಗ್ಯಕ್ಕೆ ಹಾನಿಕರ. ಇನ್ನು ಜೀವನಕ್ಕೆ ಮೂಲಭೂತವಾದ ಕುಡಿಯುವ ನೀರು, ಉಸಿರಾಡುವ ಗಾಳಿ ಇವೆಲ್ಲ ಕಲುಷಿತವಾಗಿದೆಯಂತ ಕಂಡು ಬಂದಿದೆ. ಹೀಗಾಗಿ ನಾವು ಸೇವಿಸುವ ಆಹಾರ, ನೀರು, ಗಾಳಿ, ತರಕಾರಿ, ಹಣ್ಣುಗಳು ಎಷ್ಟು ಸುರಕ್ಷಿತ ಎಂತ ಅನುಮಾನ. ಹಾಲ

ಸುರಕ್ಷಿತ ಆಹಾರ ಪದಾರ್ಥಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ - ಇವು ಮಾನವನ ಮೂಲಭೂತ ಹಕ್ಕು ಸಹ.

 ಪದಬಂಧ 

 ಸುದ್ದಿಗಳು

ವಿಡಿಯಾ ಬಡಾವಣೆಯಲ್ಲಿ, 12/08/2025 ರಂದು  ಅಂಗಾರಕ ಸಂಕಷ್ಟದ ಪ್ರಯುಕ್ತ , ಹೋಮ, ಪೂಜೆ  ನಡೆಯಿತು . ಕೆಳಗಿನ ಲಿಂಕ್ ಒತ್ತಿ  ವಿಡಿಯೋ ನೋಡಿ 




ಆಗಸ್ಟ್ 15 ರಂದು , ನಮ್ಮ ಬಡಾವಣೆಯ ಉದ್ಯಾನವನದಲ್ಲಿ  215 ಅಡಿ ಎತ್ತರದ ಧ್ವಜ ಸ್ತಂಬ ದಲ್ಲಿ ,  ರಾಜ್ಯಸಭಾ ಸದಸ್ಯ  ಮಾನ್ಯ  ಶ್ರೀ ಎಂ ಕೃಷ್ಣಪ್ಪ ಅವರಿಂದ ಧ್ವಜಾರೋಹಣ ನಡೆಯಿತು. ಈ ಕೆಳಗಿನ ಲಿಂಕ್ ಒತ್ತಿ  ವಿಡಿಯೋ ನೋಡಿ 

     

                               

ಅಂದುಸಂಜೆ , ಸಂಗೀತ ಕಾರ್ಯಕ್ರಮ ಇತ್ತು . ಹಾಸ್ಯ ಕಾರ್ಯಕ್ರಮದಲ್ಲಿ ಪ್ರೊ || ಶ್ರೀ ಕೃಷ್ಣೇಗೌಡರು ಮಾತನಾಡಿದರು 

                   
 
 

ಈ ಕೆಳಗಿನ ಲಿಂಕ್ ಒತ್ತಿ  ವಿಡಿಯೋ ನೋಡಿ 

    

                        
 

ನಮ್ಮ ಬಡಾವಣೆಯ ದಂತವೈದ್ಯರಾದ ಡಾ || ನಾಗೇಶ್ ಅವರಿಗೆ ಅಖಿಲ ಭಾರತ ದಂತವೈದ್ಯರ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು .

ರಾಜ್ಯ ವೈದ್ಯ ಉನ್ನತ ಶಿಕ್ಷಣ ಮಂತ್ರಿ ಡಾ || ಶರಣ ಪ್ರಕಾಶ್ ಪಾಟೀಲ್ ಹಾಗೂ ಡಾ || ಸುಧಾಕರ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

 ನಿಮ್ಮ ಅಭಿಪ್ರಾಯಗಳು 

ಶ್ರೀಮತಿ ಸೌಮ್ಯ ನಾಗರಾಜ,ಜುಲೈ ಸಂಚಿಕೆಯ ಬಗ್ಗೆ

ಈ ಪತ್ರಿಕೆಯು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಸಂಪಾದಕರಾದ ಎ ಎಸ್ ಜಯರಾಂ ರವರ ತಾಳ್ಮೆ, ಬುದ್ಧಿ ಮತ್ತು ಅನುಭವಪೂರಿತ ಕಾರ್ಯವೈಖರಿ ಪ್ರಶಂಸನಾರ್ಹ. ಈ ಸಂಚಿಕೆಯಲ್ಲಿ ಬರೆದಿರುವ ಎಲ್ಲರ ಕವನಗಳೂ ಬಹಳ ಚೆನ್ನಾಗಿವೆ. ಮಕ್ಕಳ ಮುಗ್ಧಮನಸ್ಸು ಅಂಕಣದ ಕೊನೆಯ ಭಾಗ ಎಂದು ನೋಡಿ ಬೇಸರವಾಯಿತು. ಎಲ್ಲರ ಲೇಖನಗಳೂ ಸಮಾಜಕ್ಕೆ ದಾರಿದೀಪಗಳಂತೆ ಉಪಯುಕ್ತವಾಗಿವೆ.

ಧನ್ಯವಾದಗಳು 

 

Comments

Popular posts from this blog

ಪ್ರತಿಭಾ ಪತ್ರಿಕೆ - ಡಿಸಂಬರ್ 2024

Magazine for talents - November 2024

Magazine for talents - December 2024