ನನ್ನ ಮೊದಲ ಕಾರು!

  ಹೀಗೆ ಸುಮಾರು ವರ್ಷಗಳ ಹಿಂದೆ ನನ್ನ ಹತ್ತಿರ ಒಂದು ಫೀಯಿಟ್ ಕಾರು ಇತ್ತು. ಆ ಕಾಲದಲ್ಲಿ ಹೊಸ ಹೊಸ ಕಾರುಗಳು ಯಾವುದು ಜಾಸ್ತಿ ಇರಲಿಲ್ಲ. ಆ ಕಾರು ಮಾರ್ಗ ಮಧ್ಯದಲ್ಲಿ ಒಂದೊಂದು ಸಲ ಕೆಟ್ಟೋಗ್ತಾಯಿತ್ತು. ಆದರೂ ತುಂಬಾ ಚೆನ್ನಾಗಿ ಓಡುತ್ತಾ ಇತ್ತು.

 ಇಲ್ಲಿಂದ ಸುಮಾರು ಒಂದೈದು ಕಿಲೋಮೀಟರ್ ದೂರದಲ್ಲಿರೋ ನಮ್ ಮಾವನ ಮನೆಗೆ ಹೋಗುವಷ್ಟೊತ್ತಿಗೆ ಒಂದು ಸಲಿ ಅದನ್ನ ನಿಲ್ಸಿ ಕಾರ್ಬೊ ರೇಟರ್ ಕ್ಲೀನ್ ಮಾಡಿ ಅಲ್ಲಿಂದ ಮುಂದಕ್ಕೆ ಹೋಗಬೇಕಾಗುತ್ತಿತ್ತು. ಅಷ್ಟ್ರೊಳಗೆ ನಮ್ಮ ತಂದೆ "ಅಲ್ಲಿ ಹೋಗಿ ಮುಟ್ಟಿದ್ದೀಯಾ" ಎಂದು ಒಂದು ಸಾರಿ ಫೋನ್ ಮಾಡೋರು. ಯಾಕೆಂದ್ರೆ ಅದು ಅಷ್ಟು ಕೆಡುತ್ತೆ ಅಂತ ಗೊತ್ತಿತ್ತು.

  ಬೆಂಗಳೂರಿಂದ ಮೈಸೂರಿಗೆ ಅನೇಕ ಸಲ ಆ ಕಾರಿನಲ್ಲಿ ನಾನು ಹೋಗಿದ್ದೇನೆ.  ಟೈರ್ ಪಂಚರ್ ಆಗಿ ಬೇರೆ ಹಾಕುವುದು ,ಕಾರ್ಬೊನೇಟರ್ ಕ್ಲೀನ್ ಮಾಡುವುದು, ದಾರಿ ದಾರಿಯಲ್ಲಿ ಕೂಲಿಂಗ್ ಕೊಡುವುದು ಇವೆಲ್ಲ ಬಹಳ ಮಜಾ ತರುತ್ತಿತ್ತು. ನಮಗೂ ಅಲ್ಲಲ್ಲಿ ಎಳನೀರು ಕುಡಿಯುವುದು ತಿಂಡಿ ತಿನ್ನುವುದಕ್ಕೆ ಸಹಾಯ ಆಗುತ್ತಿತ್ತು. ಆ ಕಾರ್ ಓಡಿಸಿದ್ದರಿಂದಲೇ ನನಗೆ ಕಾರಿನಲ್ಲಿ ಯಾವೆಲ್ಲ ಇಂಜಿನ್ ಪಾರ್ಟ್ಸ್ ಗಳು ಇರುತ್ತವೆ, ಏನೇನು ಮಾಡುತ್ತವೆ ಎಂದು ಸರಿಯಾಗಿ ತಿಳಿದಿದ್ದು.

   ಒಮ್ಮೆ ಮೈಸೂರಿಗೆ ಹೋದಾಗ ರಾತ್ರಿ ಆಗಿತ್ತು. ಅಲ್ಲಿ ಏನೋ ಕಾರಣಕ್ಕಾಗಿ ಕರೆಂಟು ಹೊರಟು ಹೋಗಿತ್ತು. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಕಾರಿನ ಹೆಡ್ ಲೈಟ್ ಗಳು ಕೆಲಸ ಮಾಡೋದು ನಿಲ್ಲಿಸಿ ಬಿಟ್ಟಿತ್ತು. ರಸ್ತೆಯೇ ಕಾಣದಾಯಿತು . ಆಗ ನನ್ನ ತಮ್ಮ ಒಂದು ದೊಡ್ಡ ಬ್ಯಾಟರಿ ಹಿಡಿದು ಗಾಜಿನ ಮೂಲಕ ಹೊರಗಡೆ ರಸ್ತೆಗೆ ಬಿಡುತ್ತಿದ್ದನು. ನಾವು ಅಂತ ಬ್ಯಾಟರಿಗಳನ್ನು ಕಾರು ಕೆಟ್ಟು ಹೋಗುತ್ತೆ ಅಂತ ತಿಳಿದೇನೆ ಅದರಲ್ಲಿ ತೆಗೆದುಕೊಂಡು ಹೋಗುತ್ತಿದ್ದೆವು. ಒಟ್ಟಿನಲ್ಲಿ ಹೇಳುವುದಾದರೆ ಅಷ್ಟೆಲ್ಲ ತೊಂದರೆಗಳಿದ್ದಾಗಿಯೂ ಆ ಕಾರು ಓಡಿಸುವುದೇ ಒಂದು ಮಜವಾಗಿತ್ತು.

Comments

Popular posts from this blog

ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ

ನವೆಂಬರ್ ಸಂಚಿಕೆ

ಪ್ರತಿಭಾ ಪತ್ರಿಕೆ - ಜುಲೈ 2025