ಪ್ರತಿಭಾ ಪತ್ರಿಕೆ - ಆಗಸ್ಟ್ 2025
ಸಂಪಾದಕರ ಬರಹ
ಕಳೆದ ಸಂಚಿಕೆಯಲ್ಲಿ ಮುಖ್ಯ ಪದಬಂಧ, ಕವನ ಮುಂದುವರಿಸುವುದು , ಓತಿಕೇತದ ಕಥೆಯ ಪ್ರಶ್ನೆಗಳು ಎಲ್ಲದಕ್ಕೂ ಉತ್ತರಿಸಿದ್ದೀರಿ .ಬಹಳ ಧನ್ಯವಾದಗಳು. ಈ ಸಂಚಿಕೆಯಲ್ಲೂ ಬಹುಮಾನಿತ ಸ್ಪರ್ಧೆಯಯಾದ ರಂಗೋಲಿ ಸ್ಪರ್ಧೆಯ ಜೊತೆಗೆ ಇನ್ನೂ ಅನೇಕ ಬಹುಮಾನವಿಲ್ಲದ ಚಿಕ್ಕ ಸ್ಪರ್ಧೆಗಳಿವೆ. ಎಲ್ಲದರಲ್ಲೂ ದಯವಿಟ್ಟು ಭಾಗವಹಿಸಿ.
ನಾನು ಅನೇಕರನ್ನು "ವಿಶೇಷ ವ್ಯಕ್ತಿಗೆ ನಿಮ್ಮ ಹೆಸರನ್ನು ಹಾಕುತ್ತೇನೆ" ಎಂದು ಎಂದು ಹೇಳಿದಾಗ ಅವರುಗಳು "ನಾನೇನು ವಿಶೇಷ ವ್ಯಕ್ತಿ ಅಲ್ಲ. ಹಾಕುವುದು ಬೇಡ" ಎಂದು ಹಿಂದೆ ಸರಿದರು. ಅದರಿಂದ ಮುಂದಿನ ಸಂಚಿಕೆಯಿಂದ ವಿಶೇಷ ವ್ಯಕ್ತಿ ಎನ್ನುವ ಬದಲು ವ್ಯಕ್ತಿ ಪರಿಚಯ ಎಂದು ಮಾರ್ಪಾಡು ಮಾಡುತ್ತೇನೆ. ಆಗ ಯಾರು ಬೇಕಾದರೂ ತಮ್ಮ ಹವ್ಯಾಸಗಳು ಮುಂತಾದವುಗಳನ್ನು ನನಗೆ ಬರೆದು ಕಳಿಸಬಹುದು. ನಾನು ಸೂಕ್ತ ವ್ಯಕ್ತಿಗಳನ್ನು ಪ್ರತಿಭಾ ಪತ್ರಿಕೆಯಲ್ಲಿ ಹಾಕುತ್ತೇನೆ.
ತಮ್ಮೆಲ್ಲರ ಸಹಕಾರಕ್ಕೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು.
ವಿಚಾರ - ತಾಯಿಯ ಬೆಲೆ ಎಷ್ಟು ? ನೀವೇ ಹೇಳಿ .
ಇದು, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ.
ಜೂನ್ ಸಂಚಿಕೆಯ ಬಹುಮಾನ ವಿಜೇತರು
ಶ್ರೀಮತಿ ಸೌಮ್ಯ ನಾಗರಾಜ್ . ಅವರಿಗೆ ಅಭಿನಂದನೆಗಳು .
ಜುಲೈ ಸಂಚಿಕೆಯ ಉತ್ತರಗಳು
ಎಲ್ಲವನ್ನೂ ಸರಿಯಾಗಿ ಮಾಡಿದವರು ಯಾರೂ ಇಲ್ಲ.
ಸ್ವತಃ ಡಾಕ್ಟರ್ ಚಂದ್ರಶೇಖರ್ ರಾವ್ ಅವರೇ ಕೂತು ಎಲ್ಲ ಪದಬಂಧಗಳನ್ನು ನೋಡಿ, ಅದಕ್ಕೆ ಸೂಕ್ತ ಅಂಕಗಳನ್ನು ಇತ್ತು, ಈ ರೀತಿ ತೀರ್ಮಾನಿಸಿದ್ದಾರೆ:
ಒಟ್ಟು 36 ಅಂಕಗಳಲ್ಲಿ :
ಶ್ರೀಮತಿ ರಾಜೇಶ್ವರಿ ನಾಗರಾಜ್ 30 ಅಂಕಗಳು
ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯನಾರಾಯಣರಾವ್ 26 ಅಂಕಗಳು
ಶ್ರೀಮತಿ ಸೌಮ್ಯ ನಾಗರಾಜ್ 25 ಅಂಕಗಳು
ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ ಹಾಗೂ ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯ ನಾರಾಯಣ ರಾವ್ ಮತ್ತು ಶ್ರೀಮತಿ ಸೌಮ್ಯ ನಾಗರಾಜ್ ಅವರುಗಳಿಗೆ ಡಾ.ಚಂದ್ರಶೇಖರ್ ರಾವ್ ವಿಶೇಷ ಬಹುಮಾನ ಲಭಿಸಿದೆ. ಈ ಎಲ್ಲರಿಗೂ ಅಭಿನಂದನೆಗಳು.
ಈ ಸಂಚಿಕೆಯ ಬಹುಮಾನಿತ ಸ್ಪರ್ಧೆ : ಉತ್ತಮ ರಂಗೋಲಿ ಚಿತ್ರ ಕಳುಹಿಸಿ
ಲಕ್ಷ್ಮಿ ಹಬ್ಬ, ಗೌರಿ ಹಬ್ಬ, ಗಣೇಶನ ಹಬ್ಬಗಳು ಆಗಸ್ಟ್ ತಿಂಗಳಲ್ಲೇ ಬಂದಿರುವುದರಿಂದ, ನೀವೆಲ್ಲರೂ ರಂಗೋಲಿಗಳನ್ನು ಇಟ್ಟು ಅಲಂಕರಿಸುತ್ತೀರಿ. ಈ ರೀತಿ ಇಟ್ಟ ರಂಗೋಲಿಯನ್ನು ನೀವು ಫೋಟೋ ತೆಗೆದು ಕಳಿಸಬೇಕು.
ನಿಯಮಗಳು :
-ಕೇವಲ ಒಂದೇ ಒಂದು ಫೋಟೋ ಕಳಿಸಬೇಕು -ನೀವು ಇಟ್ಟಿರುವ ಎಲ್ಲಾ ರಂಗೋಲಿಗಳಲ್ಲಿ ಯಾವುದು ಚೆನ್ನಾಗಿದೆ ಎಂದು ನೀವೇ ತೀರ್ಮಾನಿಸಿ ಕಳಿಸಿ.
-ಒಮ್ಮೆ ಕಳಿಸಿದೆ ಮೇಲೆ, ಇನ್ನೂ ಚೆನ್ನಾಗಿದೆ ಎಂದು ಇನ್ನೊಂದು ಕಳಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ ಚೆನ್ನಾಗಿ ಯೋಚನೆ ಮಾಡಿ ಎಲ್ಲಾ ತೆಗೆದಿಟ್ಟುಕೊಂಡು ಕೊನೆಗೆ ಆಗಸ್ಟ್ ತಿಂಗಳ 30ನೇ ತಾರೀಖಿನ ಒಳಗಾಗಿ ಕಳಿಸಬೇಕು ಉತ್ತಮ ರಂಗೋಲಿ ಗೆ ಬಹುಮಾನವಿದೆ.
-ನನ್ನ ಇಮೇಲ್ : jayarambox @gmail.com . ಇಮೇಲ್ ಗೆ ಕಳುಹಿಸಲು ಬಾರದಿದ್ದವರು ಮಾತ್ರ ನನ್ನ ವಾಟ್ಸ್ಅಪ್ 8971862089 ಗೆ ಕಳುಹಿಸಬಹುದು.
ಕಥೆ ಮುಂದಿವರೆಸಿ -ಪಾರ್ಸಲ್ ಡಬ್ಬ !
ಬೆಳಗ್ಗೆ 6 ಗಂಟೆಗೆ ಕರೆ ಗಂಟೆ ಶಬ್ದ ಕೇಳಿ ಎಚ್ಚರಗೊಂಡೆ. ಆಮೇಲೆ ಹೋಗಿ ಬಾಗಿಲು ತೆಗೆದು ನೋಡಿದಾಗ, ಪಾರ್ಸೆಲ್ ನವನು ಒಂದು ದೊಡ್ಡ ಡಬ್ಬ ಪಾರ್ಸೆಲ್ ಗಿಫ್ಟ್ ಪ್ಯಾಕ್ ನಮ್ಮ ಮನೆಯ ಮುಂದೆ ಇಟ್ಟು ಹೋಗಿದ್ದ. ನನ್ನ ಹೆಂಡತಿಯನ್ನು ಎಬ್ಬಿಸಿದೆ. ಇಬ್ಬರು ಅದನ್ನು ಒಳಗೆ ತಂದು ಟೇಬಲ್ ಮೇಲೆ, ಇಟ್ಟು ಇದು ಯಾರು ಕಳಿಸಿರಬಹುದು ? ಇದರೊಳಗೆ ಏನಿರಬಹುದು? ನಮಗೆ ಈಗ ಏಕೆ ಕಳಿಸಿದ್ದಾರೆ? ಎಂದು ಯೋಚಿಸುತ್ತಿದ್ದೆವು.
ಈ ಕಥೆಯನ್ನು , ಸ್ವಾರಸ್ಯಕರವಾಗಿ ಮುಂದುವರೆಸಿ, ಸುಮಾರು 20 ಸಾಲುಗಳು ಬರೆದು ಕಳಿಸಿ
ವಿಶೇಷ ವ್ಯಕ್ತಿ - ಶ್ರೀ ಕೆ ಜಯರಾಂ - ಭಾಗ 2
ಅವರಿಗೆ ಗಿಡ ಬೆಳೆಸುವ ಹವ್ಯಾಸ ಇದೆ.
ಹವ್ಯಾಸವಾಗಿ ಟೆರೇಸ್ ತೋಟಗಾರಿಕೆ.
ತೋಟಗಾರಿಕೆ ತುಂಬಾ ಆರೋಗ್ಯಕರ. ದೈಹಿಕ ಚಟುವಟಿಕೆಯಾಗುವುದರ ಜೊತೆಗೆ, ಭೂಮಿಯೊಂದಿಗಿನ ಸಂಪರ್ಕವು ತುಂಬಾ ತೃಪ್ತಿಕರವಾಗಿದೆ ಮತ್ತು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಲಾಗಿದೆ. ಭೂಮಿಯೊಂದಿಗಿನ ಮಾನವರ ಸಂಪರ್ಕವು ಬಹಳ ಪ್ರಾಚೀನವಾದುದು. ತೋಟಗಾರಿಕೆಯು ಋತುಗಳಿಗೆ ಸಂಬಂಧಿಸಿದೆ ಮತ್ತು ನಮ್ಮ ಹೂಬಿಡುವ ಸಸ್ಯಗಳಲ್ಲಿ ಋತುಗಳು ಬದಲಾಗುತ್ತಿರುವಾಗ ನಾವು ಸಂತೋಷವನ್ನು ಅನುಭವಿಸುತ್ತೇವೆ. ಕೆಲವು ಸಸ್ಯಗಳು ಬಹುವಾರ್ಷಿಕಗಳಾಗಿದ್ದರೆ, ಹೆಚ್ಚಿನ ಸಸ್ಯಗಳು ಋತುಮಾನಕ್ಕನುಗುಣವಾಗಿ ಹೂಬಿಡುತ್ತವೆ.
ಇದರ ಬಗ್ಗೆ ಅವರು ಮುಂದೆ ಲೇಖನವೊಂದನ್ನು ಬರೆಯಲಿದ್ದಾರೆ ಆದ್ದರಿಂದ ಇಲ್ಲಿ ಅದರ ಬಗ್ಗೆ ಸ್ವಲ್ಪವೇ ಹೇಳಲಾಗಿದೆ. ಅವರ ಮನೆಯ ತಾರಸಿಯ ಮೇಲೆ ಅತ್ಯಧಿಕ ಗಿಡಗಳನ್ನು ಬೆಳೆದು ಆಟೋಮೆಟಿಕ್ ವಾಟರಿಂಗ್ ಸಿಸ್ಟಮ್ ಕೂಡ ಮಾಡಿದ್ದಾರೆ ಎಲ್ಲ ಗಿಡಗಳ ಹೆಸರುಗಳು ಅವರಿಗೆ ತಿಳಿದಿದೆ.
ಎಂಬಾಸಿಂಗ್ ಕಲೆ
ಅವರು ಎಂಬಾಸಿಂಗ್ ಕಲೆಯಲ್ಲೂ ಪರಿಣತರು. ನೀವೇ ನೋಡಿ ಈ ಬ್ರಾಸ್ ಪ್ಲೇಟ್ ನಲ್ಲಿ ಬುದ್ಧನ ವಿಗ್ರಹ ಹಾಗೂ ಅಶೋಕ ಸ್ತಂಭದ ಲಾಂಛನ ಗಳನ್ನು ಅತ್ಯಂತ ಸೊಗಸಾಗಿ ಎಂಬಾಸ್ ಮಾಡಿದ್ದಾರೆ!
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಲೇಖನ
ಜಯರಾಮ್ ಅವರು ಉದಯವಾಣಿ ಪತ್ರಿಕೆಯಲ್ಲಿ 6 ವರ್ಷಗಳ ಕಾಲ ಅಂಕಣಕಾರರಾಗಿದ್ದರು, ಸೋಮವಾರ ಪ್ರಕಟವಾಗುತ್ತಿದ್ದ ಇಸಿರಿ ನಿಯತಕಾಲಿಕೆ ವಿಭಾಗಕ್ಕೆ ಬರೆಯುತ್ತಿದ್ದರು. ಅವರು ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಇತರ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಡಜನ್ಗಟ್ಟಲೆ ಲೇಖನಗಳನ್ನು ಬರೆದಿದ್ದಾರೆ.
ಇವರು ಕನ್ನಡದಲ್ಲಿ ಬರೆಯುವುದರಲ್ಲಿ ಅತ್ಯಂತ ಪ್ರವೀಣರು , ಉದಯವಾಣಿಯಲ್ಲಿ ಸುಮಾರು 300 ಲೇಖನಗಳನ್ನು ಬರೆದಿದ್ದಾರೆ ಹಾಗೂ ಡೆಕ್ಕನ್ ಹೆರಾಳಿನಲ್ಲಿ 20 ಲೇಖನಗಳನ್ನು ಬರೆದಿದ್ದಾರೆ
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ವಾಸ್ತುಶಿಲ್ಪಿ ಜಯರಾಮ್ ಮತ್ತು ಅವರ ಕೃತಿಗಳ ಬಗ್ಗೆ ಲೇಖನಗಳನ್ನು ಬರೆದಿವೆ.
ಅಂತರರಾಷ್ಟ್ರೀಯ ಆನ್‌ಲೈನ್ ನಿಯತಕಾಲಿಕೆ ಲೆ ಸಿಂಪಲ್‌ಗಡಿಯಲ್ಲಿ, ಅಶೋಕನ ಶಾಸನಗಳು - ವಾಯ್ಸಸ್ ಇನ್ ಸ್ಟೋನ್ ' ಕುರಿತ ಅವರ ಲೇಖನವನ್ನು ಪ್ರಕಟಿಸಲಾಯಿತು. ಈ ಲೇಖನವನ್ನು ಪ್ರಕಟಣೆಯ ಮೊದಲು ಪೀರ್ ಪರಿಷ್ಕರಿಸಲಾಗಿದೆ.
ದೂರದರ್ಶನ ಕಾರ್ಯಕ್ರಮ
ದೂರದರ್ಶನ ಬೆಂಗಳೂರು ನಿರಂತರವಾಗಿ ಬದಲಾಗುತ್ತಿರುವ ದಿಕ್ಕುಗಳು ಮತ್ತು ಯಾವುದೇ ದಿಕ್ಕಿಗೆ ಏಕೆ ಭಯಪಡಬಾರದು ಎಂಬುದರ ಕುರಿತು ಒಂದು ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು.
ವರ್ಷದ ಅತ್ಯುತ್ತಮ ಪುಸ್ತಕ ಹಾಗೂ ಸನ್ಮಾನ
ಸರ್ಕಾರದ ವತಿಯಿಂದ ಮುದ್ರಣಗೊಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಇವರು ಈ ವರ್ಷದ ಅತ್ಯುತ್ತಮ ಪುಸ್ತಕ ವನ್ನು ಬರೆದಿದ್ದಾರೆ.
ವಿಜ್ಞಾನ ತಂತ್ರಜ್ಞಾನ ಮತ್ತು ಕೈಗಾರಿಕೆ ಎಂಬ ಹೆಸರಿನ ಈ ಪುಸ್ತಕದಲ್ಲಿ ಸುಮಾರು 50 ವರ್ಷಗಳಿಗಿಂತಲೂ ಹೆಚ್ಚಾಗಿ ನಡೆದ ಮುಖ್ಯ ಘಟನೆಗಳನೆಲ್ಲ ಅದ್ಭುತವಾಗಿ ನಿರೂಪಿಸಲಾಗಿದೆ.
ಈ ಪುಸ್ತಕವನ್ನು ಸ್ವತಃ ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಿದ್ದಾರೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇವರಿಗೆ ಸನ್ಮಾನವು ಲಭಿಸಿದೆ.
ಪ್ರಶಸ್ತಿಗಳು
ಅವರ ಅನೇಕ ಕಟ್ಟಡಗಳು ಪ್ರಶಸ್ತಿಗಳನ್ನು ಗೆದ್ದಿವೆ ಮತ್ತು ನಾಗತಿಹಳ್ಳಿಯಲ್ಲಿ ಶಾಲಾ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಪ್ರಸಿದ್ಧ ಲೇಖಕ ಮತ್ತು ಚಲನಚಿತ್ರ ನಿರ್ದೇಶಕ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ಇವರನ್ನು ಗೌರವಿಸಲಾಗಿದೆ.
ಮೈಸೂರಿನಲ್ಲಿ ವಿನ್ಯಾಸಗೊಳಿಸಲಾದ ಬಂಗಲೆ, ದಸರಾ ಸ್ಪರ್ಧೆಯಲ್ಲಿ ಹಲವು ವರ್ಷಗಳಿಂದ ಅತ್ಯುತ್ತಮ ಮನೆ ಮತ್ತು ಉದ್ಯಾನ ಪ್ರಶಸ್ತಿಯನ್ನು ಗೆದ್ದಿದೆ.
ಇಷ್ಟಲ್ಲದೇ ಇವರು ವಯಸ್ಕರಿಗೆ ಆಗುವಂತಹ ಹೊಸ ಸೈಕಲ್ ನ ಆವಿಷ್ಕಾರವನ್ನು ಮಾಡಿದ್ದಾರೆ ಎಂಬುದನ್ನು ಈ ಹಿಂದಿನ ಸಂಚಿಕೆಗಳಲ್ಲಿ ತಿಳಿಸಲಾಗಿದೆ ಅದರ ಒಂದು ಚಿತ್ರ ಇಲ್ಲಿ ಹಾಕಲಾಗಿದೆ
ಇಷ್ಟಲ್ಲದೇ, ಇವರು ಡ್ರಾಯಿಂಗ್ ಮತ್ತು ಪೇಂಟಿಂಗ್ ಕಲೆಯಲ್ಲಿ ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ. ಅವರ ಕೆಲವು ಪೇಂಟಿಂಗ್ ಗಳನ್ನು ಇಲ್ಲಿ ಹಾಕಲಾಗಿದೆ.
ಇದು ನ್ಯೂಯಾರ್ಕ್ ನ ಲೆವರ್ ಹೌಸ್
ಇದು ಜಪಾನ್ ನ ಟೋಕಿಯೊದಲ್ಲಿರುವ ಚರ್ಚ್
ಕಜರಾಹು ದೇವಸ್ಥಾನದ ಈ ಮೇಲಿನ ಚಿತ್ರವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ
ಪ್ರತಿವಾರವೂ ಇವರು ಗ್ರೇಟ್ ನೆಸ್ ಆಫ್ ಇಂಡಿಯನ್ ಕಲ್ಚರ್ ಎಂದು, ಅವರೇ ಹಳೆಯ ಕಾಲದ ದೃಶ್ಯಗಳನ್ನು ಪೇಂಟ್ ಮಾಡಿ, ಅದರ ಜೊತೆಗೆ ಅದಕ್ಕೆ ಪೂರಕವಾದ ಚಿಕ್ಕ ಬರಹಗಳನ್ನು ಬರೆಯುತ್ತಿರುತ್ತಾರೆ. ಅದರ ಒಂದು ದೃಶ್ಯ ಇಲ್ಲಿದೆ.
ಇವರಿಗೆ ಇನ್ನೂ ಹಲವಾರು ಹವ್ಯಾಸಗಳಿವೆ ಆದರೆ ಇಷ್ಟು ಸಾಕು , ಮುಂದೆ ಲೇಖನಗಳಲ್ಲಿ ಅವನ್ನು ಬರೆಯುವೆ ಎಂದು ಇವರು ಹೇಳಿದ್ದಾರೆ .
ಇದೆಲ್ಲದರ ಜೊತೆಗೆ ಇವರು ಮತ್ತು ಇವರ ಧರ್ಮಪತ್ನಿ ಶ್ರೀಮತಿ ಸಂದ್ಯಾ ಜಯರಾಮ್ ಅವರು ನಮ್ಮ ಬಡಾವಣೆಗೆ ಬಹಳ ಸಹಾಯಗಳನ್ನು ಮಾಡುತ್ತಿರುತ್ತಾರೆ.
ಇಷ್ಟೆಲ್ಲಾ ವಿಷಯಗಳನ್ನು ಕೊಟ್ಟು ಸಹಕರಿಸಿದ ಶ್ರೀ ಕೆ ಜಯರಾಂ ಅವರಿಗೆ ಧನ್ಯವಾದಗಳು
ವ್ಯಾಪಾರದ ಗುಟ್ಟು - ಶ್ರೀ ಜಯರಾಂ ಎ ಎಸ್
[embed]https://youtu.be/CUZuzbhfq40[/embed]
ಓತಿಕ್ಯಾತದ ಕಥೆಗೆ ಉತ್ತರಗಳು
ಶ್ರೀಮತಿ ಎಂ ಜೆ ಶುಶೀಲ ( ಸೌಮ್ಯ ನಾಗರಾಜ್ ಅವರ ಅತ್ತೆ )
ಈ ಕೆಳಗಿನ ಲಿಂಕ್ ಒತ್ತಿ , ಅವರದೇ ಧ್ವನಿಯಲ್ಲಿ ಕೇಳಿ
[playlist ids="1261"]
ಡಾ|| ಎ ಎಸ್ ಚಂದ್ರಶೇಖರ ರಾವ್
1. ಈ ಪ್ರಸಂಗವು ಮಾನವನ ಧರ್ಮ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಿದೆ ಪಲಾ ಫಲಗಳು ದೈವಾಧೀನ ಭಗವದ್ಗೀತೆಯಲ್ಲಿ ಶ್ಲೋಕ "ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ " ಇದನ್ನೇ ಪ್ರತಿಪಾದಿಸುತ್ತದೆ
2. ವೈಯುಕ್ತಿಕವಾಗಿ ,ನನ್ನ ಸುಮಾರು 64 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಚಿಕಿತ್ಸೆ ಫಲಿಸದಿದ್ದರೆ ನಿರಾಶೆ ಭಾವ ಉಂಟಾಗುತ್ತದೆ. ಎಲ್ಲರಿಗೂ ಒಂದೇ ಶ್ರದ್ದೆಯಿಂದ ಚಿಕಿತ್ಸೆ ನೀಡಿದರೂ, ಫಲಾಫಲಗಳು ಬೇರೆ ಬೇರೆ ಇರುತ್ತವೆ. ಒಳ್ಳೆಯದಾದರೆ ನಾನು ಮಾಡಿದ್ದು ಎಂಬ ಭಾವ ಬರಬಾರದು ಫಲಾಫಲಗಳು ದೈವಕ್ಕೆ ಸೇರಿದದ್ದು.
3. ಪೂರಾಣದಲ್ಲಿ ಇಂತಹ ಒಂದು ಪ್ರಸಂಗ ಉಲ್ಲೇಖಿಸಿದೆ. ಒಮ್ಮೆ ಯಮಧರ್ಮ ರಾಜ ವಿಷ್ಣುವನ್ನು ನೋಡಲು ವೈಕುಂಠಕ್ಕೆ ಬಂದನಂತೆ. ಅದೇ ಸಮಯಕ್ಕೆ ವಿಷ್ಣು ವಾಹನ ಗರುಡನು ಬಂದನಂತೆ. ಅಲ್ಲೊಂದು ಚಿಕ್ಕ ಪಕ್ಷಿ ಇತ್ತಂತೆ . ಯಮರಾಜ ಅದನ್ನು ದೃಷ್ಟಿಸಿ ನೋಡಿ, ವಿಷ್ಣುವನ್ನು ನೋಡಲು ಒಳಗೆ ಹೋದನಂತೆ. ಆ ಪಕ್ಷ ಗರುಡನಿಗೆ ಹೇಳಿತು "ಯಮ ದರ್ಶನವಾಯಿತು, ನನ್ನ ಸಾವು ಖಚಿತ" .ಆಗ ಗರುಡ ಆ ಪಕ್ಷಿಗೆ ಸಮಾಧಾನ ಹೇಳಿ, ತನ್ನ ಬೆನ್ನೆ ಮೇಲೆ ಕೂಡಿಸಿಕೊಂಡು, ಸಹಸ್ರಾರು ಮೈಲು ದೂರದ ಹಿಮಾಲಯ ಪರ್ವತದ ತುತ್ತ ತುದಿಯ ಶಿಖರದ ಮೇಲಿರಿಸಿ, " ಇಲ್ಲಿಗೆ ಯಾರೂ ಬರುವುದಿಲ್ಲ. ನಿಶ್ಚಯಂತೆಯಿಂದ ಇರು" ಎಂದು ಹೇಳಿ ವಾಪಸ್ ವೈಕುಂಠಕ್ಕೆ ಬಂದಿದ್ದಂತೆ. ಆಗ ಯಮರಾಜ ಹೊರಗೆ ಬಂದು ಪಕ್ಷಿ ಇದ್ದ ಜಾಗ ನೋಡಿ ನಕ್ಕು ಹೇಳಿದ "ಆ ಪಕ್ಷಿಗೆ ಹಿಮಾಲಯದ ಶಿಖರದಲ್ಲಿ ಸಾವು ಇತ್ತು. ಇಲ್ಲಿ ಯಾಕೆ ಇದೆ ಎಂದು ಯೋಚಿಸುತ್ತಿದೆ. ಆಗ ಅದು ಅಲ್ಲಿಗೆ ಹೋಗಿ ಅದರ ಸಾವು ಸಂಭವಿಸುತ್ತದೆ" ಎಂದನಂತೆ.
ಸಾವು ಯಾವಾಗ ರೂಪದಲ್ಲಿ ಬರುತ್ತೆ ಎಂಬುದು ಭಗವಂತನ ಪೂರ್ವ ನಿಯೋಜಿತ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ
ತೃಣಮಪಿ ನ ಚಲತಿ ತೇನವಿನ
ಇಬ್ಬರೂ ವಯೋವೃದ್ದರೂ , ಕಾಕ ತಾಳೀಯವೆಂಬಂತೆ , ಒಂದೇ ರೀತಿಯ ಉತ್ತರ ಕಳುಹಿಸಿದ್ದಾರೆ. ಇಬ್ಬರಿಗೂ ಧನ್ಯವಾದಗಳು
ಕವನ ಪೂರ್ತಿಗೊಳಿಸಿ - ಉತ್ತರಗಳು
ಸೂಚನೆ :ಇಲ್ಲಿ ಅಸ್ಪಷ್ಟ ಇರುವಿಕೆ ಎಂಬ ಪದವನ್ನು ಅಷ್ಟಾಗಿ ಜನರು ಗಮನಿಸಿಲ್ಲ ಇದರ ಅರ್ಥ ಯಾರೋ ಇರಬಹುದು ಅಥವಾ ಇಲ್ಲದಿರಬಹುದು ಎಂಬುದಾಗಿದೆ ಹಾಗೆ ನೋಡಿದಾಗ ಇರಬಹುದು ಎಂಬುದಕ್ಕೆ ನೀವೆಲ್ಲ ಬರೆದಂತೆ ಯಾರೋ ನಿಮಗೆ ಬೇಕಾದ ವ್ಯಕ್ತಿ ಇರಬಹುದು ಅದು ವ್ಯಕ್ತಿಯೇ ಅಲ್ಲದಿರಬಹುದು ಎಂಬುದು ಅಸ್ಪಷ್ಟ ಇರುವಿಕೆಯನ್ನು ಸೂಚಿಸುತ್ತದೆ ಅದು ಒಂದು ಪುತ್ತಳಿರಬಹುದು ಅಥವಾ ಕತ್ತಲಲ್ಲಿ ಯಾವುದೋ ಮರ ಆ ರೀತಿ ಕಂಡಿರಬಹುದು ಇನ್ನೂ ಅನೇಕ. ಅದಕ್ಕಾಗಿ ನನ್ನ ಈ ಸಣ್ಣ ಪದ್ಯ ಒಂದನ್ನು ಉದಾರಣೆಯಾಗಿ ಬರೆದಿದ್ದೇನೆ
ಪುಟ್ ಪಾತ್ ಹತ್ತಿ ಹೋದೆ "ಅವರ " ಬಳಿ
ಓ, ಇದು ಪ್ರಸಿದ್ಧ ನಿನಿಮಾ ನಟನ ಪುಥ್ಥಳಿ |
ಕರೆದಿದ್ದರೆನ್ನನ್ನೂ ಕೊಟ್ಟು ಆಹ್ವಾನ ಪತ್ರಿಕೆ
ಇದೇ ಪುಥ್ಥಳಿಯ ಅದ್ದೂರಿ ಅನಾವರಣಕೆ ||
ಜಾಸ್ತಿ ಆಗುತ್ತಿದೆ ಇತ್ತೀಚೆಗೆ ಮರೆವು
ಇದರ ಹತ್ತಿರವೇ ನಮ್ಮ ಮನೆ ತಿರುವು |
ಇದೋ ಬಂದಎಬಿಟ್ಟಿತು ವಿದ್ಯುದ್ದೀಪದ ಬೇಳಕು
ಸ್ಪಷ್ಟವಾಗಿ ಕಾಣುತ್ತಿದೆ ಈ ಪುತ್ಥಳಿಯ ಥಳುಕು ||
ಶ್ರೀಮತಿ ಸೌಮ್ಯ ನಾಗರಾಜ್
ಮನಸೊಂದು ಎರಡಾಯಿತೀಗ?
-ಯಾರೋ ಏನೋ ಈ ಕತ್ತಲಲ್ಲೇಕೆ ಉಸಾಬರಿ?
ಮನೆಯಲಿ ಹೆಂಡತಿ ಕಾಯುತಿಹಳು ಕೊಡಬೇಕು ತರಕಾರಿ. |
-ಯಾರ ಮನೆ ವೃದ್ಧರೋ ಏನೋ ಮಾಡೋಣ ಉಪಕಾರ
ತಂತಾನೇ ಹೆಜ್ಜೆಯ ಮುನ್ನಡೆಸಿತು ಸುಸಂಸ್ಕಾರ ||
ಬಳಿಸಾರಿ ಬಗ್ಗಿ ನೋಡಿದೆ ಮೊಬೈಲ್ ಬೆಳಕಿನಲಿ
ಓ! ನನ್ನಪ್ಪ ನಿಂತಿದ್ದರಲ್ಲಿ ಕೋಲಿನಾಸರೆಯಲಿ |
ಒಮ್ಮೆಲೆ ರೇಗಿದೆ- ಯಾಕಪ್ಪ ಬಂದಿರೀ ಕತ್ತಲಿಗೆ?
ತೆಪ್ಪಗಿರಬಾರದೇಕೆ ಮನೆಯ ಒಳಗೆ? ||
ನಕ್ಕು ನುಡಿದರು ಅವರು ಸಹಜ ಭಾವದಲಿ
ಮಗೂ, ನಾ ಬರಲಿಲ್ಲ ಬೆಳಕಿನಿಂದ ಕತ್ತಲೆಡೆಗೆ |
ಒಮ್ಮೊಮ್ಮೆ ಕತ್ತಲೆಯೇ ಬರುವುದು ನಾವಿದ್ದೆಡೆಗೆ
ಕತ್ತಲಲಿ ಮುಗ್ಗರಿಸದಿರುವುದೇ ಏಳಿಗೆ ||
ಕಾಯಬೇಕು ಮಗನೇ ಬೆಳಕು ಬರುವವರೆಗೆ
ಅಥವಾ ಕೈಹಿಡಿದು ನಡೆಸುವವ ಸಿಗುವವರೆಗೆ |
ಅಬ್ಬಾ ಎಂಥಾ ಅನುಭವದ ಅರ್ಥಗರ್ಭಿತ ಬಣ್ಣನೆ!
ಮೌನದಲಿ ಹೆಜ್ಜೆ ಹಾಕಿದೆ ಮನೆಯೆಡೆ ಅಪ್ಪನೊಡನೆ.||
ಶ್ರೀ ಎಸ್ ವಿಟ್ಟಲ್ ರಾವ್
೧....... ಅಂತ ಯೊತಿಸ್ತಿರುವಾಗಲೇ
ಎಲ್ಲಿ ಅವರ ಮನೆ, ದಾರಿಯಾವುದು|
ಮಾಡುವುದು ಏನೀಗಾ ಅಂತಿರುವಾಗ
ಬಂದನಾ ವ್ಯ-ಧನ ಮೊಮ್ಮಗ ಅಗಾ|| 1 ||
ಬನ್ನಿ ಹೋಗೋಹಾ ಒಟ್ಟಿಗೆ ಅಂದ
ಕೈಯಲಿ ಹಿಡಿದು ಬ್ಯಾಟರಿ ಒಂದಾ|
ಸಂತೋಷ ವಾಯಿತೆನಗೆ,
ಹೇಳಿದೆನು ಅವನಿಗೆ ಅಭಿನಂದನೆ|| 2||
ಹೊರಟರು ಅವರು ಅವರ ಮನೆಗೆ
ನಾನೂ ವಾಪಸ್ಸು ಹೋಗಲಾ ಮನೆಗೆ|
ಎಂದು ತೀರ್‌ಮಾನಿಸಿದೆ ಕೊನೆಗೆ
ಹೊರೆಟೆನು ಮನೆಗೆ ಮೊಬೈಲ್ ದೀಪದೊಂದಿಗೆ...|| 3 ||
ಕಾಯುತ್ತಿರುವಳು ನನ್ನಾಕೆ ಬಾಗಿಲಲ್ಲಿ,
ಘಾಬರಿಯಾಯಿತು ಮನದಲಿ |
ಆ ದೇವರ ನನೆದೆನು ತಕ್ಷಣದಲ್ಲಿ
ಬರಮಾಡಿಕೊಂಡಳು ನಗು ನಗುತ
ಮತ್ತೊಮ್ಮೆ ನೆನೆದೆನು ದೇವರನ್ನ..|| 4 ||
ಶ್ರೀಮತಿ ಲತಾ ಶಿವಕುಮಾರ್
ಅವರು ಯಾರೋ ತಿಳಿಯದು
ಅವರ ನೋವು ತಿಳಿಯದು
ಅವರನ್ನ ಕೇಳಿದರೆ ನೋವಾಗಬಹುದು
ಅವರ ಕಷ್ಟ ನೋವು ಏನಿರಬಹುದು...
ಅವರು ವಿಹಾರಕಾಗಿ ಬಂದಿರಬಹುದು
ಅವರ ಮನೆಯವರು ಇಲ್ಲೇ ಎಲ್ಲೋ ಇರಬಹುದು
ಅವರ್ಯಾರೋ ಗೌರವಾನ್ವಿತರಿರಬಹುದು
ಅವರ ಬಳಿ ಹೋಗಿ ವಿಚಾರಿಸಿ ನೋಡಬಹುದು...
ಪದ್ಯ ಪೂರ್ತಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು .
ಚಿತ್ರಕಲೆ : ಶ್ರೀ ಕೆ. ವಿ. ಜಯರಾಂ
ಬಿ ಸರೋಜಾದೇವಿ
ಪಂಡಿತ್ ಭೀಮಸೇನ್ ಜೋಶಿ
ಮುದ್ದು ನಾಯಿಮರಿ
ಶ್ರೀ ಶಿರಡಿ ಸಾಹಿಬಾಬ
ಸುದ್ದಿಗಳು
ಸುದ್ದಿಗಳು ನಮ್ಮ ಬಡಾವಣೆಯಲ್ಲಿ ಜುಲೈ 5 ನೇ ತಾರೀಕು ಶ್ರೀಮತಿ ಮಾಲತಿ ವೆಂಕಟೇಶ್ ಅವರು ಶ್ರೀನಿವಾಸ ಕಲ್ಯಾಣವನ್ನು ಏರ್ಪಡಿಸಿದ್ದರು. ಅದು ಬಹಳ ಸೊಗಸಾಗಿ ನಡೆಯಿತು. ನಂತರ ಎಲ್ಲರಿಗೂ ಮಹಾಪ್ರಸಾದ ವಿನಿಯೋಗ ಮಾಡಲಾಯಿತು.
Comments
Post a Comment