ಪ್ರತಿಭಾ ಪತ್ರಿಕೆ -ಡಿಸಂಬರ್ 2024
ಈ ಸಂಚಿಕೆಯಲ್ಲಿ
1) ಸಂಪಾದಕರ ಮಾತು
ಕೆಲವರು ಅದ್ಭುತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೀರಿ ಹಾಗೂ ಎಲ್ಲವನ್ನು ಓದುತ್ತಿದ್ದೀರಿ ಆದರೆ ಅನೇಕರು ಕಾಲಾವಕಾಶದ ಅಭಾವದಿಂದಲೂ ಏನೋ ಪೂರ್ತಿಯಾಗಿ ಮ್ಯಾಗ್ಜಿನ್ ಓದುತ್ತಿಲ್ಲ ದಯವಿಟ್ಟು ಓದಿ
ನೀವು, ಹೊಸ ರುಚಿ ನಿಮ್ಮ ಸಾಧನೆಗಳು ಇನ್ನಿತರ ಸಣ್ಣ ಕವನಗಳು ಹಾಸ್ಯ ಎಲ್ಲವನ್ನು ಬರೆದು ಕಳಿಸಬಹುದು ಆದರೆ ಅವೆಲ್ಲವೂ ನಿಮ್ಮ ಸ್ವಂತದ್ದೇ ಆಗಿರಬೇಕು ಎಲ್ಲಿಂದನೋ ನೋಡಿದ್ದು ಓದಿದ್ದು ಮಾತ್ರ ಕಳಿಸುವುದು ಬೇಡ. ಏನಾದರೂ ಬರೆದು ಕಳಿಸಿ ನಿಮ್ಮ ಸ್ನೇಹಿತರಿಗೂ ಈ ಲಿಂಕ್ ಗಳನ್ನು ಕಳಿಸಿ.
ಈ ಸಲ ಹೆಚ್ಚು ಮಾತಿಲ್ಲದ ಅಕ್ಷರಗಳೇ ಪ್ರಧಾನವಾದ ಸಂಚಿಕೆ ಆದ್ದರಿಂದ ಇವೆಲ್ಲವನ್ನು ಅಕ್ಷರಗಳಿಂದಲೇ ತುಂಬಿಸುತ್ತಿದ್ದೇನೆ.
ಈ ಸಲದ ಸ್ಪರ್ಧೆಯು ಉತ್ತಮವಾಗಿದ್ದು ನಮ್ಮೆಲ್ಲರಿಗೂ ಅನುಕೂಲಕರವಾಗಿ ಇರುವುದರಿಂದ ದಯವಿಟ್ಟು ಆದಷ್ಟು ಜನರು ನಿಮ್ಮ ಅಭಿಪ್ರಾಯಗಳನ್ನು ಬರೆದು ಕಳಿಸಿ. ಎಲ್ಲರಿಗೂ ಧನ್ಯವಾದಗಳು .
ಶ್ರೀಮತಿ ಮಂಜುಳಾ ವೆಂಕಟೇಶ ರಾವ್ ಅವರು ಸೆಂಪ್ಟಂಬರ್ ಹಾಗೂ ಅಕ್ಟೋಬರ್ ಸಂಚಿಕೆ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.
ನವೆಂಬರ್ ಸಂಚಿಕೆಯ ಉತ್ತರ ಹಾಗೂ ಬಹುಮಾನ ಈ ಕೆಳಗೆ ತಿಳಿಸಲಾಗಿದೆ.
2)ಪದಬಂಧ ಸ್ಪರ್ಧೆಯ ಉತ್ತರ
ನವೆಂಬರ್ ಸಂಚಿಕೆಯ ಪದಬಂಧ ಸ್ಪರ್ಧೆಗೆ ಐದು ಜನ ಉತ್ತರಗಳನ್ನು ಕಳಿಸಿದ್ದಾರೆ ಬಹಳ ಕಷ್ಟಪಟ್ಟು ಚೆನ್ನಾಗಿ ಬರೆದಿದ್ದೀರಿ ಮೊದಲಿಗೆ 39 ಅದ್ಭುತ ಪದಬಂಧಗಳನ್ನು ಕಳಿಸಿರುವ ಡಾಕ್ಟರ್ ಎ ಎಸ್ ಚಂದ್ರಶೇಖರ್ ರಾವ್ ಅವರಿಗೆ ಪ್ರಥಮ ಬಹುಮಾನ ಬಂದಿದೆ.
ಅವರು ಎಷ್ಟು ಅದ್ಭುತವಾಗಿ ಬರೆದಿದ್ದಾರೆ ಎಂಬುದನ್ನು ನೀವೇ ನೋಡಿ ಇದರಲ್ಲಿ ಡಯಾಗನಲ್ ನಲ್ಲೂ ಅರ್ಥ ಬರುವ ಹಾಗೆ ಬರೆದಿದ್ದಾರೆ ಇವೇ ಸುಮಾರು ಏಳು ಇವೆ. ಅವರೆ ಬರೆದ ಒಂದು ಸಂರಿಸು ಅನ್ನೋದನ್ನ ಬಿಟ್ಟು, ರೆಡ್ಡರ್ ಮಾರ್ಕ್ ಹಾಕಿರುವಂತಹ ಡಯಾಗನಲ್ ಪದಗಳನ್ನ ತಗೊಂಡಿದ್ದೇನೆ. ಒಂದು ಡಯಾಗನಲ್ ಪದ ಇರೋದು ಮಾಡಿದರೆ ಅದು ಎರಡು ಲೆಕ್ಕ ಅಂತ ಹೇಳಿದ್ದೇನೆ ಹೀಗಾಗಿ ಅವರು ಒಟ್ಟು 39 ಸೆಟ್ಟುಗಳನ್ನು ಮಾಡಿದ್ದಾರೆ ಎಷ್ಟು ವೈವಿಧ್ಯಮಯವಾದ ಪದಗಳನ್ನು ಹಾಕಿದ್ದಾರೆ ಹಾಗೂ ಕೆಳಗಡೆ ಪ್ರತಿಪುಟದಲ್ಲಿ ಕಷ್ಟದ ಪದಗಳಿಗೆ ಅವರೇ ಅದರ ಅರ್ಥವನ್ನು ಬರೆದಿದ್ದಾರೆ. ಇವರಿಗೆ ಎಲ್ಲರ ಪರವಾಗಿ ಧನ್ಯವಾದಗಳು.
ಇದು ತುಂಬಾ ಕಷ್ಟ ಇದ್ದಿದ್ದರಿಂದ ದ್ವಿತೀಯ ಬಹುಮಾನವನ್ನು ಕೊಡುತ್ತಿದ್ದೇನೆ .
20 ಸೆಟ್ಟುಗಳನ್ನು ಮಾಡಿರುವ ಶ್ರೀಮತಿ ಏ ಸುಬ್ಬಲಕ್ಷ್ಮಿ ಅವರಿಗೆ ದ್ವಿತೀಯ ಬಹುಮಾನ ಬಂದಿದೆ. ಇವರು ತುಂಬಾ ಅಚ್ಚುಕಟ್ಟಾಗಿ ಪದಗಳನ್ನ ಬರೆದು ಕಳಿಸಿದ್ದಾರೆ.
ಇವರಿಗೂ ನಿಮ್ಮೆಲ್ಲರ ಪರವಾಗಿ ಅಭಿನಂದನೆಗಳು.
ಶ್ರೀಮತಿ ರಾಜೇಶ್ವರಿ ನಾಗರಾಜ್ 15 ಸೆಟ್ ಮಾಡಿದ್ದಾರೆ
ಡಾಕ್ಟರ್ ಮಂಜುಳಾ ವೆಂಕಟೇಶ್ ರಾವ್ 10 ಸೆಟ್ ಮಾಡಿದ್ದಾರೆ
ಹಾಗೂ ಶ್ರೀಮತಿ ಸೌಮ್ಯ ನಾಗರಾಜ್ ಅವರು 10 ಸೆಟ್ ಮಾಡಿದ್ದಾರೆ
ಇವರೆಲ್ಲಾರಿಗೂ ಎಲ್ಲರಪರವಾಗಿ ಅಭಿನಂದನೆಗಳು.
ಇಂತಹ ಸ್ಪರ್ಧೆಗಳಲ್ಲಿ ನಿಮ್ಮ ಕೌಶಲ್ಯ ಪ್ರದರ್ಶನಕ್ಕೆ ಅದ್ಭುತ ಅವಕಾಶ ಇರುತ್ತದೆ.
ಉದಾಹರಣೆಗೆ
- ನೀವು ಬರೀ ಎಲ್ಲಾ ಅಕ್ಷರಕ್ಕೂ ಕೊಂಬಿರುವುದು ಮಾಡಬಹುದಿತ್ತು
- ನೀವು ಬರೀ ಎಲ್ಲಾ ಅಕ್ಷರಕ್ಕೂ ಗುಡಿಸು ಅಥವಾ ಎತ್ವ ಇರುವಂತೆ ಮಾಡಬಹುದಿತ್ತು
- ನೀವು ಬರೀ ಊರು ಹೆಸರುಗಳು , ಅಥವಾ ಹೂ ಗಿಡ , ಜನರ ಹೆಸರೇ ಇರುವ ಸೆಟ್ ಮಾಡಬಹುದಿತ್ತು
- ಹೀಗೆಯೇ ಇನ್ನೂ ಅನೇಕ ..
ಇದರ ಭಾಗವಾಗಿಯೇ ಇನ್ನೊಂದನ್ನು ಪ್ರಯತ್ನಿಸಿ ನಿಮ್ಮ ಮೆದುಳಿಗೆ ಕಸರತ್ತು. ಪೆನ್ಸಿಲ್ ರಬ್ಬರ್ ಉಪಯೋಗಿಸದೆಲೆ ಮಾಡುವ ಸುಲಭ ಮಾದರಿಯನ್ನು ಹೇಳುತ್ತೇನೆ.
ಎಡದಿಂದ ಬಲಕ್ಕೆ ಓದಿದರೂ ಅರ್ಥ ಬರಬೇಕು ಬಲದಿಂದ ಎಡಕ್ಕೆ ಓದಿದ್ದರು ಅರ್ಥ ಬರಬೇಕು ಮೂರು ಪದ ಇರಬೇಕು ಯಾವುದೇ ಅಕ್ಷರಗಳು ಎರಡು ಬಾರಿ ಬರಬಾರದು.
ಉದಾಹರಣೆಯನ್ನು ಹಾಸ್ಯಮಯವಾಗಿ ಹೇಳಬೇಕಾದರೆ ನೀವು ಕಿಟಕಿಯಲ್ಲಿ ನೋಡುವಂತಿಲ್ಲ ಗದಗಕ್ಕೆ ಹೋಗುವಂತಿಲ್ಲ ಚಮಚ ತೆಗೆಯುವಂತಿಲ್ಲ ಸಮೋಸ ತಿನ್ನುವಂತಿಲ್ಲ! ( ಅಂದರೆ ಈ ರೀತಿ ಪದಗಳನ್ನು ಮಾಡುವಂತಿಲ್ಲ) ಏಕೆಂದರೆ ಇಂತಹ ನೂರಾರು ಪದಗಳು ಎಲ್ಲರಿಗೂ ತಿಳಿದಿದೆ ಮೊದಲ ಅಕ್ಷರ ಕೊನೆಯ ಅಕ್ಷರ ಒಂದೇ ಆದ ಅನೇಕ ಪದಗಳು ಎರಡು ಕಡೆಯಿಂದ ಅರ್ಥ ಬರುವಂತಿರುತ್ತದೆ. ಅದು ಬಿಟ್ಟು ನೀವು ಮಾಡಬೇಕು ಪ್ರಯತ್ನಿಸಿ . ಉದಾಹರಣೆಗೆ
ಕವನ
ಬಲದಿಂದ ಎಡಕ್ಕೆ ಓದಿದರೆ ನವಕ, ಎಂದರೆ 9 ಅಕ್ಷರಗಳ ಪದ್ಯ. ಹೀಗೆ ಅದಕ್ಕೂ ಅರ್ಥವಿದೆ.
ಇದು ಸ್ಪರ್ಧೆಯಲ್ಲ ಸುಮ್ಮನೆ ನಿಮ್ಮ ಮೆದುಳಿನ ಕಸರತ್ತಿಗಾಗಿ. ನೀವು ಬರೆದು ಕಳಿಸಿದ್ದನ್ನು ನಿಮ್ಮ ಹೆಸರು ಸಮೇತ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇನೆ.
3)ಮುಂದಿನ ಸಂಚಿಕೆಯ ಸ್ಪರ್ಧೆ
ಸ್ಪರ್ಧಾ ವಿಷಯ: ನಾವು ಬಳಸಿದ, ನಮಗೆ ಬೇಡವಾದ ವಸ್ತುಗಳನ್ನು ಮಾರುವುದು ಹೇಗೆ ?
ಮೇಲಿನ ವಿಡಿಯೋ ಪೂರ್ತಿ ಗಮನವಿಟ್ಟು ಕೇಳಿದನತರ ಉತ್ತರಗಳ ಬಗ್ಗೆ ಯೋಚನೆಮಾಡಿ.
4)ಈ ಸಂಚಿಕೆಯ ವಿಶೇಷ ವ್ಯಕ್ತಿ
ಇದು ಕೇಕು |
ದಂತ ವೈದ್ಯರಿಗಾಗಿ ಮಾಡಿದ್ದು |
ಅಮ್ಮನ ಹುಟ್ಟುಹಬ್ಬಕ್ಕೆ - ಮುಖದ ಭಾವನೆ ನೋಡಿ |
ಇದು ಸೀರೆಯಲ್ಲ್ಲ! ಕೇಕು . ಮೊಗ್ಗು, ಒಡವೆಯೂ ಕೇಕು! |
ಬಳೆಯಲ್ಲ , ಇದೂ ಕೇಕು |
ತೊಟ್ಟಿಲು ಶಾಸ್ತ್ರಕ್ಕೆ - ಮಗು, ತೊಟ್ಟಿಲೂ ಕೇಕು. |
ಇವರು ಸುಮ್ಮನೆ ಕೇಕು ಮಾಡುವುದಿಲ್ಲ. ಮನಸಿನ ಭಾವನೆಯನ್ನು ಕೇಕ್ ನಲ್ಲಿ ಬಿಂಬಿಸುತ್ತಾರೆ ಎಂಬುದಕ್ಕೆ ಈ ಕೆಳಗಿರುವ 2 ಚಿತ್ರ ನೋಡಿ.
50 ನೇ ವಿವಾಹವಾರ್ಷಿಕೋತ್ಸವಾದಲ್ಲೇ ಮುಖ ಗಂಟುಹಾಕಿ ಕೂತಿರುವ ನಗರದ ದಂಪತಿಗಳು. |
ಕ್ರಿಕೆಟ್ ಆಡುವವರಿಗೆ ಮಾಡಿರುವುದು. |
ಟ್ರಾಫಿಕ್ ಪೊಲೀಸಿನವರ ಹುಟ್ಟುಹಬ್ಬಕ್ಕೆ |
ಟಪ್ಪರ್ ವೇರ್ ಮಾರುವವರಿಗೆ |
ಅದ್ಭುತ ಕೇಕ್ |
ಲಾಯರ್ ಗಾಗಿ |
ವೈದ್ಯರಿಗಾಗಿ- ಸ್ಟೇತೋ ಸ್ಕೋಪ್ ಸಹಿತ ಎಲ್ಲವೂ ಕೇಕ್ |
ಕೆಲವು ವಿಶೇಷ ಕೇಕ್ ಗಳನ್ನು ವಿಡಿಯೋ ಮೂಲಕ ಕೊಡಲಾಗಿದೆ.
ಆಹಾರ ತಯಾರಿಕೆಯಲ್ಲಿ :
- ವೀಣೆ,
- ಲಘು ಸಂಗೀತ,
- ಡ್ರಾಯಿಂಗ್,
- ಪೇಂಟಿಂಗ್,
- ಪಾಟ್ ಮೇಕಿಂಗ್,
- ಡೆಕೋ ಪಾಟ್ ಪೇಂಟಿಂಗ್,
- ಹೂವಿನ ಜೋಡಣೆ,
- ಪೂನಾ ರಂಗೋಲಿ,
- ತರಕಾರಿ ಕೆತ್ತನೆ,
- ನಿಬ್ ಪೇಂಟಿಂಗ್,
- ಎಂಬಾಸಿಂಗ್,
- ಕ್ಯಾನ್ವಾಸ್ ಬೋರ್ಡ್ ಪೇಂಟಿಂಗ್ಸ್,
- ಸೋಲಾರ್ ವುಡ್ ವರ್ಕ್ಸ್,
- ಲೇಸ್ ಗೊಂಬೆಗಳನ್ನು ಕಲಿತಿದ್ದೇನೆಹಾಕುವುದು . ,
- ಕುಂದನ್ ಚೌಕಟ್ಟುಗಳು,
- ಉಡುಗೊರೆ ಪ್ಯಾಕಿಂಗ್ .
5) ಲೇಖನಗಳು
i) ಪ್ರವಾಸ:
ಲೇಖಕರು : ಜಯರಾಂ ಎ ಎಸ್ii) ಹಾಡಿರುವವರು ಯಾರು ? ಕಂಡುಹಿಡಿಯಿರಿ !
ಲೇಖಕರು : ಜಯರಾಂ ಎ ಎಸ್
iii ) ಮುದ್ದು ಮಕ್ಕಳ ಮುಗ್ಧ ಮನ ಭಾಗ 5.
ಲೇಖಕರು: ಡಾ|| ಎ ಎಸ್ ಚಂದ್ರಶೇಖರ್ ರಾವ್ಚೀಟಿ ಇದ್ದದ್ದು ಹಾಲು ಹೇಗೆ ಆಗುತ್ತೆ ?
ಮುಂಗಡ ಹಣ ಕೊಟ್ಟು ಹಾಲಿನ ನಿಂದ ಹಾಲಿನ ಚೀಟಿ ಖರೀದಿಸಿ ರಾತ್ರಿ ಒಂದು ಪಾತ್ರೆಯಲ್ಲಿ ಹಾಲಿನ ಚೀಟಿ ಇಡುತ್ತಿದ್ದೆವು. ಬೆಳಗಿನ ಜಾವ ಹಾಲಿನವನ ಬಂದು ಚೀಟಿ ತೆಗೆದುಕೊಂಡು ಹಾಲಿನ ಪ್ಯಾಕೆಟ್ ಇಡುತ್ತಿದ್ದ ಇದನ್ನು ಪ್ರತಿಸಲ ಇದನ್ನು ಗಮನಿಸುತ್ತಿದ್ದ ನನ್ನ ಮೊಮ್ಮಗ ಸಮರ್ಥ ಆಗ ಮೂರುವರೆ ವರ್ಷದವನಾಗಿದ್ದ ಅವನು ಅಮ್ಮನನ್ನು ಕೇಳಿದ ನಮ್ಮ ರಾತ್ರಿ ಚೀಟಿ ಇಟ್ಟರೆ ಅದು ಬೆಳಗ್ಗೆ ಹೊತ್ತಿಗೆ ಹೇಗೆ ಹಾಲಿನ ಪ್ಯಾಕೆಟ್ ಆಗುತ್ತದೆ ಅವನ ಮುಗ್ದತೆಗೆ ನಾವೆಲ್ಲ ನಕ್ಕೆವು.
iv ) ಕವನ : ಲೇಖಕರು: ಡಾ|| ಮಂಜುಳಾ ವೆಂಕಟೇಶ ರಾವ್
ಹನಿಗವನ
ನಿಸರ್ಗದಲಿ ಮನ ಒಂದಾಗೆ
ಕಪಿಯೂ ಆಗುವನು ಕವಿಯು.
ಮೌನಕೆ ಮನ ಶರಣಾಗೆ,
ಕಪಿಯೂ ಆಗುವನು ಕವಿಯು.
ಮೌನಕೆ ಮನ ಶರಣಾಗೆ,
ಚಿಮ್ಮುವುದು ಆನಂದದ ರಸಗಂಗೆ ಅಂತರಾಳದಿಂದ.
6) ನೀವೆಷ್ಟು ಚುರುಕು?
ನೀವೆಷ್ಟು ಚಿರುಕು ಇದು ನಿಮಗಾಗಿ ನಾನೇ ಮಾಡಿರುವ ಒಂದು ಆಟ ಸ್ಟಾರ್ಟ್ ಬಟನ್ ಒತ್ತಿದರೆ ಆ ಸಣ್ಣ ಗೋಲಿ ಆಕಾರ ಚಲಿಸುತ್ತದೆ ಅದು ಅಲ್ಲಿರುವ ಒಂದು ಸರ್ಕಲ್ನೊಳಗೆ ಬಂದು ನಿಲ್ಲಿಸುವಂತೆ ನೀವು ಮಾಡಬೇಕು ನಿಲ್ಲಿಸಬೇಕಾದರೆ ಸ್ಟಾಪ್ ಬಟನ್ ಒತ್ತಬೇಕು ಸುಮಾರು ಐದು ಸಲ ಪ್ರಯತ್ನಿಸಿದರೆ ನೀವು ಎಷ್ಟು ಸಲ ಅದರೊಳಗೆ ಆ ಗೋಲಿಯಕಾರದ ಒಂದು ನಿಲ್ಲಿಸುತ್ತೀರಿ ನೋಡೋಣ ಇದು ಸ್ಪರ್ಧೆಯಲ್ಲ ದಿನವೂ ಇದನ್ನು ಮಾಡಿದರೆ ನಿಮಗೆ ದೇಹ ಮತ್ತು ಮನಸ್ಸು ಎರಡು ಚುಳುಕುಗೊಳ್ಳುತ್ತದೆ.
ಮೊದಮೊದಲು ಕೆಲವು ದಿನಗಳು ನಿಮಗೆ ಒಂದು ಸಾರಿಯೂ ಅದರೊಳಗೆ ಹಾಕಲು ಆಗದಿರ ಬಹುದು ಕ್ರಮೇಣ ಎರಡು ಮೂರು ದಿನಗಳ ನಂತರ ನಿಮಗೆ ಆಶ್ಚರ್ಯಪಡುವ ರೀತಿಯಲ್ಲಿ ಅದನ್ನು ಚುರುಕಾಗಿ ಮಾಡಿ ಮುಗಿಸುತ್ತೀರಿ.
7)ಬಡಾವಣೆ ಹಾಗೂ ಸುತ್ತಮುತ್ತಲ ಸುದ್ದಿಗಳು .
ನರಸಿಹಸ್ವಾಮಿ ದೇವಸ್ಥಾನ ಪೂಜೆಪ್ರತಿವರ್ಷದಂತೆ ಈ ವರ್ಷವೂ , ನಮ್ಮ ಬಡಾವಣೆಯ ವತಿಯಿಂದ, ಅತ್ತಿಗುಪ್ಪೆಯ ಶ್ರೀ ನರಸಿಂಹಸ್ವಾಮಿ ದೇವರಿಗೆ ಪೂಜೆ, ಮಂಗಳಾರತಿ ನಡೆಯಿತು.
ನಮ್ಮ ಸಂಘದ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಶೆಟ್ಟಿಯವರು ಇನ್ನೂ ರೇಪೇರಿಯಾಗದ ನಮ್ಮ ಬಡಾವಣೆಯ ರಸ್ತೆಗಳ ಚಿತ್ರ ತೆಗೆದು , ಮುದ್ರಿಸಿ, ಅದರ ಚಿತ್ರಗಳ ಸಮೇತ bbmp ಅಧಿಕಾರಿಗಳಿಗೆ , ಉಪಮುಖ್ಯಮತ್ರಿಗಳಿಗೆ, ಎಮೆಲ್ಎ ಅವರಿಗೆ ಪೋಸ್ಟ್ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ನಿಮ್ಮೆಲ್ಲರ ಪರವಾಗಿ ಧನ್ಯವಾದಗಳು.
ನಮ್ಮ ಬಡಾವಣೆಯ ಕುಮಾರಿ ದಿಶಾ ಪುರಾಣಿಕ್ ಚಿತ್ರಲಹರಿ ಕಾರ್ಯಕ್ರಮದಲ್ಲಿ ಹಾಡಿದ ಒಂದು ತುಣುಕು
ವಿಡಿಯಾ ಬಡಾವಣೆಯಲ್ಲಿ ಕಾರ್ತೀಕದೀಪ, 25 ವರ್ಷದ ಹೋಮ
ಅದೇ ದೇವಸ್ತಾನಸದಲ್ಲಿ, 25/11/2024 ರಂದು, ನಮ್ಮ ಬಡಾವಣೆಯ ಕುಮಾರಿ ಸೌಮ್ಯ ಅವರಿಂದ ನಾಟ್ಯ ಕಾರ್ಯಕ್ರಮ ಇತ್ತು..
ಇದೇರೀತಿ , ಎನ್ ಆರ್ ಕಾಲೋನಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲೂ ದೀಪೋತ್ಸವ ಕಾರ್ಯಕ್ರಮ ಇತ್ತು .
ನಮ್ಮ ಸಂಘದ ಸದಸ್ಯೆ ಶ್ರೀಮತಿ ಸಂಧ್ಯಾ ಜಯರಾಂ ಅವರು , ಮಳಿಯ ಸಂಸ್ಥೆ ಯವರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸಿದ್ದರು.
ನಮ್ಮ ಬಡಾವಣೆಯ ತಿಂಗಳ ಕಾರ್ಯಕ್ರಮ ದಲ್ಲಿ , ಶ್ರೀಮತಿ ಸುಮನಾ ಲಕ್ಕೂರ್ ಅವರು ಹಣ ವುಳಿತಾಯ ಹಾಗೂ ಮೋದಿ ಕೇರ್ ಪ್ರಾಡಕ್ಟ್ ಬಗ್ಗೆ ಮಾತನಾಡಿದರು.
ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ,ನಮ್ಮ ಸಂಘದ ಉಪಾದಯಕ್ಷರಾದ ಶ್ರೀ K ಜಯರಾಂ ಅವರು, "ಕನ್ನಡ ಪುಸ್ತಕ ಪ್ರಾಧಿಕಾರ " ದ 50 ನೇ ವಾರ್ಷಿಕೋತ್ಸವಕ್ಕೆ " ವಿಜ್ಞಾನ-ತಂತ್ರಜ್ಞಾನ - ಕೈಗಾರಿಕೆ " ಎಂಬ ಕನ್ನಡ ಪುಸ್ತಕ ಬರೆದು ಕೊಟ್ಟಿದ್ದಾರೆ.
ನಮ್ಮ ಬಡಾವಣೆಯ ಕುಮಾರಿ ದಿಶಾ ಪುರಾಣಿಕ್ ಚಿತ್ರಲಹರಿ ಕಾರ್ಯಕ್ರಮದಲ್ಲಿ ಹಾಡಿದ ಒಂದು ತುಣುಕು
ಅವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಹಾಡಿದರು.
ಅದೇ ದೇವಸ್ತಾನಸದಲ್ಲಿ, 25/11/2024 ರಂದು, ನಮ್ಮ ಬಡಾವಣೆಯ ಕುಮಾರಿ ಸೌಮ್ಯ ಅವರಿಂದ ನಾಟ್ಯ ಕಾರ್ಯಕ್ರಮ ಇತ್ತು..
"ಕನ್ನಡ ಪುಸ್ತಕ ಪ್ರಾಧಿಕಾರ " , ಈ ಸಂಧರಬಹದಲ್ಲಿ ಇವರಿಗೆ ಸನ್ಮಾನ ಮಾಡಿತು.
.
ದೊಡ್ಡಗಣೇಶನಿಗೆ ಕಡಲೇಕಾಯಿ ಅಭಿಷೇಕ ಬಸವನ ಗುಡಿಯ ದೊಡ್ಡ ಗಣೇಶನಿಗೆ, ಕಡಲೇಕಾಯಿ ಪರಿಷೆ ಪ್ರಯುಕ್ತ " ಕಡಲೇಕಾಯಿ ಅಭಿಷೇಕ " ಮಾಡಲಲಾಯಿತು.
ಇವರಿಗೆ ನಿಮ್ಮೆಲ್ಲರ ಪರವಾಗಿ ಅಭಿನಂದನೆಗಳು.
ವಿಶೇಷ ಸುದ್ದಿಗಳು
ಶ್ರೀ ಎಸ್ ವಿಟ್ಟಲ್ ರಾವ್ ಅವರಿಂದ ಹೊಸ ಏಣಿ-ಕುರ್ಚಿ ಯ ತಯಾರು
ಅವರಿಗೆ ನಿಮ್ಮೆಲರ ಪರವಾಗಿ ಅಭಿನಂದನೆಗಳು.
ವಿಚಿತ್ರ ಸೈಕ್ಲೋನ್
ಅರಬ್ಬೀ ಸಮುದ್ರ ಅಥವಾ ಬಂಗಾಳ ಕೊಳ್ಳಿಯಲ್ಲಿ ವಾಯುಭಯರ ಕುಸಿತವಾಗಿ ಬರುವ ಎಲ್ಲಾ ಸೈಕ್ಲೋನ್ ಗಳೂ ಚೆನ್ನೈ ಅಥವಾ ಕೇರಳ ತಲುಪಿದ ಮೇಲೆ ಉತ್ತರಭರತಡಕಡೆ ಹೋಗುತ್ತದೆ. ಆದರೆ ಈಗ ಬಂದಿರುವ ಸೈಕ್ಲೋನ್ ಮಾತ್ರ ಚೆನ್ನೈ ನಂತರ ಬೆಂಗಳೂರಿನ ಮೇಲೆ ಬಂದು , ಕೇರಳ ದಾಟಿ ಮತ್ತೆ ಸಮುದ್ರಕ್ಕೆ ಹೋಗುತ್ತಿದೆ. ಇದರಿಂದ ನಮ್ಮ ನಗರದಲ್ಲೂ 2 ದಿನ ಹಚ್ಚು ಮಳೆಯಾಗಲಿದೆ.
8) ಒಂದು ವಜ್ರದ ಕಥೆ ಭಾಗ 4
9) ನಿಮ್ಮ ಅಭಿಪ್ರಾಯಗಳು
ಡಾ|| ಎ ಎಸ್ ಚಂದ್ರಶೇಖರ ರಾವ್. -- ಪದಭಂದದ ಬಗ್ಗೆ
1) ಈ ಬಗೆಯ ಪದಬಂಧ ಬುದ್ಧಿ ವಿಕಾಸಕ್ಕೆ ಸಹಾಯವಾಗುತ್ತದೆ ಇದನ್ನು ಸೃಷ್ಟಿಸಿದ ಸಂಪಾದಕರಿಗೆ ಧನ್ಯವಾದಗಳು
2) ಕನ್ನಡದ ಶಬ್ದ ಸಂಪದ ಕೃತಿಯಾಗುತ್ತದೆ
3) ನಾನು 32 ಪದಬಂಧ ಕಳಿಸಿದ್ದೇನೆ
4) ಅನೇಕ ಶಬ್ದಗಳು ಕನ್ನಡ ನಿಘಂಟಿನಿಂದ ಬಳಕೆಯಾಗಿವೆ
5) ನಿಘಂಟಿನಲ್ಲಿ ಇಲ್ಲದ ಮತ್ತು ಆಡು ಮಾತಿನ ಪದಗಳನ್ನು ಬಳಸಲಾಗಿದೆ ಇದರ ಯುಕ್ತಾಯುಕ್ತತೆಯನ್ನು ನಿಮ್ಮ ವಿವೇಚನೆಗೆ ಬಿಟ್ಟದ್ದು
6) ನಮ್ಮ ಮನೆಗಳ ಹೆಸರುಗಳು ದೇವರ ಹೆಸರುಗಳು ಕೆಲವು ವ್ಯಕ್ತಿಗಳ ಹೆಸರುಗಳು ಇವುಗಳನ್ನು ಪದಬಂಧದಲ್ಲಿ ಬಳಸಲಾಗಿದೆ ಇದು ವಿಶೇಷತೆ
7) ಮೂಲೆ ಪದಗಳು ಅರ್ಥವತ್ತಾಗಿದ್ದಲ್ಲಿ ಬಾಣದಿಂದ ಗುರುತು ಮಾಡಲಾಗಿದೆ
8) ಕಪ್ಪೇನಾದರೂ ಇದ್ದಲ್ಲಿ ಕ್ಷಮೆ ಇರಲಿ
9) ಮತ್ತೊಮ್ಮೆ ಸಂಪಾದಕರಿಗೆ ಧನ್ಯವಾದಗಳು
2) ಕನ್ನಡದ ಶಬ್ದ ಸಂಪದ ಕೃತಿಯಾಗುತ್ತದೆ
3) ನಾನು 32 ಪದಬಂಧ ಕಳಿಸಿದ್ದೇನೆ
4) ಅನೇಕ ಶಬ್ದಗಳು ಕನ್ನಡ ನಿಘಂಟಿನಿಂದ ಬಳಕೆಯಾಗಿವೆ
5) ನಿಘಂಟಿನಲ್ಲಿ ಇಲ್ಲದ ಮತ್ತು ಆಡು ಮಾತಿನ ಪದಗಳನ್ನು ಬಳಸಲಾಗಿದೆ ಇದರ ಯುಕ್ತಾಯುಕ್ತತೆಯನ್ನು ನಿಮ್ಮ ವಿವೇಚನೆಗೆ ಬಿಟ್ಟದ್ದು
6) ನಮ್ಮ ಮನೆಗಳ ಹೆಸರುಗಳು ದೇವರ ಹೆಸರುಗಳು ಕೆಲವು ವ್ಯಕ್ತಿಗಳ ಹೆಸರುಗಳು ಇವುಗಳನ್ನು ಪದಬಂಧದಲ್ಲಿ ಬಳಸಲಾಗಿದೆ ಇದು ವಿಶೇಷತೆ
7) ಮೂಲೆ ಪದಗಳು ಅರ್ಥವತ್ತಾಗಿದ್ದಲ್ಲಿ ಬಾಣದಿಂದ ಗುರುತು ಮಾಡಲಾಗಿದೆ
8) ಕಪ್ಪೇನಾದರೂ ಇದ್ದಲ್ಲಿ ಕ್ಷಮೆ ಇರಲಿ
9) ಮತ್ತೊಮ್ಮೆ ಸಂಪಾದಕರಿಗೆ ಧನ್ಯವಾದಗಳು
ಕೆ ವಿ ಜಯರಾಮ್
- ಆತ್ಮೀಯ ಸಂಪಾದಕರೇ, ನವೆಂಬರ್ ಪತ್ರಿಕೆ ವಿಚಾರವು ತುಂಬಾ ಚೆನ್ನಾಗಿ ಬಂದಿದೆ. ವಿಷಯವನ್ನು ತ್ವರಿತವಾಗಿ ಓದಲು ಮತ್ತು ಗ್ರಹಿಸಲು ವೀಡಿಯೊ ಸ್ವರೂಪವು ಆರಾಮದಾಯಕವಾಗಿದೆ ಎಂದು ನಾನು ಸಂಪಾದಕರೊಂದಿಗೆ ಒಪ್ಪುತ್ತೇನೆ. ಈ ನಾವೀನ್ಯತೆಯ ಸಂಪಾದಕರಿಗೆ ಅಭಿನಂದನೆಗಳು.
- ನನ್ನನ್ನು ತಿಂಗಳ ವ್ಯಕ್ತಿಯಾಗಿ ತೋರಿಸಿದ್ದಕ್ಕಾಗಿ ನಾನು ಸಂಪಾದಕರಿಗೆ ಧನ್ಯವಾದ ಹೇಳುತ್ತೇನೆ. ವೃತ್ತಿಪರ ಇಂಜಿನಿಯರ್ ಆಗಿ ನನ್ನ ಜೀವನದಲ್ಲಿ ತೆರೆದುಕೊಂಡ ಘಟನೆಗಳನ್ನು ಮತ್ತು ಸಮಾಜ ಸೇವಕನಾಗಿ ಲೇಔಟ್‌ಗೆ ನಾನು ನೀಡಿದ ಕೊಡುಗೆಗಳನ್ನು ಅವರು ವರ್ಣರಂಜಿತವಾಗಿ ಪ್ರಸ್ತುತಪಡಿಸಿದ್ದಾರೆ ಮತ್ತು ನನ್ನ ಹವ್ಯಾಸಗಳನ್ನು ಶ್ಲಾಘಿಸಿದ್ದಾರೆ. ಈ ಗೌರವಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ.
- ಜನರು ವೈದ್ಯಕೀಯ ದೃಷ್ಟಿಕೋನದಿಂದ ಹೇಗೆ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಇಂದಿನ ಪ್ರಪಂಚದ ಎಲ್ಲಾ ವೃತ್ತಿಗಳಲ್ಲಿ ಸಾಮಾನ್ಯ ಲಕ್ಷಣವಾಗಿರುವ ಅತಿಯಾದ ಕೆಲಸದಿಂದ ಉಂಟಾಗುವ ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಡಾ ಮಂಜುಳಾ ವೆಂಕಟೇಶ್ ಸುಂದರವಾಗಿ ವಿವರಿಸಿದರು.
- ಪ್ರವಾಸ ಕಥನ: ಪ್ರೊ.ಜಯರಾಂ ಅವರು ತಮ್ಮ ಸೂಕ್ಷ್ಮ ಅವಲೋಕನಗಳೊಂದಿಗೆ ತಮ್ಮ ಅಮೇರಿಕಾ, ದುಬೈ ಮುಂತಾದ ಪ್ರವಾಸಗಳ ಅನುಭವಗಳನ್ನು ನೀಡುತ್ತಿದ್ದಾರೆ. ಹೆಚ್ಚಿನ ಪ್ರಯಾಣಿಕರು ವಿವರಗಳು, ಇತಿಹಾಸ, ಬಗ್ಗೆ ಹೆಚ್ಚು ಗಮನ ಹರಿಸದೆ ಕೇವಲ ಛಾಯಾಚಿತ್ರಗಳನ್ನು ತೆಗೆಸಿಕೊಂಡು ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಲು ಆಸಕ್ತರಾಗಿರುತ್ತಾರೆ. ಆರ್ಕಿಟೆಕ್ಚರ್ ಇತ್ಯಾದಿ. ಆದಾಗ್ಯೂ, ಶ್ರೀ ಜಯರಾಮ್ ಅವರು ನಮ್ಮ ಬಡಾವಣೆಯ ನಿವಾಸಿಗಳನ್ನು ಒಳಗೊಂಡಿರುವ ಅವರ ಕುಟುಂಬಕ್ಕೆ ಕಾಮೆಂಟರಿ ಮತ್ತು ಫೋಟೋ ಆಲ್ಬಮ್‌ಗಳೊಂದಿಗೆ ವೀಡಿಯೊಗಳನ್ನು ಮಾತ್ರ ಮಾಡುತ್ತಿಲ್ಲ ಆದರೆ ಅವರ ಪ್ರಯಾಣವನ್ನು ಸಾಮಾನ್ಯ ಜನರಿಗೆ ಸ್ಪೂರ್ತಿದಾಯಕ ಮತ್ತು ಶಿಕ್ಷಣವನ್ನು ನೀಡುತ್ತಿದ್ದಾರೆ.
- ದಸರಾ ಗೊಂಬೆಗಳ ಪ್ರದರ್ಶನದ ವೀಡಿಯೋ: ಹಲವಾರು ಥೀಮ್‌ಗಳಿರುವ ಗೊಂಬೆಗಳ ಅದ್ಭುತ ಪ್ರದರ್ಶನವನ್ನು ಮಾಡುವ ಮತ್ತು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸುವ ಅನೇಕ ಪ್ರತಿಭಾವಂತ ಮಹಿಳೆಯರು ನಮ್ಮ ಬಡಾವಣೆಯಲ್ಲಿ ಇದ್ದಾರೆ ಎಂದು ತಿಳಿದಾಗ ಆಶ್ಚರ್ಯಕರವಾಗಿದೆ. ಆ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು.
- ಸಂಧ್ಯಾ ಮತ್ತು ಆರ್ಕಿಟೆಕ್ಟ್ ಜಯರಾಂ ಅವರಿಗೆ ಜೀ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಟುಂಬದಲ್ಲಿ ದಸರಾ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವಲ್ಲಿ ತಮ್ಮ ಆಸಕ್ತಿಯ ಮಂಡನೆಗೆ ಅಭಿನಂದನೆಗಳು. ಕೆ ವಿ ಜಯರಾಮ್
Comments
Post a Comment