ಪ್ರತಿಭಾ ಪತ್ರಿಕೆ - ಸೆಪ್ಟಂಬರ್ 2025 ಸಂಪಾರಕರ ಮಾತು ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ. ಹಾಗೇನೆ, ಬಹುಮಾನಿತ ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ. ಎಂದಿನಂತೆ ನಿಮ್ಮ ಕೆ ವಿ ಜಯರಾಮ್ ಅವರು ಅನೇಕ ಚಿತ್ರಗಳನ್ನು ಕಳಿಸಿದ್ದಾರೆ. ಹಾಗೆ ಒಂದು ವಿಶೇಷ ಎಂದರೆ ಬಾಲಕ ಆದಿತ್ಯ ಅದ್ಬುತವಾಗಿ ಗಣೇಶನ ಪೆನ್ಸಿಲ್ ಡ್ರಾಯಿಂಗ್ ಅನ್ನು ಬರೆದಿದ್ದಾನೆ. ಮೊದಲೇ ಹೇಳಿದಂತೆ ಇನ್ನು ಮುಂದೆ ವಿಶೇಷ ವ್ಯಕ್ತಿ ಅನ್ನುವುದರ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾರ್ಪಡಿಸುತ್ತಿದ್ದೇನೆ ಏಕೆಂದರೆ ಅನೇಕರು ತಾವೇನು ವಿಶೇಷ ವ್ಯಕ್ತಿಯಲ್ಲ ಎಂದು ಹಿಂಜರಿದ್ದರು. ಆದ್ದರಿಂದ ಈ ಮಾರ್ಪಾಡನ್ನು ಮಾಡಲಾಗಿದೆ. ಈ ಸಲದ ಸ್ಪರ್ಧೆ ದಯವಿಟ್ಟು ತಾವೆಲ್ಲ ಭಾಗವಹಿಸಲೇಬೇಕೆಂದು ನನ್ನ ಭಾವನೆ ಮುಖ್ಯವಾಗಿ ರಾಮಾಯಣ ಮಹಾಭಾರತಗಳಲ್ಲಿ ಆಸಕ್ತಿಯುಳ್ಳವರು ಹಿರಿಯರು ದಯವಿಟ್ಟು ಭಾಗವಹಿಸಿ ಏನಾದರೂ ಹೊಸದು ಮಾಡಬೇಕೆಂಬ ಆಲೋಚನೆಯಿಂದ ನಾನು ಈ...
ಪ್ರತಿಭಾ ಪತ್ರಿಕೆ - ನವೆಂಬರ್ 2025 ಸಂಪಾದಕರ ಬರಹ ದೊಡ್ಡ ಲೇಖನಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿ ಪರಿಚಯದಲ್ಲಂತೂ ಪೂರ್ತಿಯಾಗಿ ಓದುತ್ತಿಲ್ಲದ ಕಾರಣ ವ್ಯಕ್ತಿ ಪರಿಚಯವನ್ನು ಇನ್ನೂ ಸಂಕ್ಷಿಪ್ತವಾಗಿ ಈ ಸಂಚಿಕೆಯಿಂದ ಹಾಕಲಾಗುತ್ತದೆ. ದಯವಿಟ್ಟು ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಿ. ಬಹುಮಾನವನ್ನು 250 ರೂ ಗಳಿಂದ 500 ರೂ ಗಳಿಗೆ ಹೆಚ್ಚಿಸಲಾಗಿದೆ. ಬಹುಮಾನದ ವಿಲ್ಲದ ಸ್ಪರ್ಧೆಗಳು ಸ್ವಾರಸ್ವಕರವಾಗಿರುತ್ತದೆ. ಆದ್ದರಿಂದ ಅದರಲ್ಲಿಯೂ ಭಾಗವಹಿಸಿ. ನೀವೇ ಬರೆದ ಕಥೆ ಕವನ ಹಾಸ್ಯ ಚಿತ್ರಕಲೆ ಮುಂತಾದವುಗಳನ್ನು ದಯವಿಟ್ಟು ಕಳಿಸಿ . ಇತ್ತೀಚೆಗೆ ನಿಮ್ಮ ಅಭಿಪ್ರಾಯಗಳು ಕಡಿಮೆಯಾಗಿವೆ. ದಯವಿಟ್ಟು ಬರೆಯಿರಿ . ಪ್ರತಿಭಾ ಪತ್ರಿಕೆಯ ಪದ್ಯ - ಎ ಎಸ್ ಜಯರಾಂ ಪ್ರತೀ ತಿಂಗಳ ಹೊಸ ಬೆಳಕು, ಕಥೆ, ಕವನ, ಚಿಂತನೆ, ಚುಟುಕು, "ಪ್ರತಿಭಾ" ಇಂಬು ತುಂಬುವ ಒಲುಮೆ! ಹಾಸ್ಯ ಹೊಳೆ ಹರಿಸುವ ಮಾಸಿಕ ಚಿಲುಮೆ || 1 || ಕಲೆಯ ಕಣಜವೇ ಇಲ್ಲಿ ಹರಿಯುವುದು, ಸಂಸ್ಕೃತಿಯು ಮುಂದಕ್ಕೆ ನಡೆಯುವುದು. ಸುದ್ದಿಯ ಪರಿಜ್ಞಾನ, ಹೊಸ ತಂತ್ರದ ಜ್ಞಾನ, ಪ್ರತಿಯೊಂದು ಪುಟ ಹಬ್ಬದ ಚಂದನ || 2 || ಸ್ಪರ್ಧೆಯ ದಾರಿಯಲ್ಲಿ ಸ್ಪೂರ್ತಿ ಸಿಡಿಯಿ...
ಸಂಪಾದಕರ ಬರಹ ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, "ಜಯರಾಮನ ಜೋಕು" ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು ಮಾತ್ರ ಬೇಡ. ನಿಮ್ಮದೇ ಒರಿಜಿನಲ್ ಇದ್ದರೆ ಮಾತ್ರ ಕಳಿಸಿ . ಕವನಗಳನ್ನು ಅನೇಕ ಜನರು ಚೆನ್ನಾಗಿ ಬರೆದು ಕಳಿಸಿದ್ದೀರಿ. ಆದರೆ ಬಹುಮಾನ ಮಾತ್ರ ತುಂಬಾ ಚೆನ್ನಾಗಿರುವ ಒಂದೇ ಒಂದು ಕವನಕ್ಕೆ ಕೊಡಲಾಗಿದೆ. ಹೋದ ಸಂಚಿಕೆಯ ಚಿತ್ರಗಳನ್ನು ಬಿಡಿಸಿದ್ದ,ಅನೇಕ ಮಕ್ಕಳಿಗೆ ಆನ್ಲೈನ್ ಮೂಲಕ ಬಹುಮಾನಗಳನ್ನ ಕಳಿಸಲಾಗಿದೆ. ಅನೇಕರು ತುಂಬಾ ದೂರದಲ್ಲಿ ವೈಟ್ಫೀಲ್ಡ್ ಮುಂತಾದ ಕಡೆ ಇದ್ದು, ಬಹುಮಾನ ತೆಗೆದುಕೊಳ್ಳಲು ಬರುವುದು ಕಷ್ಟವಾಗಿದ್ದರಿಂದ ಈ ರೀತಿ ಮಾಡಲಾಗಿದೆ. ಎಲ್ಲರ ಭಾವಚ...
Comments
Post a Comment