ಪ್ರತಿಭಾ ಪತ್ರಿಕೆಯ ಪ್ರತಿ - ಜುಲೈ 2025
ಸಂಪಾದಕರ ಬರಹ ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, "ಜಯರಾಮನ ಜೋಕು" ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು ಮಾತ್ರ ಬೇಡ. ನಿಮ್ಮದೇ ಒರಿಜಿನಲ್ ಇದ್ದರೆ ಮಾತ್ರ ಕಳಿಸಿ . ಕವನಗಳನ್ನು ಅನೇಕ ಜನರು ಚೆನ್ನಾಗಿ ಬರೆದು ಕಳಿಸಿದ್ದೀರಿ. ಆದರೆ ಬಹುಮಾನ ಮಾತ್ರ ತುಂಬಾ ಚೆನ್ನಾಗಿರುವ ಒಂದೇ ಒಂದು ಕವನಕ್ಕೆ ಕೊಡಲಾಗಿದೆ. ಹೋದ ಸಂಚಿಕೆಯ ಚಿತ್ರಗಳನ್ನು ಬಿಡಿಸಿದ್ದ,ಅನೇಕ ಮಕ್ಕಳಿಗೆ ಆನ್ಲೈನ್ ಮೂಲಕ ಬಹುಮಾನಗಳನ್ನ ಕಳಿಸಲಾಗಿದೆ. ಅನೇಕರು ತುಂಬಾ ದೂರದಲ್ಲಿ ವೈಟ್ಫೀಲ್ಡ್ ಮುಂತಾದ ಕಡೆ ಇದ್ದು, ಬಹುಮಾನ ತೆಗೆದುಕೊಳ್ಳಲು ಬರುವುದು ಕಷ್ಟವಾಗಿದ್ದರಿಂದ ಈ ರೀತಿ ಮಾಡಲಾಗಿದೆ. ಎಲ್ಲರ ಭಾವಚಿತ್ರ ಹಾಗೂ ಹೆಸರುಗಳನ್ನು ಪ್ರಕಟಿಸಲಾಗಿದೆ. ಮುಖ್ಯ ಸೂಚನೆ : ಎಲ್ಲಾ ಸ್ಪರ್ಧೆಯ ಉತ್ತರಗಳನ್ನೂ ನನ್ನ ಇಮೇಲ್ jayarambox@gmail.com ಗೆ ಕಳಿಸಿ . ಹಾಗೆ ಮಾಡಲು ಬಾರದಿದ್ದವರು ವಾಟ್ಸಪ್ ಗೆ ಕಳಿಸಿರಿ. ಟೈಪ್ ಮಾಡಲು ಬರುವವರೆಲ್ಲ ಟೈಪ್ ಮಾಡಿ ಕಳಿಸಿದರೆ ನನಗೆ ಬಹಳ ಅನುಕೂಲ . ಇಲ್ಲಿ ಭಾಗವಹಿಸಿರುವ ಎಲ್ಲರಿಗಿಂತ ಹಿರಿಯರಾದ ( 87 ವರ್ಷ ) ನನ್ನ ಮಾವನವರಾದ ಎಸ್ ವಿಠ್ಠಲ ರಾವ್ ಅವರು , ಎಲ್ಲವನ್ನೂ ಟೈಪ್ ಮಾಡಿ ಕಳಿಸುತ್ತಾರೆ ...