Posts

ನನ್ನ ಮೊದಲ ಕಾರು!

   ಹೀ ಗೆ ಸುಮಾರು ವರ್ಷಗಳ ಹಿಂದೆ ನನ್ನ ಹತ್ತಿರ ಒಂದು ಫೀಯಿಟ್ ಕಾರು ಇತ್ತು. ಆ ಕಾಲದಲ್ಲಿ ಹೊಸ ಹೊಸ ಕಾರುಗಳು ಯಾವುದು ಜಾಸ್ತಿ ಇರಲಿಲ್ಲ. ಆ ಕಾರು ಮಾರ್ಗ ಮಧ್ಯದಲ್ಲಿ ಒಂದೊಂದು ಸಲ ಕೆಟ್ಟೋಗ್ತಾಯಿತ್ತು. ಆದರೂ ತುಂಬಾ ಚೆನ್ನಾಗಿ ಓಡುತ್ತಾ ಇತ್ತು.  ಇಲ್ಲಿಂದ ಸುಮಾರು ಒಂದೈದು ಕಿಲೋಮೀಟರ್ ದೂರದಲ್ಲಿರೋ ನಮ್ ಮಾವನ ಮನೆಗೆ ಹೋಗುವಷ್ಟೊತ್ತಿಗೆ ಒಂದು ಸಲಿ ಅದನ್ನ ನಿಲ್ಸಿ ಕಾರ್ಬೊ ರೇಟರ್ ಕ್ಲೀನ್ ಮಾಡಿ ಅಲ್ಲಿಂದ ಮುಂದಕ್ಕೆ ಹೋಗಬೇಕಾಗುತ್ತಿತ್ತು. ಅಷ್ಟ್ರೊಳಗೆ ನಮ್ಮ ತಂದೆ "ಅಲ್ಲಿ ಹೋಗಿ ಮುಟ್ಟಿದ್ದೀಯಾ" ಎಂದು ಒಂದು ಸಾರಿ ಫೋನ್ ಮಾಡೋರು. ಯಾಕೆಂದ್ರೆ ಅದು ಅಷ್ಟು ಕೆಡುತ್ತೆ ಅಂತ ಗೊತ್ತಿತ್ತು.   ಬೆಂಗಳೂರಿಂದ ಮೈಸೂರಿಗೆ ಅನೇಕ ಸಲ ಆ ಕಾರಿನಲ್ಲಿ ನಾನು ಹೋಗಿದ್ದೇನೆ.  ಟೈರ್ ಪಂಚರ್ ಆಗಿ ಬೇರೆ ಹಾಕುವುದು ,ಕಾರ್ಬೊನೇಟರ್ ಕ್ಲೀನ್ ಮಾಡುವುದು, ದಾರಿ ದಾರಿಯಲ್ಲಿ ಕೂಲಿಂಗ್ ಕೊಡುವುದು ಇವೆಲ್ಲ ಬಹಳ ಮಜಾ ತರುತ್ತಿತ್ತು. ನಮಗೂ ಅಲ್ಲಲ್ಲಿ ಎಳನೀರು ಕುಡಿಯುವುದು ತಿಂಡಿ ತಿನ್ನುವುದಕ್ಕೆ ಸಹಾಯ ಆಗುತ್ತಿತ್ತು. ಆ ಕಾರ್ ಓಡಿಸಿದ್ದರಿಂದಲೇ ನನಗೆ ಕಾರಿನಲ್ಲಿ ಯಾವೆಲ್ಲ ಇಂಜಿನ್ ಪಾರ್ಟ್ಸ್ ಗಳು ಇರುತ್ತವೆ, ಏನೇನು ಮಾಡುತ್ತವೆ ಎಂದು ಸರಿಯಾಗಿ ತಿಳಿದಿದ್ದು.    ಒಮ್ಮೆ ಮೈಸೂರಿಗೆ ಹೋದಾಗ ರಾತ್ರಿ ಆಗಿತ್ತು. ಅಲ್ಲಿ ಏನೋ ಕಾರಣಕ್ಕಾಗಿ ಕರೆಂಟು ಹೊರಟು ಹೋಗಿತ್ತು. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಕಾ...

Suchin Tendulkar -A super cricketer.

Image
  Sachin Tendulkar is widely regarded as one of the greatest cricketers of all time. Born on April 24, 1973, in Mumbai, India, he made his debut for India at the age of 16 in 1989. Over his 24-year career, he set numerous records, including being the highest run-scorer in international cricket with 34,357 runs. Tendulkar is the first player to score a double century in a One Day International (ODI) and the only player to have scored one hundred international centuries. He was awarded the Bharat Ratna, India's highest civilian award, in 2014. His elegance, consistency, and sportsmanship made him a global icon.

Joint family

Click the link to read my own experiences.   Joint family scenario

ನವೆಂಬರ್ ಸಂಚಿಕೆ

Image
  ಪ್ರತಿಭಾ ಪತ್ರಿಕೆ - ನವೆಂಬರ್   2025   ಸಂಪಾದಕರ ಬರಹ  ದೊಡ್ಡ ಲೇಖನಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿ ಪರಿಚಯದಲ್ಲಂತೂ ಪೂರ್ತಿಯಾಗಿ ಓದುತ್ತಿಲ್ಲದ ಕಾರಣ ವ್ಯಕ್ತಿ ಪರಿಚಯವನ್ನು ಇನ್ನೂ ಸಂಕ್ಷಿಪ್ತವಾಗಿ ಈ ಸಂಚಿಕೆಯಿಂದ ಹಾಕಲಾಗುತ್ತದೆ. ದಯವಿಟ್ಟು ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಿ. ಬಹುಮಾನವನ್ನು 250 ರೂ ಗಳಿಂದ 500 ರೂ ಗಳಿಗೆ ಹೆಚ್ಚಿಸಲಾಗಿದೆ. ಬಹುಮಾನದ ವಿಲ್ಲದ ಸ್ಪರ್ಧೆಗಳು ಸ್ವಾರಸ್ವಕರವಾಗಿರುತ್ತದೆ. ಆದ್ದರಿಂದ ಅದರಲ್ಲಿಯೂ ಭಾಗವಹಿಸಿ.  ನೀವೇ ಬರೆದ ಕಥೆ ಕವನ ಹಾಸ್ಯ ಚಿತ್ರಕಲೆ ಮುಂತಾದವುಗಳನ್ನು ದಯವಿಟ್ಟು ಕಳಿಸಿ .  ಇತ್ತೀಚೆಗೆ  ನಿಮ್ಮ ಅಭಿಪ್ರಾಯಗಳು ಕಡಿಮೆಯಾಗಿವೆ. ದಯವಿಟ್ಟು ಬರೆಯಿರಿ . ಪ್ರತಿಭಾ ಪತ್ರಿಕೆಯ ಪದ್ಯ - ಎ ಎಸ್ ಜಯರಾಂ   ಪ್ರತೀ ತಿಂಗಳ ಹೊಸ ಬೆಳಕು,   ಕಥೆ, ಕವನ, ಚಿಂತನೆ, ಚುಟುಕು,   "ಪ್ರತಿಭಾ" ಇಂಬು ತುಂಬುವ ಒಲುಮೆ!   ಹಾಸ್ಯ ಹೊಳೆ ಹರಿಸುವ ಮಾಸಿಕ ಚಿಲುಮೆ || 1 || ಕಲೆಯ ಕಣಜವೇ ಇಲ್ಲಿ ಹರಿಯುವುದು,   ಸಂಸ್ಕೃತಿಯು ಮುಂದಕ್ಕೆ ನಡೆಯುವುದು.   ಸುದ್ದಿಯ ಪರಿಜ್ಞಾನ, ಹೊಸ ತಂತ್ರದ ಜ್ಞಾನ,   ಪ್ರತಿಯೊಂದು ಪುಟ ಹಬ್ಬದ ಚಂದನ || 2 || ಸ್ಪರ್ಧೆಯ ದಾರಿಯಲ್ಲಿ ಸ್ಪೂರ್ತಿ ಸಿಡಿಯ...

ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ

Image
          ಪ್ರತಿಭಾ ಪತ್ರಿಕೆ - ಸೆಪ್ಟಂಬರ್ 2025     ಸಂಪಾರಕರ ಮಾತು ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ.  ಹಾಗೇನೆ, ಬಹುಮಾನಿತ  ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ.  ಎಂದಿನಂತೆ ನಿಮ್ಮ ಕೆ ವಿ ಜಯರಾಮ್ ಅವರು ಅನೇಕ ಚಿತ್ರಗಳನ್ನು ಕಳಿಸಿದ್ದಾರೆ. ಹಾಗೆ ಒಂದು ವಿಶೇಷ ಎಂದರೆ  ಬಾಲಕ ಆದಿತ್ಯ ಅದ್ಬುತವಾಗಿ ಗಣೇಶನ ಪೆನ್ಸಿಲ್ ಡ್ರಾಯಿಂಗ್ ಅನ್ನು ಬರೆದಿದ್ದಾನೆ.  ಮೊದಲೇ ಹೇಳಿದಂತೆ ಇನ್ನು ಮುಂದೆ ವಿಶೇಷ ವ್ಯಕ್ತಿ ಅನ್ನುವುದರ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾರ್ಪಡಿಸುತ್ತಿದ್ದೇನೆ ಏಕೆಂದರೆ ಅನೇಕರು ತಾವೇನು ವಿಶೇಷ ವ್ಯಕ್ತಿಯಲ್ಲ ಎಂದು  ಹಿಂಜರಿದ್ದರು. ಆದ್ದರಿಂದ ಈ ಮಾರ್ಪಾಡನ್ನು ಮಾಡಲಾಗಿದೆ.  ಈ ಸಲದ ಸ್ಪರ್ಧೆ ದಯವಿಟ್ಟು ತಾವೆಲ್ಲ ಭಾಗವಹಿಸಲೇಬೇಕೆಂದು ನನ್ನ ಭಾವನೆ ಮುಖ್ಯವಾಗಿ ರಾಮಾಯಣ ಮಹಾಭಾರತಗಳಲ್ಲಿ ಆಸಕ್ತಿಯುಳ್ಳವರು ಹಿರಿಯರು ದಯವಿಟ್ಟು ಭಾಗವಹಿಸಿ ಏನಾದರೂ ಹೊಸದು ಮಾಡಬೇಕೆಂಬ ಆಲೋಚನೆಯಿಂದ ನಾನು ಈ...

ಪ್ರತಿಭಾ ಪತ್ರಿಕೆ - ಆಗಸ್ಟ್ 2025

Image
      ಸಂಪಾದಕರ ಬರಹ  ಕಳೆದ ಸಂಚಿಕೆಯಲ್ಲಿ ಮುಖ್ಯ ಪದಬಂಧ, ಕವನ ಮುಂದುವರಿಸುವುದು , ಓತಿಕೇತದ ಕಥೆಯ ಪ್ರಶ್ನೆಗಳು ಎಲ್ಲದಕ್ಕೂ ಉತ್ತರಿಸಿದ್ದೀರಿ .ಬಹಳ ಧನ್ಯವಾದಗಳು. ಈ ಸಂಚಿಕೆಯಲ್ಲೂ ಬಹುಮಾನಿತ ಸ್ಪರ್ಧೆಯಯಾದ  ರಂಗೋಲಿ ಸ್ಪರ್ಧೆಯ ಜೊತೆಗೆ ಇನ್ನೂ ಅನೇಕ ಬಹುಮಾನವಿಲ್ಲದ   ಚಿಕ್ಕ ಸ್ಪರ್ಧೆಗಳಿವೆ. ಎಲ್ಲದರಲ್ಲೂ ದಯವಿಟ್ಟು ಭಾಗವಹಿಸಿ.  ನಾನು ಅನೇಕರನ್ನು  "ವಿಶೇಷ ವ್ಯಕ್ತಿಗೆ ನಿಮ್ಮ ಹೆಸರನ್ನು ಹಾಕುತ್ತೇನೆ" ಎಂದು ಎಂದು ಹೇಳಿದಾಗ ಅವರುಗಳು "ನಾನೇನು  ವಿಶೇಷ ವ್ಯಕ್ತಿ ಅಲ್ಲ. ಹಾಕುವುದು ಬೇಡ" ಎಂದು  ಹಿಂದೆ ಸರಿದರು. ಅದರಿಂದ ಮುಂದಿನ ಸಂಚಿಕೆಯಿಂದ ವಿಶೇಷ ವ್ಯಕ್ತಿ ಎನ್ನುವ ಬದಲು ವ್ಯಕ್ತಿ ಪರಿಚಯ ಎಂದು ಮಾರ್ಪಾಡು ಮಾಡುತ್ತೇನೆ. ಆಗ ಯಾರು ಬೇಕಾದರೂ ತಮ್ಮ ಹವ್ಯಾಸಗಳು ಮುಂತಾದವುಗಳನ್ನು ನನಗೆ ಬರೆದು ಕಳಿಸಬಹುದು. ನಾನು ಸೂಕ್ತ ವ್ಯಕ್ತಿಗಳನ್ನು ಪ್ರತಿಭಾ ಪತ್ರಿಕೆಯಲ್ಲಿ ಹಾಕುತ್ತೇನೆ.  ತಮ್ಮೆಲ್ಲರ ಸಹಕಾರಕ್ಕೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ವಿಚಾರ - ತಾಯಿಯ ಬೆಲೆ ಎಷ್ಟು ? ನೀವೇ ಹೇಳಿ . ಇದು, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ  ನಡೆದ ಘಟನೆ.  ಜೂನ್  ಸಂಚಿಕೆಯ ಬಹುಮಾನ ವಿಜೇತರು  ಶ್ರೀಮತಿ ಸೌಮ್ಯ ನ...