june 2025

ಸಂಪಾದಕರ ಬರಹ 


ನಿಯಮ ಬದಲಾವಣೆ ( ಇದನ್ನು  ಪೂರ್ಣ ಬರೆದು ಕಳಿಸಿ ಸಹಾಯ ಮಾಡಿದ ನನ್ನ ಗೆಳೆಯ ಶ್ರೀ ಎಸ್ ಸುರೇಶ್ ಅವರಿಗೆ ಧನ್ಯವಾದಗಳು )

ಸಂಪಾದಕೀಯ ನೀತಿಯನ್ನು ಪರಿಷ್ಕರಿಸುವ ಬಗ್ಗೆ ಟಿಪ್ಪಣಿ (ಆಧ್ಯಾತ್ಮಿಕತೆ ಮತ್ತು ಧರ್ಮದ ಬಗ್ಗೆ ಸ್ಪಷ್ಟತೆಯೊಂದಿಗೆ)

 

 

1.  ಶೀರ್ಷಿಕೆ

ಡಿಜಿಟಲ್ ನಿಯತಕಾಲಿಕವನ್ನು  ಬಲಪಡಿಸುವುದು: ವಿಭಜನೆಗಳನ್ನು ತಪ್ಪಿಸುವುದರಿಂದ ಹಿಡಿದು ಸಾರ್ವತ್ರಿಕ ಸಾಮರಸ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವವರೆಗೆ.

ಪ್ರಸ್ತುತ ನಿಯಮ:

"ಜಾತಿ, ಧರ್ಮ, ಲಿಂಗ ಮತ್ತು ರಾಜಕೀಯದ ವಿಷಯಗಳನ್ನು ತಪ್ಪಿಸಲು , ಅದಾವುದರಬಗ್ಗೆಯೂ ಬರೆಯಬಾರದು” ಎಂದು ಇತ್ತು ."

ಪರಿಷ್ಕೃತ ನಿಯಮ:

"ನಾವು ಜಾತಿ, ಧರ್ಮ, ಲಿಂಗ, ರಾಜಕೀಯ ಮತ್ತು ಅಂತಹುದೇ ಗುರುತುಗಳ ಬಗ್ಗೆ ವಿಭಜಕ ಚರ್ಚೆಗಳನ್ನು ತಪ್ಪಿಸುತ್ತೇವೆ. ಆದಾಗ್ಯೂ, ನಮ್ಮ ಇಡೀ ಸಮುದಾಯದ ಪ್ರಯೋಜನಕ್ಕಾಗಿ ಆಧ್ಯಾತ್ಮಿಕ ಬೆಳವಣಿಗೆ, ಸಾಮರ್ಥ್ಯ ವರ್ಧನೆ, ಉತ್ಸವದಲ್ಲಿ ಭಾಗವಹಿಸುವಿಕೆ, ಸಮಗ್ರ ಯೋಗಕ್ಷೇಮ ಮತ್ತು ಸಾರ್ವತ್ರಿಕ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಕೊಡುಗೆಗಳನ್ನು ನಾವು ಸ್ವಾಗತಿಸುತ್ತೇವೆ.

  1. ಉದ್ದೇಶ: ನಾವು ನಿರ್ಮಿಸೋಣ, ಬಂಧ ಮತ್ತು ಅರಳೋಣ - ಒಟ್ಟಾಗಿ ಒಂದು ಸಮುದಾಯವಾಗಿ ನಿಯತಕಾಲಿಕವನ್ನು ಸಾಮರ್ಥ್ಯ ವರ್ಧನೆ, ಸಾಮಾಜಿಕ ಸಾಮರಸ್ಯ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಗೆ ರೋಮಾಂಚಕ ವೇದಿಕೆಯಾಗಿ ಪರಿವರ್ತಿಸೋಣ.

3.  ಪ್ರಸ್ತುತ ನೀತಿ ಮತ್ತು ಅದರ ಮಿತಿಗಳು:

ಪ್ರಸ್ತುತ ನೀತಿಯು ಶಾಂತಿ ಮತ್ತು ತಟಸ್ಥತೆಯನ್ನು ಕಾಪಾಡಿಕೊಳ್ಳಲು ಜಾತಿ, ಧರ್ಮ, ಲಿಂಗ ಮತ್ತು ರಾಜಕೀಯದ ವಿಷಯಗಳನ್ನು ತಪ್ಪಿಸುತ್ತದೆ.

ಸಾಮಾನ್ಯ ಸುದ್ದಿ ಮತ್ತು ತಟಸ್ಥ ಸಮುದಾಯ ವಿಷಯಗಳ ಮೇಲೆ ಗಮನ ಉಳಿದಿದೆ.

ಸಂಘರ್ಷವನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರೂ, ಈ ಕಟ್ಟುನಿಟ್ಟಾದ ತಪ್ಪಿಸುವಿಕೆಯು ಓದುಗರನ್ನು ಶ್ರೀಮಂತಗೊಳಿಸಬಲ್ಲ ಆಧ್ಯಾತ್ಮಿಕ ಬೆಳವಣಿಗೆ, ಮಾನಸಿಕ ಯೋಗಕ್ಷೇಮ ಮತ್ತು ವೈಯಕ್ತಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಕೊಡುಗೆಗಳನ್ನು ಮಿತಿಗೊಳಿಸುತ್ತದೆ.

  1. ವ್ಯತ್ಯಾಸವನ್ನು ಸ್ಪಷ್ಟಪಡಿಸುವುದು: ಧರ್ಮ ಮತ್ತು ಆಧ್ಯಾತ್ಮಿಕತೆ: ಆಧ್ಯಾತ್ಮಿಕತೆಯು ಒಂದುಗೂಡಿಸುತ್ತದೆ - ಗಡಿಗಳನ್ನು ಮೀರಿ

ಧರ್ಮ: ನಿರ್ದಿಷ್ಟ ನಂಬಿಕೆಗಳಿಗೆ ಸಂಬಂಧಿಸಿದ ಸಂಘಟಿತ ನಂಬಿಕೆಗಳು, ಆಚರಣೆಗಳು ಮತ್ತು ಗುರುತುಗಳು (ಉದಾ. ಹಿಂದೂ ಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ).

ಆಧ್ಯಾತ್ಮಿಕತೆ: ಧಾರ್ಮಿಕ ಗಡಿಗಳನ್ನು ಮೀರಿ, ಆಂತರಿಕ ಬೆಳವಣಿಗೆ, ಬುದ್ಧಿವಂತಿಕೆ, ಸಹಾನುಭೂತಿ, ನೈತಿಕತೆ ಮತ್ತು ಸ್ವಯಂ ಸುಧಾರಣೆಯ ಸಾರ್ವತ್ರಿಕ ಮೌಲ್ಯಗಳು.

ಜಾತಿ, ಧರ್ಮ, ಲಿಂಗ ಅಥವಾ ವಯಸ್ಸನ್ನು ಲೆಕ್ಕಿಸದೆ ಆಧ್ಯಾತ್ಮಿಕತೆಯನ್ನು ಯಾರು ಬೇಕಾದರೂ ಅಭ್ಯಾಸ ಮಾಡಬಹುದು. ಉದಾಹರಣೆ: "ಮನಸ್ಸನ್ನು ಶಾಂತಗೊಳಿಸಲು 5 ನಿಮಿಷಗಳ ಬೆಳಿಗ್ಗೆ ಧ್ಯಾನ" ನಂತಹ ಲೇಖನವು ಧಾರ್ಮಿಕ ವಿಭಜನೆಗಳನ್ನು ಸ್ಪರ್ಶಿಸದೆ ಎಲ್ಲಾ ಓದುಗರಿಗೆ ಪ್ರಯೋಜನವನ್ನು ನೀಡುತ್ತದೆ.

 ಬರೆಯಬಹುದಾದ ಕೆಲವು ಉದಾಹರಣೆಗಳು 

"ಕಾರ್ಯನಿರತ ಯುವಕರಿಗೆ 5-ನಿಮಿಷದ ಮನಃಪೂರ್ವಕತೆ" — ಆಧ್ಯಾತ್ಮಿಕ ಬೆಳವಣಿಗೆ

"ಸಮುದಾಯ ಆರೋಗ್ಯ ಶಿಬಿರವನ್ನು ಮಹಿಳೆಯರು ಹೇಗೆ ಮುನ್ನಡೆಸಿದರು" - ಸಾಮರ್ಥ್ಯ ವರ್ಧನೆ

"ಪರಿಸರ ಸ್ನೇಹಿ ಉತ್ಸವ ಆಚರಣೆಗಳು: ಒಂದು ಸಮುದಾಯ ವಿಧಾನ" - ಪರಿಸರ ಮತ್ತು ಸಂಸ್ಕೃತಿ

"ಹಿರಿಯರಿಂದ ಪಾಠಗಳು: ತಾಳ್ಮೆ, ಧೈರ್ಯ ಮತ್ತು ಭರವಸೆ" - ಅಂತರ ಪೀಳಿಗೆಯ ಬುದ್ಧಿವಂತಿಕೆ "ರಕ್ತದಾನ ಅಭಿಯಾನಗಳನ್ನು ಮುನ್ನಡೆಸುವ ಯುವ ಸ್ವಯಂಸೇವಕರು" - ನಾಯಕತ್ವ ತರಬೇತಿ

 

5.  ಈ ಕೆಳಗಿನ ಕೋಷ್ಟಕ ದಲ್ಲಿ  ಯಾರು ಯಾರು ಸಾಮಾನ್ಯವಾಗಿ ಯಾವ ವಿಷಯಗಳಬಗ್ಗೆ ಲೇಖನ ಬರೆಯಬಹುದೆಂದು ಕೊಡಲಾಗಿದೆ. ( ಹೀಗೆಯೇ  ಬರೆಯಬೇಕೆಂದು ಏನೂ  ನಿಯಮವಿಲ್ಲ )

 

ಕೋಷ್ಟಕ 1:

ಓದುಗರ ಗುಂಪುಗಳು ಮತ್ತು ತೊಡಗಿಸಿಕೊಳ್ಳುವಿಕೆ ಅವಕಾಶಗಳು

 

ರೀಡರ್ ಗ್ರೂಪ್            

ನಿಶ್ಚಿತಾರ್ಥದ ಅವಕಾಶಗಳು

 

ಯುವಕರು

ನಾಯಕತ್ವದ ಸಲಹೆಗಳು, ಸ್ವಯಂ ಬೆಳವಣಿಗೆ, ಸ್ವಯಂಸೇವಕ

ಮಹಿಳೆಯರು

ಆರೋಗ್ಯ, ಸ್ವಾಸ್ಥ್ಯ, ಕಲ್ಯಾಣ ಕಥೆಗಳು

ಹಿರಿಯ ನಾಗರಿಕರು

ಬುದ್ಧಿವಂತಿಕೆ, ಪ್ರತಿಫಲನಾತ್ಮಕ ಲೇಖನಗಳನ್ನು ಹಂಚಿಕೊಳ್ಳುವುದು

ಎಲ್ಲಾ ವಯಸ್ಸಿನವರು

ಮೈಂಡ್ಫುಲ್ನೆಸ್, ಫಿಟ್ನೆಸ್, ಸಕಾರಾತ್ಮಕ ಮೌಲ್ಯಗಳು

 

ಸಮುದಾಯ ನಾಯಕರು

ಈವೆಂಟ್ ಯೋಜನೆ ಯಶಸ್ಸಿನ ಕಥೆಗಳು

ವಿಚಾರ - ಭಾಗ -1 . ಪಾರ್ಕಿನಲ್ಲಿ ವಾಕಿಂಗ್ - ನನ್ನ ಅನುಭವ 

ಲೇಖನ : ಶ್ರೀ ಜಯರಾಂ ಎ ಎಸ್ 

ಪಾರ್ಕಲ್ಲಿ ವಾಕಿಂಗ್ ಹೋಗೋದು ಒಂದು ವಿಶಿಷ್ಟ ಅನುಭವ. ಸಾಮಾನ್ಯವಾಗಿ ಸಂಜೆ ಹೊತ್ತು ಹೋಗುವುದು ರೂಡಿ. ಇದೇ ರೀತಿ ನನ್ನ ಒಂದು ಅನುಭವವನ್ನು ಹಾಸ್ಯಮಯವಾಗಿ ಇಲ್ಲಿ ಹೇಳಿದ್ದೇನೆ. ನಾನು ಒಮ್ಮೆ ಪಾರ್ಕಿನಲ್ಲಿ ವಾಕಿಂಗ್ ಹೊರಟೆ. ನನ್ನ ಮುಂದುಗಡೆ ನೋಡುತ್ತೇನೆ, ಇಬ್ಬರು ವಯಸ್ಸಾದ ಮಹಿಳೆಯರು ಅವರ ಸೊಸೆಯರನ್ನು ಬೈದುಕೊಂಡು ಹೋಗುತ್ತಿದ್ದಾರೆ! ಒಬ್ಬ ಮಹಿಳೆ : "ನಮ್ಮ ಮಗ ಹೇಗಿದ್ದ ಮದುವೆಗೆ ಮುಂಚೆ. ಈಗ ನೋಡಿ ಅದೇನು ಡಯಟ್ ಡಯಟ್ ಅಂತಾಳೆ. ಅವ್ನು ತೀರ ಸಣ್ಣಗಾಗಿ ಹೋಗಿದ್ದಾನೆ" ಇನ್ನೊಬ್ಬ ಮಹಿಳೆ : "ನಮ್ಮ ಮನೆಯಲ್ಲಿ ಹಾಗೆ. ಅದೇನೋ ದಿನಾಗಲು ಚಪಾತಿಯನ್ನೇ ಮಾಡಿ ಹಾಕುತ್ತಾಳೆ. ಅವನು ಕೂಡ ಸೊರಗಿ ಹೋಗಿದ್ದಾನೆ ಏನು ಮಾಡುವುದು ಏನೊ" ಇವರ ಹಿಂದಿಯೆ ಹೋದರೆ ನನಗೆ ಮನಸ್ಸಿನ ಶಾಂತಿಯ ಕೆಟ್ಟು ಹೋಗುತ್ತದೆ ಎನಿಸಿ. ಅಲ್ಲೇ ಪಾರ್ಕಿನ ಬೆಂಚ್ ಮೇಲೆ ಕುಳಿತೆ. ಸ್ವಲ್ಪ ಹೊತ್ತು ಬಿಟ್ಟು ಎದ್ದು ಹೊರಟೆ ಆಗ ಒಂದು ಮುದುಕರ ಗುಂಪು ನನ್ನ ಮುಂದೆ ಹೋಗುತ್ತಿತ್ತು ನಿಧಾನವಾಗಿ ಚಲಿಸುತ್ತಾ, ಜೋರಾಗಿ ಮಾತನಾಡುತ್ತಿದ್ದರು!

ಒಬ್ಬರು ಹೇಳಿದರು: " ನಾವು 1947ನೇ ಇಸವಿಯಲ್ಲಿ ಹೀಗೆ ಮಾಡಿದಿದ್ದರೆ ಈಗ ಭಾರತ ಚೆನ್ನಾಗಿರುತ್ತಿತ್ತು" ಇನ್ನೊಬ್ಬರ ಹೇಳಿದರು : "ಸ್ವತಂತ್ರ ಬಂದ ನಂತರ 1950 ರಲ್ಲಿ ಹಾಗೆ ಮಾಡಿದಿದ್ದರೆ ನಮ್ಮ ಭಾರತ ಬಹಳ ಚೆನ್ನಾಗಿರುತ್ತಿತ್ತು" ಇವರ ಹಿಂದೆ ಹೋದರೆ ನನಗೂ ಕೂಡ "ನಾಳೆ ಏನು ಮಾಡುವುದು ಎನ್ನುವ ಪ್ಲಾನ್ ಬದಲು ಸುಮ್ಮನೆ ನಿನ್ನೆ ಏನು ಮಾಡಬೇಕಾಗಿತ್ತು ಎಂಬ ಚಿಂತೆ ತಲೆಗೆ ಹತ್ತುತ್ತದೆ. ನಾವು ಹಿಂದೆ ನಡೆದದ್ದನ್ನು ಈಗ ತಿದ್ದಲು  ಸಾಧ್ಯವೇ ? ಇದು ಪ್ರಯೋಜನವಿಲ್ಲ" ಎಂದು ಮತ್ತೆ ಬೆಂಚಿನ ಮೇಲೆ ಕೂತೆ

ಮತ್ತೆ ಎದ್ದು ಹೊರಟಾಗ, ಇನ್ನೊಂದು ಇನ್ನೂ ಮುದುಕರ ಗುಂಪು ತೀರಾ ನಿಧಾನವಾಗಿ ನಡೆಯುತ್ತಿತ್ತು. ಅವರಲ್ಲಿ ಅನೇಕರು ವಾಕಿಂಗ್ ಸ್ಟಿಕ್ ಹಿಡಿದುಕೊಂಡಿದ್ದರು!

ಒಬ್ಬರು ಹೇಳಿದರು " ಅಯ್ಯೋ ,ನನಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ, ಕಾಲು  ತುಂಬಾ ನೋವು " ಎಂದು ನರಳುವ ಧ್ವನಿಯಲ್ಲಿ ಹೇಳಿದರು ಇನ್ನೊಬ್ಬರು ತೀರಾ ಒದ್ದಾಡುತ್ತಾ: " , ನಿನಗೇನೋ ಕಾಲು ನೋವು. ಬಹಳ ಸುಲಭ .ನನಗೆ ಬೆನ್ನಂತೂ ನೇರವಾಗಿ ನಡೆಯಲು ಆಗುತ್ತಿಲ್ಲ , ಅಯ್ಯೋ "ಎಂದು ಮರುಗಿದರು . ನಾನು ಯೋಚಿಸಿದೆ "ಇವರ ಹಿಂದೆ ನಾನೇನಾದರೂ ನಡೆದುಕೊಂಡು ಹೋದರೆ ನನ್ನ ಮೈಯಲ್ಲಿರುವ ಎಲ್ಲಾ ಅಂಗಾಂಗಗಳಲ್ಲೂ ನೋವು ಶುರುವಾಗುತ್ತದೆ" ಆದ್ದರಿಂದ ಮತ್ತೆ ಕಲ್ಲು ಬೆಂಚಿನ ಮೇಲೆ ಕೂತೆ. ನಾನು ಯೋಚಿಸಿದೆ " ಹೀಗೆ ಎಷ್ಟು ಗುಂಪುಗಳು ಬರುತ್ತವೆ ? ಎಲ್ಲೋ ಕೆಲವು. ನಂತರ ಹೋದರಾಯಿತು" ಎಂದು ಸ್ವಲ್ಪ ಹೊತ್ತು ಬಿಟ್ಟು, ನಂತರ  ಎದ್ದು ಹೊರಡೋಣ ಎಂದು ನೋಡಿದರೆ, ಒಂದು ರೌಂಡ್ ಹಾಕಿಕೊಂಡು ಸೊಸೆರನ್ನು ಬೈಕೊಳ್ಳುವ ಮಹಿಳೆಯರು ಮತ್ತೆ ಬಂದಿದ್ದರು!

ಅಯ್ಯೋ ಈ ಪಾರ್ಕನ್ನೇ ಬಿಟ್ಟು ಬೇರೆ ಎಲ್ಲಾದರೂ ಹೋಗಬೇಕು ಎಂದುಕೊಳ್ಳುತ್ತಿದ್ದಾಗ , ನನ್ನ ಅದೃಷ್ಟವಶಾತ್ ಒಂದಷ್ಟು ಸಣ್ಣ ವಯಸ್ಸಿನ ಹುಡುಗರು ನಗುತ್ತಾ ಮಾತನಾಡುತ್ತಾ ಹೊರಟಿದ್ದರು.

ಅವರ ಹಿಂದೆ ನಡೆದೆ .ಅವರ ಆಲೋಚನೆಗಳು , ಮಾತುಗಳು "ಮುಂದೇನು ಮಾಡಬೇಕು? ನಾವು ಹೇಗೆ ಒಳ್ಳೆಯ ಕೆಲಸಗಳನ್ನು ಪಡೆದು ಕೊಳ್ಳಬೇಕು? ಜೀವನವನ್ನು ರೂಪಿಸಿಕೊಳ್ಳುವುದು ಹೇಗೆ ?ಎಂಬುದಾಗಿ ಇತ್ತು !ಬಹಳ ಸಕಾರಾತ್ಮಕ ವಿಚಾರಗಳು ಮತ್ತು ಮುಂದೆ ಮಾಡಲು ಆಗುವಂತ ವಿಚಾರಗಳೇ ಇದ್ದವು . ಇದರಿಂದಲೇ ಜನರೇಶನ್ ಗ್ಯಾಪ್ ಎಂಬ ದೊಡ್ಡ ಸಮಸ್ಯೆ ಬಂದಿರುವುದು. ನಮ್ಮ ದೇಹಕ್ಕೆ ವಯಸ್ಸಾದರೂ ಪರವಾಗಿಲ್ಲ. ಅದು ಸಹಜ. ಆದರೆ ನಮ್ಮ ಮನಸ್ಸಿಗೆ ವಯಸ್ಸಾದರೆ ಬರೇ ನಕಾರಾತ್ಮಕ ವಿಷಯಗಳು, ನಮ್ಮ ದೇಶದ ದೃಷ್ಟಿಯಲ್ಲಿ ಕಾಣುತ್ತದೆ, ನಮ್ಮ ಮನೆಯಲ್ಲಿ ಏನು ಸರಿ ಇಲ್ಲ ಎಂದು,ಅಥವಾ  ನನ್ನ ದೇಹ ಆರೋಗ್ಯವೇ ಸರಿ ಇಲ್ಲ ಎಂದು ಎನಿಸುತ್ತದೆ . ಹೀಗಾದಾಗ ನಿಮ್ಮ ಮನಸ್ಸಿಗೆ ವಯಸ್ಸಾಗಿದೆ ಎಂದು ಅರ್ಥ . ಎಷ್ಟೋ 85ರ ಮೇಲಿನ ವ್ಯಯಸ್ಸಿನವರೂ ಕೂಡ ಚಟುವಟಿಕೆಯಿಂದ ಮುಂದಿನ ದಿನಗಳ ಒಳ್ಳೆಯ ಕೆಲಸಗಳ ಬಗ್ಗೆ ಯೋಚನೆ ಮಾಡುತ್ತಾ ಸಂತೋಷದಿಂದ ಇರುವುದನ್ನು  ನಾನು ನೋಡಿದ್ದೇನೆ.

ದಯವಿಟ್ಟು ನಾವೆಲ್ಲರೂ ಸಕಾರಾತ್ಮಕವಾಗಿ ಹಾಗೂ ಉಪಯುಕ್ತವಾಗುವ  ಯೋಚನೆ ಮಾಡುವುದನ್ನು  ರೂಡಿಸಿಕೊಳ್ಳೋಣ.

  ಕಳೆದ ಸಂಚಿಕೆಯಲ್ಲಿ ಬಹುಮಾನ ಪಡೆದವರು

ಹೆಸರು : ಶ್ರೀ ಆನಂದ್ ಎಸ್ ಬಿ 

 

ಶ್ರೀ ಆನಂದ್ ಎಸ್ ಬಿ ಆವರಿಗೆ ಅಭಿನಂದನೆಗಳು.

   ಮೇ ಸಂಚಿಕೆಯ ಸ್ಪರ್ಧೆಗೆ ಬಂದ ಚಿತ್ರಗಳು 

10 ವರ್ಷದೊಳಗಿನ ಮಕ್ಕಳು ಬರೆದ ಚಿತ್ರಗಳು 

 

ಆವನಿ , 7 ವರ್ಷ 

ನಿಶ್ಚಯ್ . ಪಿ.ಎಂ, 11 ವರ್ಷ

ವಚನಾ ಡಿ ಎಂ : 10 ವರ್ಷ 

ಆದಿತ್ಯ , 10 ವರ್ಷ 

ದ್ಯುತಿ ಸಿರೀಶ್ , 15 ವರ್ಷ 

ರಿದ್ದಿ ಯಾದವ್, 12 ವರ್ಷ ವರ್ಷ 

ವಿಭಾ ಎಂ , 11 ವರ್ಷ ವರ್ಷ 

ಬಹುಮಾನಗಳು :

10 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ : ಪಾರ್ಥ ಯಾದವ್.  ಎಸ್

10ರಿಂದ 16 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ : ಆದಿತ್ಯ 

ಇಬ್ಬರು ಮಕ್ಕಳಿಗೂ ಅಭಿನಂದನೆಗಳು 

ಇನ್ನೊಂದು ಸಂತಸದ ವಿಷಯ : ನನ್ನ ಅಮ್ಮ, ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯನಾರಾಯಣ ರಾವ್ ಅವರು , ಭಾಗವಹಿಸಿದ  ಇತರ  ಎಲ್ಲಾ ಮಕ್ಕಳಿಗೂ ತಲಾ 100 ರೂ ಬಹುಮಾನ ಕೊಡಲು  ಮುಂದೆ ಬಂದಿದ್ದಾರೆ ! ಅವರಿಗೆ  ಧನ್ಯವಾದಗಳು  .

ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು 

ಈ ಸಂಚಿಕೆಯ ಸ್ಪರ್ಧೆ 

ಕವನ ಬರೆದು ಕಳುಹಿಸಲು ಕೊನೆಯ ದಿನಾಂಕ - 25/06/2025. 

ವಿಶೇಷ ವ್ಯಕ್ತಿ -ಶ್ರೀ ಕೆ ಜಯರಾಂ , ಆರ್ಕಿಟೆಕ್ಟ್- ಭಾಗ -1 

       

"ಇವರದು  ಬಹುಮುಖ ಪ್ರತಿಭೆ "

 

ಆರ್ಕಿಟೆಕ್ಟ್ ಕೆ ಜಯರಾಮ್ ಅವರದು ಬಹುಮುಖ ಪ್ರತಿಭೆ. ಅವರು ಅನೇಕ ವಿಧವಾದ ಹವ್ಯಾಸಗಳನ್ನು ಹೊಂದಿದ್ದಾರೆ.

1) ಗಿಡ ಬೆಳೆಸುವುದು

2) ಪೋರ್ಟಬಲ್ ಮನ

3) ಬೈಸಿಕಲ್ ಆವಿಷ್ಕಾರ

4) ಪುಸ್ತಕ ಪ್ರಕಟಣೆಗಳು

5) ಪತ್ರಿಕೆಗಳ ಬರಹಗಳು

6) ಫೋಟೋಗ್ರಾಫಿ

7) ಪೈಂಟಿಂಗ್

8) ಅಧ್ಯಾಪಕ ವೃತ್ತಿ

9) ನಮ್ಮ ಬಡಾವಣೆಯ ಸಂಘದ ಉಪಾದ್ಯಕ್ಷ ರಾಗಿ ಅನೇಕ ಕೆಲಸಗಳು .

ಇದೊಂದೇ ಸಂಚಿಕೆಯಲ್ಲಿ ಇವೆಲ್ಲವನ್ನೂ ಹಾಕಿದರೆ ತುಂಬಾ ಜಾಸ್ತಿ ಆಗುತ್ತದೆ .ಆದ್ದರಿಂದ ನಾನು ಮುಂದಿನ ಸಂಚಿಕೆಯಲ್ಲಿ ಕೆಲವನ್ನು ಹಾಕುತ್ತೇನೆ ಈ ಸಂಚಿಕೆಯಲ್ಲಿ ಮುಖ್ಯವಾಗಿ ಅವರು ಮೊಬೈಲ್ ಮನೆ ಅಥವಾ ಪೋರ್ಟಬಲ್ ಹೌಸ್ , ಎಂದರೆ "ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತೆಗೆದುಕೊಂಡು ಹೋಗಬಹುದಾದಂತಹ ಕಟ್ಟಡ". ಇದರ ವಿನ್ಯಾಸದ ಬಗ್ಗೆ ವಿಸ್ತಾರವಾಗಿ ಹಾಕುತ್ತೇನೆ. ಅದರ ಜೊತೆಗೆ ಅವರು ಹೊಸದಾಗಿ ಕಟ್ಟಿರುವ ಇತರ ಕೆಲವು ಮನೆಗಳನ್ನು  ಹಾಕುತ್ತೇನೆ. ಉಳಿದ ಕೆಲವು ಮನೆಗಳು, ಇತರ ಹವ್ಯಾಸಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಹಾಕುತ್ತೇನೆ .

ಸ್ಥಳಾಂತರಿಸಬಹುದಾದ ಮನೆ (Portable house)

ಇದು ಇವರ ಅತ್ಯಂತ ವಿಶೇಷವಾದ ಕೌಶಲ್ಯ .

ಅವರ ಮನೆಯ ಒಂದು ನೋಟ 

ಆರ್ಕಿಟೆಕ್ಟ್ ಕೆ ಜಯರಾಮ್ ಅವರು 1989 ರಲ್ಲಿ ಸ್ಥಳಾಂತರಿಸಬಹುದಾದ ಮನೆ (Portable house) ಒಂದರ ವಿನ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿದ್ದರು.

 ಈ ಮನೆ ಸಾಕಷ್ಟು ಸುದ್ದಿ ಮಾಡಿತ್ತು. ಅನೇಕ ದಿನಪತ್ರಿಕೆಗಳಲ್ಲಿ ವಾರ ಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು .

ನಂತರ ಟಿವಿಯಲ್ಲಿ ಪೋರ್ಟಬಲ್ ಮನೆಯ ಬಗ್ಗೆ ಸಂದರ್ಶನ ಮಾಡಲಾಯಿತು. ಈ ಮನೆಯನ್ನು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯ ಬಳಿ ಇರುವ ಕಿರ್ಲೋಸ್ಕರ್ ಬಡಾವಣೆಯಲ್ಲಿ ಮೊದಲು ತಯಾರಿಸಲಾಗಿದ್ದು, ನಂತರ ಸುಮಾರು ನಾಲ್ಕು ಕಿಲೋಮೀಟರ್ ದೂರವಿರುವ ವಿಜಯನಗರ ಬಡಾವಣೆಗೆ 1990ರಲ್ಲಿ ಸ್ಥಳಾಂತರಿಸಲಾಯಿತು .

ಮನೆಯ ಹೊರನೋಟಗಳು 

ಇಡೀ ಪೋರ್ಟಬಲ್ ಮನೆಯನ್ನು ಬಿಡಿಬಿಡಿ ಭಾಗಗಳಿಂದ ಮಾಡಲಾಗಿದೆ.

ಲಿವಿಂಗ್ ಕೋಣೆ

ಇದು ಒಂದು ವಿಶಿಷ್ಟ ಆಕೃತಿ ಹೊಂದಿದ್ದು, ಪೀಠೋಪಕರಣಗಳನ್ನು ಮನೆಯ ವಿನ್ಯಾಸದಲ್ಲಿ ಅಳವಡಿಸಲಾಯಿತು. ಗೋಡೆಗಳನ್ನು ವಾಲಿದಂತೆ ಕಟ್ಟಿ, ಅದು ಸೋಫಾ ಗಳಲ್ಲಿ ಇರುವಂತೆ ಬೆನ್ನು ಒರಗಲು ಅನುವು ಮಾಡಿಕೊಡಲಾಯಿತು. ಹಾಗೆಯೇ ನೆಲವನ್ನು ಕೋಣೆಯ ಸುತ್ತಲೂ ಎತ್ತರಿಸಿ, ಕೂರಲು ವ್ಯವಸ್ಥೆ ಮಾಡಲಾಯಿತು.

ಈ ಮಾದರಿಯ ಮನೆಗಳಲ್ಲಿ ಮರದ ಸೋಫಾ ಕುರ್ಜಿಗಳ ಅಗತ್ಯ ಇರುವುದಿಲ್ಲ.

ಗೋಡೆಗಳ ಎತ್ತರ ಎಷ್ಟು ಬೇಕೋ ಅಷ್ಟು ಮಾತ್ರ ಇದ್ದು, ನಮ್ಮ ಅಗತ್ಯಕ್ಕೆ ತಕ್ಕಂತೆ ಆಕಾರ ಕೊಟ್ಟಿರುವುದರಿಂದ ಗೋಡೆಗಳು ಮಾಮೂಲಿ ಮನೆಗಳಂತೆ ನೆಟ್ಟಗೆ ಇರುವುದಿಲ್ಲ.

ಟ್ರೈಲರ್ ಒಂದರ ಮೇಲೆ ಹತ್ತಿಸಲಾಯಿತು. ನಂತರ ಉಗ್ಗಿನ ಹಗ್ಗಗಳನ್ನು ಬಳಸಿ ಕಟ್ಟಿ ಹೊಸ ಜಾಗಕ್ಕೆ ಸಾಗಿಸಲಾಯಿತು. ಈ ಸ್ಥಳದಲ್ಲಿ ಮೊದಲೇ ಸೂಕ್ತ ಅಡಿಪಾಯ ಹಾಕಿ ನಿರ್ಮಿಸಿದ್ದ ಬುನಾದಿಯ ಮೇಲೆ ಇದನ್ನು ಇಳಿಸಲಾಯಿತು. ಇದು ಸುಮಾರು 12 x 12 x 9 ಎತ್ತರವಿದೆ .

ಡೈನಿಂಗ್ ರೂಮ್

ಇದೇ ರೀತಿಯಲ್ಲಿ ಡೈನಿಂಗ್ ರೂಮ್ ನಲ್ಲೂ ಸುತ್ತಲೂ ನೆಲವನ್ನು ಎತ್ತರಿಸಿ ಕೂರಲು ಸ್ಥಳಾವಕಾಶ ಮಾಡಿದ್ದು ,ಹೆಚ್ಚುವರಿಯಾಗಿ ಮರದ ಆಸನಗಳ ಅಗತ್ಯ ಇಲ್ಲ .ಮಧ್ಯೆ ಮಾತ್ರ ಡೈನಿಂಗ್ ಟೇಬಲ್ ಇದ್ದರೆ ಸಾಕು. ಸಾಮಾನ್ಯವಾಗಿ ಊಟ ಮಾಡುವಾಗ ನೇರ ಕುಳಿತು ತಿನ್ನುವುದರಿಂದ ಕೊನೆ ಗೋಡೆಗಳು ನೆರವಾಗಿವೆ.

ಇದರ ಅಳತೆ ಸುಮಾರು 9 ಅಡಿ ಇದ್ದು, ಗೋಡೆಯದಪ್ಪ ಕೇವಲ ಮೂರು ಇಂಚು ಇದೆ .ಡೈನಿಂಗ್ ರೂಮಿನ ಭಾರ ಸುಮಾರು 10 ಟನ್

ಮಲಗುವ ಕೋಣೆ  

ಮಲಗುವ ಕೋಣೆ  5 ಭಾಗಗಳಿಂದ ಮಾಡಲಾಗಿದ್ದು, ಇದರಲ್ಲಿ ಮಲಗುವ ಸ್ಥಳವೇ ಒಂದು ಸಣ್ಣ ತೆರೆದ ಕೋಣೆಯಂತಿದ್ದು ,ಸುಮಾರು 7x 6 ಅಡಿ ಇದೆ. ಹೆಚ್ಚು ಎತ್ತರವಿಲ್ಲ .ಇಲ್ಲಿಯೂ ಗೋಡೆ ಮೂರು ಇಂಚಿನಷ್ಟು ಮಾತ್ರ ದಪ್ಪವಿದೆ .ತಲೆ ಕಡೆ ಗೋಡೆ ಒರಗುಳು ಅನುಕೂಲವಾಗುವಂತೆ ಹಿಂದಕ್ಕೆ ವಾಲಿದೆ .ಹಾಸಿಗೆ ಮೇಲೆ ಕಾಲು ಚಾಚು ಕೊಂಡು ಕೂತು ಬೆನ್ನಿಗೆ ಆಧಾರ ಇರುವುದರಿಂದ ಓದಲು ಅನುಕೂಲವಾಗಿದೆ.

ಈ ಸ್ಥಳಕ್ಕೆ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಹಾಗಾಗಿ ಮಲಗುವ ಕ್ರಿಯೆಯೊಂದಿಗೆ ಹಾಸಿಗೆಯಲ್ಲಿ ಒರಗಿ ಕೂತು ,ಮಲಗು ಮುನ್ನ ಓದುವ ಅಭ್ಯಾಸ ಇರುವವರಿಗೆ ಇದು ಅನುಕೂಲಕರವಾಗಿದೆ.

ಡ್ರೆಸ್ಸಿಂಗ್ ಕೋಣೆ

ಇದೆ ರೀತಿಯಲ್ಲಿ ಡ್ರೆಸ್ಸಿಂಗ್ ಕೋಣೆ ,ಒಂದು ಸಣ್ಣ ಟೇಬಲ್ ಜೊತೆಗೆ ವಾರ್ಡ್ರೋಬ್ ಇದ್ದು, ಸುಮಾರು 8x6 ಅಡಿ ಇದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆಗಳನ್ನು ಮಾಡಲು ಪ್ರತ್ಯೇಕ ಕೋಣೆಯ ಭಾಗವಿದ್ದು, ಇಲ್ಲಿ ಇಬ್ಬರು ಒರಗಿಕೊಂಡು ಆರಾಮವಾಗಿ ಕೂರಬಹುದು. ಮನೆ ಇತರ ಕೋಣೆಗಳಂತೆ ಇಲ್ಲಿಯ ಗೋಡೆಗಳು 3 ಇಂಚು ದಪ್ಪ ಬಿದ್ದು ಎಷ್ಟು ಬೇಕೋ ಅಷ್ಟು ಮಾತ್ರ ಎತ್ತರ ಇದೆ .ಹೋಗಿ ಕೂರುವ ಸ್ಥಳ ಎತ್ತರವಾಗಿ ಇದೆ. ಬೆಡ್ರೂಮ್ನಲ್ಲಿ ಬರೆಯಲು ಅಧ್ಯಯನ ಮಾಡಲು ಪ್ರತ್ಯೇಕ ಸ್ಥಳವಿದ್ದು, ಇಲ್ಲಿಯೂ ಕೂರುವ ಹಾಗೂ ಬರೆಯುವ ಟೇಬಲ ಕ್ರಿಯೆ ಆದರಿಸಿ ರೂಪವನ್ನು ಕೊಡಲಾಗಿದೆ .

ಬೌದ್ಧ ವಿಹಾರಗಳಲ್ಲಿ ಇರುವಂತೆ ಉತ್ತಮ ಏಕಾಗ್ರತೆ ನುಣುಪಾದ ಸಿಮೆಂಟ್ ನ ಕುರ್ಚಿ ಇದ್ದು, ಆರಾಮವಾಗಿ ಕುಳಿತು ಓದಲು ಬರೆಯಲು ಅನುಕೂಲಕರವಾಗಿದೆ .

ಡ್ರಾಯಿಂಗ್ ಕೋಣೆಯ ಒಂದು ನೋಟ ( ಇದರಲ್ಲಿ ಕಾಂಕ್ರೀಟ್ ಕುರ್ಚಿ ಗೂ ಎತ್ತರ ಬದಲಿಸುವ ರೀತಿ ಇದೆ )

ಅಡುಗೆ ಮನೆ

ಅಡುಗೆ ಮನೆಯಲ್ಲಿ ಈಗಾಗಲೇ ಬಹುತೇಕ ಮನೆಗಳಲ್ಲಿ ನಿಂತು ಅಡುಗೆ ಮಾಡುವ ರೀತಿಯಲ್ಲಿ ಕಟ್ಟೆಗಳಿದ್ದು, ಸೂಕ್ತ ಸಿಂಕ್ ಹಾಗೂ ಡ್ರೈನ್ ಬೋರ್ಡ್ ವ್ಯವಸ್ಥೆಯಿದೆ .ಈ ಕೋಣೆಯು ಕೇವಲ ಮೂರು ಇಂಚು ಗೋಡೆಗಳನ್ನು ಹೊಂದಿದ್ದು ಸುಮಾರು 6x 10 ಅಡಿಗಳಷ್ಟಿದೆ. ಗೋಡೆಗಳು ತೆಳುವಾದಂತೆಲ್ಲ ಬಾಗುವ ಸಾಧ್ಯತೆ ಇರುವುದರಿಂದ, ಗೋಡೆಗಳನ್ನು ಮಡಿಚಲಾಗಿದೆ. ಒಂದು ಹಾಳೆಯನ್ನು ಹಾಗೆಯೇ ಸುಮ್ಮನೆ ಒಂದು ಕಡೆ ಹಿಡಿದರೆ ಬಾಗುತ್ತದೆ. ಅದೇ ಹಾಳೆಯನ್ನು ಉದ್ದಕ್ಕೆ ಹಿಡಿದು ಮಡಚಿದರೆ ಬಾಗುವುದಿಲ್ಲ. ಇದೇ ರೀತಿಯಲ್ಲಿ ಕಿಟಕಿ, ಬಾಗಿಲುಗಳ ಬಳಿ ಮಡಚಿ, ತೆಳುಗೋಡುಗಳಿಗೆ ಬಲ ವೃದ್ಧಿ ಮಾಡಲಾಗಿದೆ

ಸ್ನಾನದ   ಕೋಣೆ

ಸ್ನಾನದ ಕೋಣೆ ಒಂದರ ಮೇಲೆ ಒಂದು ಎರಡು ಗೋಲಾಕೃತಿಗಳಂತಿದೆ .ಈ ಕೋಣೆಯು ನಾವು ಸ್ನಾನ ಮಾಡುವ ಕ್ರಿಯೆಯನ್ನು ಆಧರಿಸಿ ಆಕಾರವನ್ನು ಕೊಡಲಾಗಿದೆ. ಯಾವ ಕಡೆಯೂ ಕೈ ತಾಕದಂತೆ ಅದರ ಮೇಲೆ ಎಷ್ಟು ಬೇಕೋ ಅಷ್ಟು ಮಾತ್ರ ಸ್ಥಳವನ್ನು ನೀಡಲಾಗಿದೆ. ಸುಮಾರು 2 ಇಂಚು ಗೋಡೆಗಳನ್ನು ಹೊಂದಿದೆ. ಗೋಲಾಕಾರಗಳಿಗೆ ಅವುಗಳ ಆಕಾರವೇ ಸಾಕಷ್ಟು ಬಲವನ್ನು ನೀಡುತ್ತದೆ. ಉದಾಹರಣೆಗೆ ಮೊಟ್ಟೆಯ ಚಿಪ್ಪು ತೆಳ್ಳಗಿದ್ದರು ಸುಲಭವಾಗೇ ಹೊಡೆಯುವುದಿಲ್ಲ. ಅದೇ ರೀತಿ ಗೋಲಾಕೃತಿಯು ಈ ಕೋಣೆಗೆ ತೆಳ್ಳಗಿದ್ದರು ನಾಲ್ಕು ಕಿಲೋ ಮೀಟರ್ ಪ್ರಯಾಣದ ನಂತರವೂ ಸದೃಢವಾಗಿದೆ . ಮನೆ ಎಂದರೆ ಒಂದೇ ಸ್ಥಳದಲ್ಲಿ ಬೇರೂರ ಬೇಕು ಎಂದೇನೂ ಇಲ್ಲ . ನಾನ ಕಾರಣಗಳಿಂದಾಗಿ ಒಮ್ಮೆ ಕಟ್ಟಿದ ಮನೆಯನ್ನು ಬೇರೆಡೆಗೆ ,ಇಲ್ಲವೇ ಇರುವ ನಿವೇಶನದಲ್ಲಿ ಬದಲಾಯಿಸಿ ಇಡಬೇಕಾಗುತ್ತದೆ. ಮಾಮೂಲಿ ಇಟ್ಟಿಗೆ ಕಾಂಕ್ರೀಟ್ ಗಳಿಂದ ಮನೆಯನ್ನು ಕಟ್ಟಿದರೆ, ಒಂದು ಇಂಚು ಕೂಡ ಅಲುಗಾಡುವುದಿಲ್ಲ. ಏಕೆಂದರೆ ಇವೆಲ್ಲಾ ನೇರ ಭಾರ ಅಂದರೆ ಮೇಲಿನಿಂದ ತಾರಸಿ ಭಾರವನ್ನು ಹೊರಲು ಸಾಧ್ಯವೇ ವಿನಹ ಅಡ್ಡಾದಿಡ್ಡಿ ಆಗಿ ಎದುರಾಗುವ ವಿವಿಧ ರೀತಿಯ ಭಾರ ಹೊರಲು ಆಗುವುದಿಲ್ಲ. ಯಾವುದೇ ದಿಕ್ಕಿನಿಂದ ಬಂದರೂ ಭಾರ ಹಾಗೂ ಸೈಡ್ ಒತ್ತಡ ಹೂರುವಂತಿರಬೇಕು ಎಂದರೆ ಆಗ ಮನೆಗಳನ್ನು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಬೇಕಾಗುತ್ತದೆ .ಅದನ್ನು ನೂರಾರು ಕಿಲೋಮೀಟರ್ ಹೊತ್ತು ಹೋದರು ಏನು ಆಗುವುದಿಲ್ಲ. ಮೊಬೈಲ್ ಮನೆಗಳ ವಿಶೇಷವೇ ಇದು ಈ ಮನೆಗಳನ್ನು ಹೊತ್ತುಯುವುದಕ್ಕೇ ವಿನ್ಯಾಸ ಮಾಡಿರುವುದರಿಂದ, ನಾವು ನಮ್ಮ ನಿವೇಶನ ಅಥವಾ ಹೊಲ ಹತೋಟಗಳಲ್ಲಿ ಕೆಲವಾರು ಅಡಿ ಸ್ಥಳಾಂತರಗೊಂಡರೆ ಮತ್ತೆ ಎಳೆದು ತಂದು ಮೂಲ ಸ್ಥಾನದಲ್ಲಿ ಯಾವುದೇ ಹಾನಿ ಇಲ್ಲದೆ ನಿಲ್ಲಿಸಕೊಳ್ಳಬಹುದು.

ಈ ಮನೆಯ ಸಂಪೂರ್ಣ ಡ್ರಾಯಿಂಗ್ ಹಾಗೂ ವಿನ್ಯಾಸ ವನ್ನು ಶ್ರೀ ಕೆ ಜಯರಾಂ ಅವರೇ ಮಾಡಿದ್ದಾರೆ.

ಮೊಬೈಲ್ ಮನೆ ಗಟ್ಟಿಮುಟ್ಟು ಆದರೆ ತೆಳ್ಳಗೆ ಇರಬೇಕು. ಮನೆಯನ್ನು ಎಲ್ಲೆಂದರಲ್ಲಿ ಎತ್ತಿಡಬೇಕು ಎಂದರೆ ಅದು ಸ್ವಾಭಾವಿಕವಾಗಿ ಮಾಮೂಲಿ ಮನೆಗಳಿಗಿಂತಲೂ ಹೆಚ್ಚು ಗಟ್ಟಿಯಾಗಿದೆ ಬೇಕು ಹಾಗೂ ಹಗುರವಾಗಿರಬೇಕು. ಇಲ್ಲದಿದ್ದರೆ ಇಡೀ ಮನೆಯನ್ನು ಹೊತ್ತು ಒಯ್ಯುವುದೇ ಒಂದು ದೊಡ್ಡ ತಲೆನೋವು ಆಗಿ ಪರಿಣಮಿಸುತ್ತದೆ. ಮಾಮೂಲಿ 9 ಇಂಚಿನ ಗೋಡೆ ಹೊಂದಿರುವ ಮನೆ ಪ್ರತಿ ಚದುರಕ್ಕೆ ಅಂದರೆ ಒಂದು ಕೋಣೆ 10 x10 ಅಡಿ ಇದ್ದರೆ ಅದರ ಭಾರ ಸುಮಾರು 40 ಟನ್ ಇರುತ್ತದೆ .ಇದನ್ನು ಇಡೀ ಮನೆಯ ಮೇಲೆ ಲೆಕ್ಕ ಹಾಕಿ ನೋಡಿದರೆ ಸುಮಾರು 400 ಟೆನ್ ಆಗಿಬಿಡುತ್ತದೆ .ಮೊದಲನೇದಾಗಿ ಇಟ್ಟಿಗೆ ಮನೆಗಳನ್ನು ಕೆಲವೇ ಇಂಚು ಜಗಿಸಲು ಕೂಡ ದುಬಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತ್ತೀಚಿಗೆ ಇಟ್ಟಿಗೆಯಲ್ಲಿ ಕಟ್ಟಿದ ಮನೆಯನ್ನು ಕೆಲವಾರು ಅಡಿ ಜರಗಿಸಿ ರೈಲು ಹಳಿಗಳಿಗೆ ದಾರಿ ಮಾಡಿಕೊಡಲು ಶ್ರೀರಂಗಪಟ್ಟಣದಲ್ಲಿ ಹತ್ತಾರು ಕೋಟಿ ವ್ಯಯಿಸಿದ್ದು ನಿಮಗೆಲ್ಲ ತಿಳಿದೇ ಇದೆ. ಹಾಗಾಗಿ ಮನೆ ಮೊಬೈಲ್ ಆಗಲು ಅದು ಇಟ್ಟಿಗೆ ಕಾಂಕ್ರೀಟ್ ಬ್ಲಾಕ್ ಬಿಟ್ಟು ಇತರೆ ವಸ್ತುಗಳಿಂದ ಮಾಡಬೇಕಾಗುತ್ತದೆ .

ಮೊಬೈಲ್ ಮನೆ ಕಟ್ಟುವ ಸಾಮಗ್ರಿಗಳು:

ವಿಶೇಷ ವಿನ್ಯಾಸ ಸದೃಢ ತೆಳು ಲಘು ಭಾರ ಎಂದಾಕ್ಷಣ ನಾವು ದುಬಾರಿ ಆಮದಾದ ವಸ್ತುಗಳಿಂದ ಎಲ್ಲೆಂದರಲ್ಲಿ ಹೊತ್ತಯ್ಯಬಹುದಾದ ಮನೆಗಳನ್ನು ಕಟ್ಟಬೇಕು ಎಂದೇನೂ ಇಲ್ಲ. ನಮಗೆಲ್ಲ ಚಿರಪರಿಚಿತವಾದ ಸಾವಿರಾರು ವರ್ಷಗಳಿಂದ ರೋಮ್ ಸಾಮ್ರಾಜ್ಯದಲ್ಲಿ ಬಳಕೆಯಲ್ಲಿದ್ದ ಕಾಂಕ್ರೀಟ್ ಬಳಸಬಹುದು. ಆದರೆ ಮಾಮೂಲಿ ಕಾಂಕ್ರೀಟ್ ಸೆಳೆಯುವ ಭಾರವನ್ನು ಅಂದರೆ ಟೆನ್ಶನ್ ಸ್ಟ್ರೆಂಗ್ತ್ ಎದುರಿಸಲು ನಿಶಕ್ತ .ಆದ ಕಾರಣ ಉಕ್ಕಿನ ಸರಳುಗಳನ್ನು ಬಳಸಿ ಮೊಬೈಲ್ ಮನೆ ಕಟ್ಟಬಹುದು. ನಮ್ಮ ತಾರಸಿಗಳಿಗೆ ಆರ್ ಸಿ ಸಿ ಬಳಸುವುದು ತುಂಬಾ ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ನಮ್ಮ ಮನೆಯ ಗೋಡೆಗಳನ್ನು ಸೂಕ್ಷ್ಮ ರೀತಿಯಲ್ಲಿ ವಿನ್ಯಾಸ ಮಾಡಿ ಕಟ್ಟಿದರೆ ಭೂಕಂಪ ನಿರೋಧಕ ಗುಣ ಹೊಂದುವುದರ ಜೊತೆಗೆ ಮನೆ ಅತಿಂದಿತ್ತ ಜರುಗಿದರು ಮತ್ತೆ ಹೊತ್ತು ತಂದು ಮೊದಲಿದ್ದ ಜಾಗದಲ್ಲೇ ಇಟ್ಟುಕೊಳ್ಳಬಹುದು. ತಾರಸಿ ದಪ್ಪ ಇರಬೇಕಾಗುತ್ತದೆ .ಆದರೆ ಗೋಡೆಗಳಿಗೆ ಸುಮಾರು ಮೂರು ನಾಲ್ಕು ಇಂಚು ಇದ್ದರೆ ನಡೆಯುತ್ತದೆ. ಆದರೆ ಮೊಬೈಲ್ ಮನೆ ಕಟ್ಟುವ ಮೊದಲು ನುರಿತ ಆರ್ಕಿಟೆಕ್ಟ್ ಇಂಜಿನಿಯರಿಂಗ್ ಗಳಿಂದ ವಿನ್ಯಾಸ ಮಾಡುವುದು ಕಡ್ಡಾಯ. ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತೇ ಸೂಚಿಸುತ್ತದೆ. ತಲೆಯ ಮೇಲೆ ಒಂದು ಸೂರು ಕಟ್ಟಿಕೊಳ್ಳುವುದು ಎಷ್ಟು ಕಷ್ಟ ಎಂಬುದು . ಭಾರ ಕಡಿಮೆ ಮಾಡಲು ವಿವಿಧ ವಿನ್ಯಾಸಗಳ ಪ್ರಯೋಗ ಮೊಬೈಲ್ ಮನೆ ಸಾಕಾರಗೊಳ್ಳಬೇಕಾದರೆ ಅದರ ಭಾರ ಆದಷ್ಟು ಕಡಿಮೆ ಇರಬೇಕು. ಮನೆ ಎಂದರೆ ಹೀಗೆ ಇರಬೇಕು ಎಂಬುದಕ್ಕೆ ಸವಾಲು ಮಾಡುವುದರ ಜೊತೆಗೆ ಈ ರೀತಿಯ ವಿಶೇಷ ವಿನ್ಯಾಸ ಭಾರವನ್ನು ಕಡಿಮೆ ಮಾಡಿತು. ಈ ಮನೆಯಲ್ಲಿ ನಾಲ್ಕಾರು ಮೈಲು ಹೊತ್ತೊಯ್ದರು ಯಾವುದೇ ಬಿರುಕು ಉಂಟಾಗಿಲ್ಲ .ಚಿತ್ರ ನೋಡಿ ಮನೆ ಎಂದರೆ ಅದು ಸುಸ್ಥಿರವಾಗಿರುತ್ತದೆ .ಗಾಳಿ ಮಳೆ ಎಷ್ಟೇ ಜೋರಾಗಿ ಬೀಸಿ ಅಪ್ಪಳಿಸಿದರು ಏನೂ ಆಗುವುದಿಲ್ಲ. ಭದ್ರ ಬುನಾದಿಯ ಮೇಲೆ ನಮ್ಮ ಮನೆಯಲ್ಲಿ ನಿಂತಿದೆ ಎಂಬುದು ಬಹು ಜನರ ನಂಬಿಕೆ .ಆದರೆ ಮನೆಯ ಬುನಾದಿ ಅಲುಗಾಡಿದರೆ, ಭೂಕುಸಿತ ಉಂಟಾದರೆ, ಗುಡ್ಡ ಕುಸಿದು ಮನೆಯನ್ನು ದಬ್ಬಿ ಹಾಕಿದರೆ ಏನಾಗಬಹುದು? ಬಹುತೇಕ ಮನೆಗಳು ನೇರ ಭಾರವನ್ನು ಹೊರಲು ವಿನ್ಯಾಸ ಮಾಡಲಾಗಿದೆ ಹೊರತು ಅಕ್ಕಪಕ್ಕದಿಂದ ಬೀಳುವ ಹೊಡೆತಗಳನ್ನು ತಾಳಿಕೊಳ್ಳುವಂತೆ ಸದೃಢವಾಗಿ ಇರುವುದಿಲ್ಲ. ಕೆಲವೇ ಇಂಚುಗಳಷ್ಟು ಭೂಮಿಕದಳಿದರೂ ಸಾವಿರಾರು ಮನೆಗಳು ಬಿರುಕು ಬಿಟ್ಟು ವಾಸವಾಗಿ ಉಳಿಯುವುದಿಲ್ಲ. ಮಾಮೂಲಿ ವಿನ್ಯಾಸದ ಮನೆಗಳು ಭೂಕಂಪ ನಿರೋಧಕ ಗುಣಗಳನ್ನಾಗಲಿ ಭೂಕುಸಿತದ ಆಘಾತವನ್ನು ತಡೆದುಕೊಳ್ಳುವಂತೆ ವಿನ್ಯಾಸವನ್ನು ಮಾಡಿರುವುದಿಲ್ಲ. ಹೀಗಾಗಿ ವಿಶೇಷ ಪರಿಸರಗಲ್ಲಿ ವಿಪರೀತ ಮಳೆ ಭೂಕುಸಿತ ಭೂಕಂಪ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಪರ್ಯಾಯ ರೀತಿಯ ವಿನ್ಯಾಸಗಳನ್ನು ಮಾಡಬೇಕಾಗುತ್ತದೆ

ದುಬಾರಿ ವಸ್ತುಗಳನ್ನು ಬಳಸಿ ಐಶಾರಾಮಿ ಮೊಬೈಲ್ ಮನೆಗಳನ್ನು ಬೇರೆ ದೇಶಗಳಲ್ಲಿ ತಯಾರು ಮಾದಿ, ಅಲಂಕರಿಸಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಇವೆಲ್ಲ ಬಹುದು ಭಾರಿಯಾಗುತ್ತದೆ ಜೊತೆಗೆ ನಮ್ಮ ನೆಲ ಜಲ ಹಾಗೂ ಸಂಸ್ಕೃತಿಗೆ ಹೊಂದುವಂತೆ ಇತ್ತೀಚೆಗೆ ಸಾಂಪ್ರದಾಯಿಕ ವಸ್ತು ಆದ ಇಟ್ಟಿಗೆಗಳಿಗಿಂತಲೂ ಕಾಂಕ್ರೀಟ್ ಬ್ಲಾಕ್ ಉಪಯೋಗಿಸಿ ಮನೆ ಕಟ್ಟುವುದು ಸಾಮಾನ್ಯ ಆಗುತ್ತಿದೆ. ಹಾಗಾಗಿ ಇದರ ಮುಂದುವರೆದ ಭಾಗವಾಗಿ, ಇಡೀ ಮನೆಯನ್ನು ಗೋಡೆ ಸಹಿತ ಆರ್ ಸಿ ಸಿ ಅಲ್ಲೇ ಕಟ್ಟುವುದರಿಂದ, ಹೆಚ್ಚು ದೃಢ ಆಗೋದರ ಜೊತೆಗೆ ಮೊಬೈಲ್ ಆರ್ಕಿಟೆಕ್ಟ್ ಜಂಗಮ ವಾಸ್ತುಶಿಲ್ಪಡೆಗೂ ನಾವು ಹೊರಳಬಹುದು . ಅಡವಿಯಲ್ಲಿ ಮನೆ ಮಾಡಿ ಮೃಗ ಕೆ ಅಂಜಿದರೆ ಎಂತಯ್ಯ ಎಂಬಂತೆ ಗುಡ್ಡ ಬೆಟ್ಟಗಳಲ್ಲಿ, ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಮೊಬೈಲ್ ಮನೆಗಳ ಬಳಕೆ ಅನಿವಾರ್ಯವಾಗುತ್ತದೆ.

ಈವರು ನಿರ್ಮಿಸಿರುವ ಕೆಲವು ವಿಶೇಷ ಮನೆಗಳು, ಕಟ್ಟಡ ಗಳು  

ಒಂದು ಇಡೀ ಕಾರ್ಖಾನೆ ಯನ್ನು ನಿರ್ಮಿಸಿದ್ದಾರೆ 

ಕನ್ನಡ ಚಿತ್ರ ನಿರ್ದೇಶಕ , ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ಗೆಸ್ಟ್ ಹೌಸ್ .

ಇದನ್ನು ಫಿಲ್ಮ್ ರೋಲ್ ನಂತೆ ವಿನ್ಯಾಸ ಮಾಡಿದ್ದಾರೆ 

ಪ್ರಕಾಶ್ ಪ್ರಭು ಅವರ ಮನೆ 

ಶ್ರೀ ಪ್ರಕಾಶ್ ಪ್ರಭು ಅವರ ವಾಣಿಜ್ಯ ಕಟ್ಟಡ 

ಶ್ರೀ ರವೀಂದ್ರ ಶ್ರೀಧರ್ ಅವರ ನಿವಾಸ 

ಅವರ ಉಳಿದ ಹವ್ಯಾಸಗಳನ್ನು ಮುಂದಿಯನ ಸಂಚಿಕೆಯಲ್ಲಿ ನೋಡೋಣ 

 

ಪದಬಂಧ -ಭಾಗ -  3    .

ರಚನೆ : ಡಾ || ಎ ಎಸ್ ಚಂದ್ರಶೇಖರ ರಾವ್ 

ಸರಿ ಉತ್ತರ ಬರೆದವರು :

ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯನಾರಾಯಣ ರಾವ್  ಮತ್ತು

ಶ್ರೀಮತಿ ರಾಜೇಶ್ವರಿ ನಾಗರಾಜ್ 

ಇಬ್ಬರುಗೂ  ಅಭಿನಂದನೆಗಳು 

ಈ ಸಂಚಿಕೆಯ ಪದಬಂಧ 

ಮುದ್ದುಮಕ್ಕಳ ಮುಗ್ಧ ಮನ - ಭಾಗ-11 

ಡಾ || ಎ ಎಸ್ ಚಂದ್ರಶೇಖರ ರಾವ್ 

ಹ್ಯಾಪಿ ಬರ್ತಡೆ ಮಮ್ಮಿ

ಆ ದಿನ ಸಂಜೆ ನಮ್ಮ ಮನೆಯಲ್ಲಿ ಕರೆಂಟು ಹೋಗಿತ್ತು ನನ್ನ ಸೊಸೆ ಅಡುಗೆ ಮನೆಯಲ್ಲಿ ಮುಂಭತ್ತುಗಳನ್ನು ಹಚ್ಚಿ ಆ ಬೆಳಕಿನಲ್ಲಿ ಚಪಾತಿ ಮಾಡುತ್ತಿದ್ದಾಳೆ ನನ್ನ ಮೊಮ್ಮಗ ಶರಣ ಆಗ ಮೂರುವರೆ ವರ್ಷದವನಾಗಿದ್ದ ಅವನು ಅಲ್ಲೇ ನಿಂತು ಚಪಾತಿ ಮಾಡುವುದನ್ನು ನೋಡುತ್ತಿದ್ದ ಹತ್ತು ನಿಮಿಷಗಳಲ್ಲಿ ಕರೆಂಟ್ ಬಂತು ಅವರ ಅಮ್ಮ ಮೊಮ್ಮತಿಗಳನ್ನು ಓದಿ ಹಾಡಿಸಿದಳು ಅಲ್ಲೇ ಇದ್ದ ಶರಣ್ ಹ್ಯಾಪಿ ಬರ್ತಡೆ ಮಮ್ಮಿ ಅಂದ

ಲೇಖನಗಳು , ಕವನಗಳು 


ಶೀರ್ಷಿಕೆ : 

🖋️ – ಎಸ್. ಸುರೇಶ್

“ಆಧ್ಯಾತ್ಮಿಕತೆ ಮತ್ತು ವಿಜ್ಞಾನ – ದಾರಿ ಬೇರೆ, ಗುರಿ ಒಂದೇ”

(ಲೇಖಕ: ಎಸ್. ಸುರೇಶ್ಈ ಲೇಖನವು ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡರ ಸಂಯೋಜನೆಯ ಮಹತ್ವವನ್ನು ಓದುಗರಿಗೆ ಅರಿಯಿಸಲು ಹಾಗೂ ಜೀವನದಲ್ಲಿ ಅನುಸರಿಸಲು ಪ್ರೇರೇಪಿಸಲು ಬರೆದಿದೆ.)

ಪರಿಚಯ(Introduction): "ವಿಜ್ಞಾನವೇ ದಾರಿ, ಆಧ್ಯಾತ್ಮಿಕತೆ ಗುರಿ – ಒಟ್ಟಿಗೆ ಸಫಲತೆ"

ನಮ್ಮ ಜೀವನದ ಎರಡು ಮಹತ್ವದ ಕ್ಷೇತ್ರಗಳು – ಆಧ್ಯಾತ್ಮಿಕತೆ ಮತ್ತು ವಿಜ್ಞಾನ – ಬಹುಶಃ ಭಿನ್ನ ದಾರಿಗಳಂತೆ ಕಂಡರೂ, ಅವುಗಳ ಗುರಿ ಒಂದೇ: ಮಾನವನ ಒಳಗಿನ ಶಾಂತಿ, ಸಮತೋಲನ ಮತ್ತು ಸಮೃದ್ಧಿಯನ್ನು ಸಾಧಿಸುವುದು. ವಿಜ್ಞಾನವು ಜಾಗತಿಕವಾದ ಭೌತಿಕ ಸತ್ಯಗಳನ್ನು ಅನ್ವೇಷಿಸುವಲ್ಲಿ ತೊಡಗಿದರೆ, ಆಧ್ಯಾತ್ಮಿಕತೆ ಮಾನವನ ಒಳಗಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ, ಅದರೊಂದಿಗೆ ಸಮಾಧಾನ ಸಾಧಿಸುವ ಮಾರ್ಗವಾಗಿದೆ. ಈ ಲೇಖನದಲ್ಲಿ, ನಾನು ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡರ ನಡುವೆ ಇರುವ ಸುಕ್ಷ್ಮ ಸಂಬಂಧವನ್ನು ಮತ್ತು ಅವುಗಳ ಒಗ್ಗಟ್ಟಿನಿಂದ ಇಂದು ನಮ್ಮೆಲ್ಲರಿಗೂ ಹೇಗೆ ಲಾಭವಾಗಬಹುದು ಎಂಬುದನ್ನು ಸ್ಪಷ್ಟವಾಗಿ ತಲುಪಿಸಲು ಪ್ರಯತ್ನಿಸುತ್ತಿದ್ದೇನೆ.

  1. ಭೌತಶಾಸ್ತ್ರ ಮತ್ತು ಆಧ್ಯಾತ್ಮಿಕತೆ : "ಶಾಂತಿ ನಿಮ್ಮೊಳಗಿನ ಕಂಪನದಲ್ಲಿ ಆರಂಭವಾಗುತ್ತದೆ"

ಭವಿಷ್ಯತತ್ತ್ವದ ಕ್ವಾಂಟಮ್ ಭೌತಶಾಸ್ತ್ರ ನಮಗೆ ಎನರ್ಜಿಯ ಕಂಪನಗಳ ಮಹತ್ವ ಮತ್ತು ಅವುಗಳ ಪರಸ್ಪರ ಕ್ರಿಯೆಗಳ ಬಗ್ಗೆ ತಿಳಿಸುತ್ತದೆ. ಮಾನವನ ಮೆದುಳಿನಲ್ಲಿ ನಡೆಯುವ ಅನೇಕ  ಆಲೋಚನೆಗಳು ಮತ್ತು ಭಾವನೆಗಳು, ಇವುಗಳಲ್ಲಿನ ಎನರ್ಜಿಯ ಕಂಪನಗಳ ಮೂಲಕ ನಿರ್ವಹಿಸಲಾಗುತ್ತವೆ. ಧ್ಯಾನ ಮತ್ತು ಪ್ರಾರ್ಥನೆಯಂತಹ ಆಧ್ಯಾತ್ಮಿಕ ಅಭ್ಯಾಸಗಳು ಈ ಎನರ್ಜಿಯ ಕಂಪನಗಳನ್ನು ಸ್ಥಿರಗೊಳಿಸಿ, ಮನಸ್ಸಿನ ಶಾಂತ ಸ್ಥಿತಿಗೆ ತಲುಪಿಸಲು ಸಹಾಯಕವಾಗುತ್ತವೆ.

ದೈನಂದಿನ ಉದಾಹರಣೆ: ಪ್ರತಿದಿನವೂ ಬೆಳಗಿನ ಹೊತ್ತಿನಲ್ಲಿ 10 ನಿಮಿಷಗಳ ಧ್ಯಾನ ಮಾಡುವವರು ತಮ್ಮ ಮನಸ್ಸಿನ ಅಸ್ಥಿರತೆಯನ್ನು ಕಡಿಮೆ ಮಾಡಿ, ಒತ್ತಡ ಹಾಗೂ ಕುತೂಹಲದಿಂದ ದೂರವಾಗುತ್ತಾರೆ. ಇದರಿಂದ ದೈನಂದಿನ ಕೆಲಸಗಳಲ್ಲಿ ಜಾಗೃತಿ ಮತ್ತು ಶಾಂತಿ ಪಡೆಯುತ್ತಾರೆ.

  1. ರಸಾಯನಶಾಸ್ತ್ರ ಮತ್ತು ಆಧ್ಯಾತ್ಮಿಕತೆ :"ನಗು ಹಂಚಿಕೊಳ್ಳಿ, ಆರೋಗ್ಯ ಪಡೆಯಿರಿ"

ಮನಸ್ಸಿನ ಸ್ಥಿತಿಯು ದೇಹದ ರಾಸಾಯನಿಕ ಪ್ರಕ್ರಿಯೆಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಧ್ಯಾನದಿಂದ ಉತ್ಸಾಹ ಮತ್ತು ಶಾಂತಿ ಹಾರ್ಮೋನ್ಗಳು – ಸೆರೋಟೋನಿನ್ ಮತ್ತು ಡೋಪಮಿನ್ – ಹೆಚ್ಚು ಉತ್ಪಾದನೆ ಹೊಂದುತ್ತವೆ. ಈ ಹಾರ್ಮೋನ್ಗಳು ನಮ್ಮ ಮನಸ್ಸಿನ ಸಮಾಧಾನ ಮತ್ತು ಸಂತೋಷವನ್ನು ಉತ್ತೇಜಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ.

ದೈನಂದಿನ ಉದಾಹರಣೆ: ಸಂಜೆ ಹೊತ್ತಿನಲ್ಲಿ ನೆರೆದ ಸ್ನೇಹಿತರೊಂದಿಗೆ ನಗು ಹಂಚಿಕೊಂಡಾಗ ಅಥವಾ ಹಾಸ್ಯದೊಂದು ಕೇಳಿದಾಗ, ದೇಹದಲ್ಲಿ ಸಂತೋಷ ಹಾರ್ಮೋನ್ಗಳು ಅಧಿಕವಾಗಿ ಬಿಡುಗಡೆ ಆಗುತ್ತವೆ. ಇದರಿಂದ ಮನಸ್ಸು ಹರ್ಷಭರಿತವಾಗುತ್ತದೆ ಮತ್ತು ಒತ್ತಡದ ಮಟ್ಟ ಕಡಿಮೆಯಾಗುತ್ತದೆ.

  1. ಜೀವಶಾಸ್ತ್ರ ಮತ್ತು ಆಧ್ಯಾತ್ಮಿಕತೆ :"ಶಕ್ತಿ ಸರಾಗವಾಗಿರಲಿ, ಹೃದಯ ಚೈತನ್ಯವಾಗಿರಲಿ"

ಜೀವಶಾಸ್ತ್ರವು ಮಾನವನ ದೇಹದ ವಿವಿಧ ವ್ಯವಸ್ಥೆಗಳ, ಹೃದಯದ ಬಡಿತ, ನರಮಂಡಲದ ಕಾರ್ಯಪ್ರವಾಹದ ಕುರಿತು ವಿವರ ನೀಡುತ್ತದೆ. ಧ್ಯಾನ ಮತ್ತು ಯೋಗಾಭ್ಯಾಸಗಳು ಈ ದೇಹದ ನಾಡೀಮಂಡಲವನ್ನು ಶಮನಗೊಳಿಸಿ, ಹೃದಯದ ಬಡಿತವನ್ನು ನಿಯಂತ್ರಣದಲ್ಲಿರಿಸುವ ಮೂಲಕ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

ದೈನಂದಿನ ಉದಾಹರಣೆ: ಕಾರ್ಯದೊಬ್ಬ ವ್ಯಕ್ತಿ ವಾರಕ್ಕೆ 3-4 ಬಾರಿ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡಿದಾಗ, ಅವರು ತಮ್ಮ ಹೃದಯದ ಬಡಿತ ನಿಯಂತ್ರಣದಲ್ಲಿಟ್ಟುಕೊಂಡು, ದೇಹದ ಒತ್ತಡವನ್ನು ಕಡಿಮೆ ಮಾಡಬಹುದು. ಇದರಿಂದ ಅವರು ಶಕ್ತಿ ಹಾಗೂ ತಳಮಳದಿಂದ ದೂರವಾಗುತ್ತಾರೆ.

  1. ಪರಿಸರ ವಿಜ್ಞಾನ ಮತ್ತು ಆಧ್ಯಾತ್ಮಿಕತೆ : "ಪ್ರಕೃತಿ ನಮ್ಮ ಪ್ರೇಮಿ ಅದನ್ನು ಕಾಪಾಡೋಣ"

ಪರಿಸರ ವಿಜ್ಞಾನವು ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ಸಮತೋಲನದ ಮಹತ್ವವನ್ನು ವಿವರಿಸುತ್ತದೆ. ಆಧ್ಯಾತ್ಮಿಕತೆ ಪ್ರಕೃತಿಯೊಂದಿಗೆ ಮಾನವ ಸಹಜೀವನ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ.

ದೈನಂದಿನ ಉದಾಹರಣೆ: ನಮ್ಮ ಮನೆ ಎದುರು ಇರುವ ಹಸಿರು ಗಿಡಗಳನ್ನು ನೆಡುವುದು, ಮಣ್ಣನ್ನು ಕಾಪಾಡಿಕೊಳ್ಳುವುದು ಮತ್ತು ನೀರನ್ನು ವ್ಯರ್ಥ ಮಾಡದಂತೆ ಜಾಗರೂಕತೆಯಿಂದ ಬಳಕೆ ಮಾಡುವುದೇ ಪ್ರಕೃತಿಗೆ ಗೌರವವಿದ್ದು, ನಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಮೌಲ್ಯಗಳ ಪ್ರತಿಬಿಂಬವಾಗಿದೆ.

5. ಇಂಜಿನಿಯರಿಂಗ್ ಮತ್ತು ಆಧ್ಯಾತ್ಮಿಕತೆ :”ತಂತ್ರಜ್ಞಾನವೇ ನಿಮ್ಮ ಸೇವಕ, ನೀವು ನಿಯಂತ್ರಕ"

ನಾಗರಿಕ  (CIVIL)ಇಂಜಿನಿಯರಿಂಗ್:

ನಗರದ ಮೂಲಸೌಕರ್ಯಗಳು ಮತ್ತು ಭವನ ನಿರ್ಮಾಣಗಳು ನಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಆಧ್ಯಾತ್ಮಿಕತೆ ಈ ಮೂಲಸೌಕರ್ಯಗಳನ್ನು ನೆಮ್ಮದಿ ಮತ್ತು ಶಾಂತಿಯ ವಾತಾವರಣ ನೀಡುವಂತೆ ವಿನ್ಯಾಸಗೊಳಿಸಲು ಮತ್ತು ನಿರ್ವಹಿಸಲು ಮಾರ್ಗದರ್ಶನ ನೀಡುತ್ತದೆ. ಉದಾಹರಣೆಗೆ, ವಾತಾವರಣ ಸ್ನೇಹಿ ಮತ್ತು ಸೌಹಾರ್ದಪೂರ್ಣ ನಗರ ಯೋಜನೆಗಳು ಆಧ್ಯಾತ್ಮಿಕ ತತ್ವಗಳನ್ನು ಪಾಲಿಸುವ ಮೂಲಕ ಸಮುದಾಯದ ಒಗ್ಗಟ್ಟಿಗೆ ನೆರವಾಗುತ್ತವೆ.

ದೈನಂದಿನ ಉದಾಹರಣೆ: ನೀರಿನ ಸರಬರಾಜು ವ್ಯವಸ್ಥೆ ಮತ್ತು ಶುಚಿಗೃಹ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ನಗರ ನಿವಾಸಿಗಳ ಆರೋಗ್ಯ ಮತ್ತು ಮನಶ್ಶಾಂತಿಗೆ ಮಹತ್ವಪೂರ್ಣ.

ಯಾಂತ್ರಿಕ (MECHANICAL)ಇಂಜಿನಿಯರಿಂಗ್:

ಮೆಕ್ಯಾನಿಕಲ್ ಸಾಧನಗಳು ಮತ್ತು ಯಂತ್ರಗಳ ಸರಿಯಾದ ಕಾರ್ಯಾಚರಣೆ ಮತ್ತು ನಿರ್ವಹಣೆ ಜೀವನವನ್ನು ಸುಲಭಗೊಳಿಸುತ್ತದೆ. ಆಧ್ಯಾತ್ಮಿಕತೆ ಇದರ ಬಳಕೆಯಲ್ಲಿ ಸಮತೋಲನ ಮತ್ತು ಜಾಗೃತಿಯನ್ನು ಒದಗಿಸುತ್ತದೆ, ಉದಾಹರಣೆಗೆ, ಯಂತ್ರಗಳ ಮೇಲಿನ ನಿಯಂತ್ರಣ ಮತ್ತು ಸುರಕ್ಷತೆ ನಿಯಮಗಳನ್ನು ಪಾಲಿಸುವುದರಿಂದ ದುರಘಟನೆಯನ್ನು ತಡೆಯಬಹುದು.

ದೈನಂದಿನ ಉದಾಹರಣೆ: ಕಾರ್ಖಾನೆಯಲ್ಲಿ ಯಂತ್ರಗಳ ರಕ್ಷಣೆ ಮತ್ತು ಸುತ್ತಲೂ ಸುರಕ್ಷಿತ ಪರಿಸರ ನಿರ್ಮಿಸುವುದು ಕಾರ್ಮಿಕರ ಮನಸ್ಸಿಗೆ ಶಾಂತಿ ಮತ್ತು ಭರವಸೆ ನೀಡುತ್ತದೆ.

ವಿದ್ಯುತ್(ELECTRICAL)ಇಂಜಿನಿಯರಿಂಗ್:

ವಿದ್ಯುತ್ ಸರಬರಾಜು ಮತ್ತು ಸ್ಮಾರ್ಟ್ ತಂತ್ರಜ್ಞಾನಗಳ ಬಳಕೆ ಜೀವನವನ್ನು ಸುಧಾರಿಸುತ್ತದೆ. ಆದಾಗ್ಯೂ, ಇವು ಮಾನವನ ಒಳಗಿನ ಶಾಂತಿ ಅಥವಾ ಪರಿಸರ ಹಿತಕ್ಕಾಗಿ ಹೇಗೆ ಬಳಸಬೇಕು ಎಂಬುದು ಆಧ್ಯಾತ್ಮಿಕ ತತ್ತ್ವಗಳಲ್ಲಿ ಪ್ರಮುಖವಾಗಿದೆ.

ದೈನಂದಿನ ಉದಾಹರಣೆ: ಬಿಡುಗಡೆ ಮಾಡುತ್ತಿರುವ ವಿದ್ಯುತ್ ಸಾಧನಗಳನ್ನು ಜಾಗ್ರತೆಯಿಂದ ನಿಯಂತ್ರಿಸುವುದು ಮತ್ತು ಅವುಗಳಿಂದ ಉಂಟಾಗುವ ಸೌರಭ, ಸೌರಕ್ಷತೆ ಹಾಗೂ ಪರಿಸರದ ಮೇಲೆ ಪರಿಣಾಮವನ್ನು ಗಮನಿಸುವುದು ಅಗತ್ಯ.

ಇಂಜಿನಿಯರಿಂಗ್ ಮತ್ತು ಆಧ್ಯಾತ್ಮಿಕತೆ:

ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನವು ಮಾನವನ ಜೀವನವನ್ನು ಸುಲಭಗೊಳಿಸುವ ಸಾಧನಗಳನ್ನು ಒದಗಿಸುತ್ತವೆ. ಆದರೆ, ಆಧ್ಯಾತ್ಮಿಕತೆ ಈ ತಂತ್ರಜ್ಞಾನಗಳನ್ನು ಮಾನವನ ಒಳಗಿನ ಶಾಂತಿ ಮತ್ತು ಸಮತೋಲನ ಸಾಧಿಸುವ ಉದ್ದೇಶಕ್ಕಾಗಿ ಹೇಗೆ ಬಳಸಬೇಕು ಎಂಬ ಮಾರ್ಗದರ್ಶನ ನೀಡುತ್ತದೆ.

ದೈನಂದಿನ ಉದಾಹರಣೆ: ನಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಕೆಯಲ್ಲಿ, ಸಮಯ ಮಿತಿಯನ್ನು ಇಟ್ಟುಕೊಳ್ಳುವುದು, ಅದರಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವುದು, ಮತ್ತು ತಂತ್ರಜ್ಞಾನವನ್ನು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಉಪಯೋಗಿಸುವುದು, ಆಧ್ಯಾತ್ಮಿಕ ಶಾಂತಿಗೆ ಅನುಗುಣವಾಗಿದೆ.

ನಿರ್ಣಯ: "ಒಟ್ಟಿಗೆ ಸಾಗಿದರೆ, ಸಾಧನೆಯ ಶಿಖರ ತಲುಪಬಹುದು"

ಆಧ್ಯಾತ್ಮಿಕತೆ ಮತ್ತು ವಿಜ್ಞಾನ – ಎರಡು ವಿಭಿನ್ನ ದಾರಿಗಳಂತೆ ಕಂಡರೂ, ಅವುಗಳ ಗುರಿ ಒಂದೇ – ಮಾನವನ ಒಳಗಿನ ಶಾಂತಿ, ಸಮತೋಲನ ಮತ್ತು ಸಮೃದ್ಧಿಯನ್ನು ಸಾಧಿಸುವುದು. ಈ ಎರಡು ಕ್ಷೇತ್ರಗಳ ಸಮನ್ವಯದಿಂದ, ನಾವು ಆರೋಗ್ಯ, ಮಾನಸಿಕ ಶಾಂತಿ, ಮತ್ತು ಪರಿಸರ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯ. ಇವು ಮಾನವನ ಸಮಗ್ರ ಬೆಳವಣಿಗೆಯ ದಾರಿಯಾಗಿದೆ. ವೈಜ್ಞಾನಿಕ ಆಧಾರಿತ ಆಧ್ಯಾತ್ಮಿಕ ಅಭ್ಯಾಸಗಳು ನಮ್ಮ ಸಮಾಜಕ್ಕೆ ಮತ್ತು ವೈಯಕ್ತಿಕ ಜೀವನಕ್ಕೆ ಬಹುಮೌಲ್ಯವಾಗಿದೆ.

ಸಾಮಾನ್ಯ ಜನರಿಗೆ ಲಾಭಗಳು - ಪ್ರೇರಣಾದಾಯಕ ಉಕ್ತಿಗಳು :

"ನಿಮ್ಮೊಳಗಿನ ಶಕ್ತಿ ಅರಿತುಕೊಳ್ಳಿ, ನಿಮ್ಮ ಸುತ್ತಲೂ ಶಾಂತಿಯನ್ನು ಹರಡಿ."

"ಮಾನವನಿಗೆ ನಂಬಿಕೆಯಿಲ್ಲದೆ ಜ್ಞಾನವೆ ಅರ್ಥವಿಲ್ಲ."

"ವಿಜ್ಞಾನವೇ ನನ್ನ ಕೈಯಲ್ಲಿ ದೀಪ, ಆಧ್ಯಾತ್ಮಿಕತೆ ಮನಸ್ಸಿನ ಪ್ರಕಾಶ."

"ಮಾನವನೇನು ತಿಳಿದುಕೊಂಡರೂ, ಆತ್ಮಜ್ಞಾನವೇ ಸಾರ್ಥಕ."

1.ದ್ವಿಗುಣ ಶಕ್ತಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆ: ವಿಜ್ಞಾನವೇ ತಂತ್ರಜ್ಞಾನಕ್ಕೆ ದಾರಿ ತೋರುತ್ತದೆ, ಆಧ್ಯಾತ್ಮಿಕತೆ ಆ ದಾರಿಗೆ ನಡಿಗೆಯ ಶಾಂತಿಯನ್ನು ನೀಡುತ್ತದೆ.

 2.ಇಂಜಿನಿಯರಿಂಗ್ ಮತ್ತು ಮಾನವ ಜೀವನ: ತಂತ್ರಜ್ಞಾನ ಉನ್ನತವಾಗಿದೆಯಾದರೂ, ಅದರ ಬಳಕೆ ಮಾನವ ಮೌಲ್ಯಗಳಿಗೆ ಹೊಂದಿಕೊಂಡಾಗಲೇ ಸಕಾರಾತ್ಮಕ.

3.ಆರೋಗ್ಯ ಮತ್ತು ಮನಃಶಾಂತಿ: "ಶಾಂತಿ ಒಳಗಿನ ದೀಪ, ಆರೈಕೆ ಅದರ ಎಣ್ಣೆ."

ಧ್ಯಾನ, ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಗಟ್ಟಿ ಮಾಡುತ್ತವೆ. ಒತ್ತಡವನ್ನು ಕಡಿಮೆ ಮಾಡಿ, ನಿದ್ರೆಯ ಗುಣಮಟ್ಟ ಹೆಚ್ಚಿಸುತ್ತವೆ. 4.ಸಮತೋಲನ ಮತ್ತು ಆತ್ಮನಿರೀಕ್ಷಣೆ: "ಸಮತೋಲನವೇ ಸುಖದ ಮೂಲ." ವಿಜ್ಞಾನದಿಂದ ದೊರಕುವ ಮಾಹಿತಿ ನಮ್ಮ ಜೀವನಕ್ಕೆ ನಿಯಮಿತ ಚಟುವಟಿಕೆಗಳನ್ನು ನೀಡುತ್ತದೆ; ಆಧ್ಯಾತ್ಮಿಕತೆ ಅವುಗಳ ಅರ್ಥವನ್ನು ತಿಳಿಸಿ ಆತ್ಮನಿರೀಕ್ಷಣೆಗೆ ಪ್ರೇರೇಪಿಸುತ್ತದೆ. 5.ಪರಿಸರ ಸಂರಕ್ಷಣೆ: "ನೀರು ಉಳಿಸಿ, ಜೀವನ ಉಳಿಸಿ."

ನಾವು ಪ್ರಕೃತಿಯನ್ನು ಗೌರವಿಸುವಾಗ, ಪ್ರಕೃತಿ ನಮ್ಮೆಲ್ಲರ ಜೀವನಕ್ಕೆ ಆರೈಕೆ ನೀಡುತ್ತದೆ. ಸಸ್ಯಾರೋಪಣೆ, ನೀರಿನ ಸಂರಕ್ಷಣೆ ಹಾಗೂ ಮಲಿನತೆ ತಡೆ ಮುಖ್ಯ. 6.ತಂತ್ರಜ್ಞಾನ ಮತ್ತು ಜಾಗೃತಿ: "ತಂತ್ರಜ್ಞಾನ ಸೇವಕ, ಜಾಗೃತಿ ಮಾಲೀಕ."

ತಂತ್ರಜ್ಞಾನವನ್ನು ಜಾಗೃತಿಯಿಂದ ಬಳಸುವುದರಿಂದ ನಮ್ಮ ದಿನಚರ್ಯ ಸುಲಭವಾಗುತ್ತದೆ; ಆದ್ರೆ ಅದರ ದುರುಪಯೋಗ ತಪ್ಪಿಸಬೇಕು. 7.ಸಾಮಾಜಿಕ ಸಬಲತೆ ಮತ್ತು ಸೌಹಾರ್ದತೆ: "ಒಗ್ಗಟ್ಟು ಬಲ, ವಿಭಜನೆ ಹಾನಿ."

ಆಧ್ಯಾತ್ಮಿಕ ಮೌಲ್ಯಗಳು ಸಾಮಾಜಿಕ ಸಂಬಂಧಗಳನ್ನು ಬಲಪಡಿಸಿ, ಸಹಕಾರ, ಸೌಹಾರ್ದತೆ ಮತ್ತು ಪರಸ್ಪರ ಸಹಾಯವನ್ನು ಉತ್ತೇಜಿಸುತ್ತವೆ. 8.ಆತ್ಮವಿಶ್ವಾಸ ಮತ್ತು ಧೈರ್ಯ: "ಆತ್ಮವಿಶ್ವಾಸವೇ ಜೀವನದ ನಾವಿಕ."

ಧ್ಯಾನ ಮತ್ತು ಸ್ವ-ಆಲೋಚನೆಯಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ಸಮಸ್ಯೆಗಳಿಗೆ ಧೈರ್ಯದಿಂದ ಎದುರಿಸಬಹುದು. 9.ಜೀವನದ ಅರ್ಥ ಮತ್ತು ತೃಪ್ತಿ: "ಜ್ಞಾನ ಮಾತ್ರವಲ್ಲ, ಜ್ಞಾನದಿಂದ ಜೀವನ ಬೆಳಗಲಿ."

ವಿಜ್ಞಾನದಿಂದ ಜ್ಞಾನ ಮತ್ತು ಆಧ್ಯಾತ್ಮಿಕತೆಯಿಂದ ತೃಪ್ತಿ ಲಭಿಸಿ, ಜೀವನದಲ್ಲಿ ಸಾರ್ಥಕತೆ ಮತ್ತು ಉದ್ದೇಶ ಕಂಡುಹಿಡಿಯಬಹುದು. 10.ಮಾನಸಿಕ ಸ್ಥೈರ್ಯ ಮತ್ತು ಧೈರ್ಯ:"ಶಾಂತ ಮನಸ್ಸು ಬಲವಾದ ಜೀವನದ ಬೆಂಬಲ."

ವೈಜ್ಞಾನಿಕ ನೋಟ – ಧ್ಯಾನ ಮತ್ತು ಮೆದುಳಿನ ಸಂಪರ್ಕ

ಆಧುನಿಕ ನರ ವಿಜ್ಞಾನದ ಪ್ರಕಾರ, ನಿಯಮಿತ ಧ್ಯಾನದಿಂದ "ಅಮಿಗ್ಡಲಾ" ಎಂಬ ಭಯ, ಆತಂಕ ಸಂಬಂಧಿತ ಮೆದುಳಿನ ಭಾಗದ ಚಟುವಟಿಕೆ ಕಡಿಮೆಯಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ, ಭಾವನಾತ್ಮಕ ಸಮತೋಲನ ಮತ್ತು ಒತ್ತಡದ ನಿಯಂತ್ರಣ ಸಾಧ್ಯವಾಗುತ್ತದೆ. ಧ್ಯಾನ ಕೇವಲ ಧರ್ಮಕ್ಕೆ ಸೀಮಿತವಲ್ಲ – ಅದು ವೈಜ್ಞಾನಿಕ ದೃಷ್ಟಿಯಿಂದಲೂ ಪರಿಣಾಮಕಾರಿಯಾಗಿದೆ.

 ವಿಜ್ಞಾನ ಮತ್ತು ಧ್ಯಾನ: ಸಂಧಾನದ ಸಂದೇಶ

ಮೂರು ಪಾಠಗಳು :

೧. ವಿಜ್ಞಾನ ಮತ್ತು ಅಧ್ಯಾತ್ಮ ಪರಸ್ಪರ ಪೂರಕ – ಒಳಜೀವನಕ್ಕೆ ಎರಡೂ ಅಗತ್ಯ. ೨. ಧ್ಯಾನ, ಪ್ರಾರ್ಥನೆ, ಮೌಲ್ಯಾಧಾರಿತ ಚಿಂತನೆ – ಮನಸ್ಸಿಗೆ ಔಷಧಿಯಂತೆ ಕೆಲಸ ಮಾಡುತ್ತವೆ. ೩. ಆಂತರಿಕ ಶುದ್ಧತೆ – ಧರ್ಮವಷ್ಟೆ ಅಲ್ಲ, ಆರೋಗ್ಯಕ್ಕೂ ಅವಶ್ಯಕ.

ದಿನನಿತ್ಯದ ಅಭ್ಯಾಸ ಸಲಹೆ :

ಪ್ರತಿದಿನ ಕನಿಷ್ಠ ೧೦ ನಿಮಿಷಗಳ ಕಾಲ ನಿಶ್ಯಬ್ದವಾಗಿ ಕಣ್ಣು ಮುಚ್ಚಿ, ಶ್ವಾಸದ ಮೇಲೆ ಗಮನ ಹರಿಸೋಣ. ಇದು ಶಾಂತಿಯ ದಾರಿಯಾಗಬಹುದು.

ನಮಗೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು:

ನಾನು ಪ್ರತಿದಿನವೂ ಆಂತರಿಕ ಶಾಂತಿಯ ಅನುಭವಕ್ಕಾಗಿ ಸಮಯವನ್ನು ಮೀಸಲಿಡುತ್ತೇನಾ? ವೈಜ್ಞಾನಿಕ ಜ್ಞಾನದ ಜೊತೆಗೆ ನನ್ನ ಆತ್ಮವನ್ನು ಪರಿಶುದ್ಧಿಗೊಳಿಸುವ ಪ್ರಯತ್ನ ಮಾಡುತ್ತೇನಾ? ನನ್ನೊಳಗಿನ ನಿಶ್ಯಬ್ದತೆ ಮತ್ತು ಆಧ್ಯಾತ್ಮಿಕತೆಗೆ ನಾನು ಹೃದಯಪೂರ್ವಕವಾಗಿ ಅಂಗೀಕರಿಸುತ್ತಿದ್ದೇನಾ?

ಇವು ನಮ್ಮ ಜೀವನದಲ್ಲಿ ಸತ್ವ, ಶಾಂತಿ ಮತ್ತು ಬೆಳಕು ತರುವ ಹಾದಿಯ ಪ್ರಾರಂಭವಾಗಿದೆ. ಧ್ಯಾನ ಮತ್ತು ಆತ್ಮಚಿಂತನೆಯ ಈ ಪಥದಲ್ಲಿ ನಿಜವಾದ ಸಂತೃಪ್ತಿ ಮತ್ತು ಸಮಾಧಾನ ನಮ್ಮನ್ನು ಎದುರುನೋಡುತ್ತವೆ.

ನಮ್ಮೊಳಗಿನ ಶಾಂತಿ ಹಗುರದ ಹಾದಿ, ಬೆಳಕು ನಮ್ಮ ಅನಂತ ಸಂಗಾತಿ :

ಶಾಂತಿ ಮತ್ತು ಬೆಳಕು ಸದಾ ನಮ್ಮ ಜೊತೆಯಿರಲಿ. ಆಂತರಿಕ ಅರಿವಿನ ದೀಪವು ನಮ್ಮ ಜೀವನದ ಮಾರ್ಗದರ್ಶನವಾಗಲಿ, ಪ್ರತಿಯೊಂದು ಕ್ಷಣವೂ ಸಮತೋಲನ ಮತ್ತು ಪ್ರೇಮದಿಂದ ಆವರಿಸಲಿ. ನಿಜವಾದ ಸತ್ಯ ಮತ್ತು ಶಾಂತಿಯ ಹಾದಿಯಲ್ಲಿ ನಿರಂತರವಾಗಿ ಸಾಗುವ ಶಕ್ತಿ ನಮ್ಮೊಳಗೆ ಹುಟ್ಟಲಿ.

 

 

 

ಮೇ 11 , 2025 ರ ತಾಯಂದಿರ  ದಿನಕ್ಕಾಗಿ  ಎರಡು ಕವನಗಳು 

ರಚನೆ  : ಡಾ|| ಎ ಎಸ್ ಚಂದ್ರಶೇಖರ ರಾವ್ ( ಅವರದೇ ಕೈ ಬರಹದಲ್ಲಿ ಓದಿ ಆನಂದಿಸಿ )

 
 

ಕವನ :ದೇಶ ಕಾಯುವ ಸೈನಿಕರು -

ಲೇಖಕಿ :ಶ್ರೀಮತಿ ಲತಾ ಶಿವಕುಮಾರ್

ಕೊಡಗಿನಲ್ಲಿ ಹುಟ್ಟಿ ಕಾವೇರಿ ನೀರು ಕುಡಿದು ಕಾವೇರಮ್ಮನ ಮಡಿಲಲ್ಲಿ ಬೆಳೆದಮಕ್ಕಳು ದೇಶ ಸೇವೆಗಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟು,

ದೇಶ ಕಾಯುವ ಸೈನಿಕರಿಗೆ ನನ್ನ ಶತಶತ ನಮನಗಳು

ದೇಶಭಕ್ತಿಯೇ ನಮ್ಮ ಉಸಿರೆಂದು ಹೇಳಿಕೊಟ್ಟುಮಕ್ಕಳನ್ನು ಬೆಳೆಸುವ

ಪ್ರತಿ ಮನೆಗೊಬ್ಬರಂತೆ ದೇಶ ಸೇವೆಗೆ ಕಳಿಸುವ

ತಂದೆ ತಾಯಿಯರು ಭಾರತಾಂಬೆಗೆ ಸಮಾನ.

ಅವರಿಗೂ  ನನ್ನ ಶತಶತ ನಮನಗಳು

ಕಥೆ : ನೆಮ್ಮದಿಯ ಜೀವನ 

ಲೇಖಕರು : ಡಾ || ಎ ಎಸ್ ಚಂದ್ರಶೇಖರ ರಾವ್ 

ಒಂದು ಸಣ್ಣ ಊರು. ಸಮುದ್ರ ತೀರದಲ್ಲಿತ್ತು. ಬಹುಪಾಲು ಜನ ಅಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಪ್ರತಿದಿನ ಬೆಳಗಿನಿಂದ ಮಧ್ಯಾಹ್ನದವರೆಗೂ ಮೀನುಗಳನ್ನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದರು. ಮನೆಗೆ ಮಧ್ಯಾಹ್ನ ಬಂದು ಮಕ್ಕಳು ಮಡದಿ ಬಂಧುಗಳ ಜೊತೆ ಊಟಮಾಡಿ ಮಧ್ಯಾಹ್ನ ವಿರಾಮ ತೆಗೆದುಕೊಂಡು ಸಂಜೆ ಎಲ್ಲರೂ ಸೇರಿ ಸಂತೋಷಕೂಟದಲ್ಲಿ ಭಾಗವಹಿಸುತ್ತಿದ್ದರು. ಏನಾದರೂ ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಇರುತ್ತಿದ್ದುವು. ಅಥವ ಆಟ ಪಾಠಗಳಲ್ಲಿ ಕಾಲ ಕಳೆಯುತ್ತಿದ್ದರು. ಸಂಜೆ ಕುಟುಂಬದೊಂದಿಗೆ ಕಾಲ ಕಳೆದು ರಾತ್ರಿ ಊಟಮಾಡಿ ಮಲಗುತ್ತಿದ್ದರು. ಒಟ್ಟಿನಲ್ಲಿ ಅವರೆಲ್ಲ ನೆಮ್ಮದಿ ಜೀವನ ನಡೆಸುತ್ತಿದ್ದರು.

ಇಂತಹ ಸಮಯದಲ್ಲಿ ಪಟ್ಟಣದಿಂದ ಓರ್ವ ನಾಗರಿಕ ಬಂದು ಈ ಮೀನುಗಾರರ ಮುಖ್ಯಸ್ಥನನ್ನು ಭೇಟಿ ಮಾಡಿದ. ಅವರ ಜೀವನ ಶೈಲಿಯನ್ನು ಒಂದೆರಡು ದಿನ ವೀಕ್ಷಿಸಿ ಆತನು ಮುಖ್ಯಸ್ಥನಿಗೆ ಹೇಳಿದ "ನೋಡಿ ನೀವು ಮೀನುಗಾರಿಕೆಯಲ್ಲಿ ಪರಿಣತರಿದ್ದೀರಿ. ಇಲ್ಲಿ ಬೇಕಾದಷ್ಟು ಮೀನುಗಳು ಇವೆ. ನೀವೆಲ್ಲ ಬೆಳಗಿನ ಹೊತ್ತು ಮಾತ್ರ ಮೀನು ಹಿಡಿದು ಮಾರುತ್ತೀರಿ. ಮಧ್ಯಾಹ್ನ ಸಹ ಮೀನು ಹಿಡಿದರೆ ಹೆಚ್ಚು ಉಪಯೋಗವಾಗುತ್ತದೆ.

ಮುಖ್ಯಸ್ಥ ಹೇಳಿದ "ಇದರಿಂದ ನಮಗೇನು ಉಪಯೋಗವಾಗುತ್ತದೆ".

"ಇದರಿಂದ ಹೆಚ್ಚು ಮೀನು ಹಿಡಿದು ಮಾರಿದರೆ ಹೆಚ್ಚು ಲಾಭ ಬರುತ್ತೆ". ನೀವು ದೊಡ್ಡದಾದ ದೋಣಿ ಕೊಂಡು ಇನ್ನೂ ಹೆಚ್ಚು ಮೀನು ಹಿಡಿಯಬಹುದು. ನಂತರ ಇನ್ನೂ ದೊಡ್ಡ ದೋಣಿ ದೋಣಿಗಳನ್ನು ಕೆಲಸಗಾರರನ್ನು ಇಟ್ಟುಕೊಂಡು ಹೆಚ್ಚು ಸಂಪಾದಿಸಬಹುದು. ಟಿವಿ, ಕಾರು ಎಲ್ಲ ಕೊಳ್ಳಬಹುದು. ತುಂಬಾ ಸಂತೋಷವಾಗಿರಬಹುದು.

"ಇದಕ್ಕೆಲ್ಲ ಎಷ್ಟು ಸಮಯ ಬೇಕಾಗುತ್ತೆ"? "ಪ್ರಾರಂಭದಲ್ಲಿ ೩-೪ ವರ್ಷ, ನಂತರ ೭-೮ ವರ್ಷ ಇನ್ನೂ ಹೆಚ್ಚೆಂದರೆ ೧೫-೨೦ ವರ್ಷಗಳಲ್ಲಿ ನೀವು ಈ ಮಟ್ಟಕ್ಕೆ ಬರಬಹುದು'. ಮುಖ್ಯಸ್ಥ ಹೇಳಿದ "ನೋಡಿ ನೀವು ಹೇಳಿದ್ದು ನಿಜ. ಈ ೧೫-೨೦ ವರ್ಷಗಳಲ್ಲಿ ಮಕ್ಕಳೆಲ್ಲ ದೊಡ್ಡವರಾಗಿರುತ್ತಾರೆ. ನಮಗೂ ವಯಸ್ಸಾಗಿರುತ್ತದೆ. ಈಗಿನಂತೆ ಆಗ ಮಕ್ಕಳ ಜೊತೆ ಸಂತೋಷವಾಗಿರುವುದಕ್ಕಾಗುವುದಿಲ್ಲ. ಆಗ ನಾವು ನೆಮ್ಮದಿಯಿಂದ ಇರಬಹುದಂತ ನೀವು ಹೇಳಿದಿರಿ. ನಾವು ಈಗಲೇ ನೆಮ್ಮದಿ ಸಂತೋಷದಿಂದಿದ್ದೇವೆ."

ಈ ಕತೆಯಿಂದ ನಾವು ಏನನ್ನು ತಿಳಿಯಬಹುದು? ಸುಖ ಸಂತೋಷ ನೆಮ್ಮದಿ ಇವೆಲ್ಲ ನಾವೇ ತಂದುಕೊಳ್ಳಬಹುದು. ಇರುವುದರಲ್ಲೇ ತೃಪ್ತಿ ಜೀವನ ನಡೆಸಿದರೆ ಇವೆಲ್ಲ ಸಿಕ್ಕುತ್ತದೆ. ಹಣದಾಸೆಗೆ ನಾವು ಬಿದ್ದರೆ ಇರುವುದನ್ನೂ ಕಳೆದುಕೊಳ್ಳುತ್ತೇವೆ. ಜೀವನದಲ್ಲಿ ಬರುವ ಕಷ್ಟಗಳನ್ನೆಲ್ಲಾ ನಾವೇ ನಾವಾಗಿ ಮಾಡಿಕೊಂಡಿರುವುದು.

ಒಟ್ಟಿನಲ್ಲಿ ಹೇಳುವುದಾದರೆ ತೃಪ್ತಿ ಜೀವನ ನಡೆಸುವುದು ಮುಖ್ಯ.

ನಮ್ಮ ಬಡಾವಣೆಯ ರಾಮೋತ್ಸವದಲ್ಲಿ ನಡೆದ ಏಕಪಾತ್ರಾಭಿನಯ 

 ಕಿತ್ತೂರು ರಾಣಿ ಚನ್ನಮ್ಮ ಅವರ ಬಗ್ಗೆ : ಶ್ರೀಮತಿ ಮಾಲತಿ ವೆಂಕಟೇಶ್ ಅವರಿಂದ

[embed]https://youtu.be/m76NoZFCirg[/embed]

ಚಿತ್ರಕಲೆ - ಶ್ರೀ ಕೆ ವಿ ಜಯರಾಂ 

ಶ್ರೀ ಅದಿ  ಶಂಕರಾಚಾರ್ಯ 

 
 

ಬಂಡೆ ಸಂದಿಗಳಲ್ಲಿ ಓಡಾಡುವ ಅಳೀಲಿನಂತಹ ಪ್ರಾಣಿ  ( ಸಾನ್ ಫ್ರಾನ್ಸಿಸ್ಕೊ  ಮ್ಯೂಸಿಯಂ ನಲ್ಲಿರುವಂತೆ ) 

  ಬಡಾವಣೆ ಸುದ್ದಿ 

ನಮ್ಮ ಬಡಾವಣೆಯ ಸ್ವಾತಿ ಡೆಂಟಲ್ ಕ್ಲಿನಿಕ್ ನ ಡಾ|| ನಾಗೇಶ್ ಅವರ ಮನೆಯಲ್ಲಿ 31/05/2025 ರಂದು ನಡೆದ ಸತ್ಸಂಗ ಕಾರ್ಯಕ್ರಮ ಬಹಳ ಚೆನ್ನಾಗಿತ್ತು .

ಧನ್ಯವಾದಗಳು 

Comments

Popular posts from this blog

ಪ್ರತಿಭಾ ಪತ್ರಿಕೆ - ಡಿಸಂಬರ್ 2024

Magazine for talents - November 2024

Magazine for talents - December 2024