Posts

Showing posts from October, 2025

ನವೆಂಬರ್ ಸಂಚಿಕೆ

Image
  ಪ್ರತಿಭಾ ಪತ್ರಿಕೆ - ನವೆಂಬರ್   2025   ಸಂಪಾದಕರ ಬರಹ  ದೊಡ್ಡ ಲೇಖನಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿ ಪರಿಚಯದಲ್ಲಂತೂ ಪೂರ್ತಿಯಾಗಿ ಓದುತ್ತಿಲ್ಲದ ಕಾರಣ ವ್ಯಕ್ತಿ ಪರಿಚಯವನ್ನು ಇನ್ನೂ ಸಂಕ್ಷಿಪ್ತವಾಗಿ ಈ ಸಂಚಿಕೆಯಿಂದ ಹಾಕಲಾಗುತ್ತದೆ. ದಯವಿಟ್ಟು ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಿ. ಬಹುಮಾನವನ್ನು 250 ರೂ ಗಳಿಂದ 500 ರೂ ಗಳಿಗೆ ಹೆಚ್ಚಿಸಲಾಗಿದೆ. ಬಹುಮಾನದ ವಿಲ್ಲದ ಸ್ಪರ್ಧೆಗಳು ಸ್ವಾರಸ್ವಕರವಾಗಿರುತ್ತದೆ. ಆದ್ದರಿಂದ ಅದರಲ್ಲಿಯೂ ಭಾಗವಹಿಸಿ.  ನೀವೇ ಬರೆದ ಕಥೆ ಕವನ ಹಾಸ್ಯ ಚಿತ್ರಕಲೆ ಮುಂತಾದವುಗಳನ್ನು ದಯವಿಟ್ಟು ಕಳಿಸಿ .  ಇತ್ತೀಚೆಗೆ  ನಿಮ್ಮ ಅಭಿಪ್ರಾಯಗಳು ಕಡಿಮೆಯಾಗಿವೆ. ದಯವಿಟ್ಟು ಬರೆಯಿರಿ . ಪ್ರತಿಭಾ ಪತ್ರಿಕೆಯ ಪದ್ಯ - ಎ ಎಸ್ ಜಯರಾಂ   ಪ್ರತೀ ತಿಂಗಳ ಹೊಸ ಬೆಳಕು,   ಕಥೆ, ಕವನ, ಚಿಂತನೆ, ಚುಟುಕು,   "ಪ್ರತಿಭಾ" ಇಂಬು ತುಂಬುವ ಒಲುಮೆ!   ಹಾಸ್ಯ ಹೊಳೆ ಹರಿಸುವ ಮಾಸಿಕ ಚಿಲುಮೆ || 1 || ಕಲೆಯ ಕಣಜವೇ ಇಲ್ಲಿ ಹರಿಯುವುದು,   ಸಂಸ್ಕೃತಿಯು ಮುಂದಕ್ಕೆ ನಡೆಯುವುದು.   ಸುದ್ದಿಯ ಪರಿಜ್ಞಾನ, ಹೊಸ ತಂತ್ರದ ಜ್ಞಾನ,   ಪ್ರತಿಯೊಂದು ಪುಟ ಹಬ್ಬದ ಚಂದನ || 2 || ಸ್ಪರ್ಧೆಯ ದಾರಿಯಲ್ಲಿ ಸ್ಪೂರ್ತಿ ಸಿಡಿಯಿ...