ಪ್ರತಿಭಾ ಪತ್ರಿಕೆ - ಆಗಸ್ಟ್ 2025
ಸಂಪಾದಕರ ಬರಹ ಕಳೆದ ಸಂಚಿಕೆಯಲ್ಲಿ ಮುಖ್ಯ ಪದಬಂಧ, ಕವನ ಮುಂದುವರಿಸುವುದು , ಓತಿಕೇತದ ಕಥೆಯ ಪ್ರಶ್ನೆಗಳು ಎಲ್ಲದಕ್ಕೂ ಉತ್ತರಿಸಿದ್ದೀರಿ .ಬಹಳ ಧನ್ಯವಾದಗಳು. ಈ ಸಂಚಿಕೆಯಲ್ಲೂ ಬಹುಮಾನಿತ ಸ್ಪರ್ಧೆಯಯಾದ ರಂಗೋಲಿ ಸ್ಪರ್ಧೆಯ ಜೊತೆಗೆ ಇನ್ನೂ ಅನೇಕ ಬಹುಮಾನವಿಲ್ಲದ ಚಿಕ್ಕ ಸ್ಪರ್ಧೆಗಳಿವೆ. ಎಲ್ಲದರಲ್ಲೂ ದಯವಿಟ್ಟು ಭಾಗವಹಿಸಿ. ನಾನು ಅನೇಕರನ್ನು "ವಿಶೇಷ ವ್ಯಕ್ತಿಗೆ ನಿಮ್ಮ ಹೆಸರನ್ನು ಹಾಕುತ್ತೇನೆ" ಎಂದು ಎಂದು ಹೇಳಿದಾಗ ಅವರುಗಳು "ನಾನೇನು ವಿಶೇಷ ವ್ಯಕ್ತಿ ಅಲ್ಲ. ಹಾಕುವುದು ಬೇಡ" ಎಂದು ಹಿಂದೆ ಸರಿದರು. ಅದರಿಂದ ಮುಂದಿನ ಸಂಚಿಕೆಯಿಂದ ವಿಶೇಷ ವ್ಯಕ್ತಿ ಎನ್ನುವ ಬದಲು ವ್ಯಕ್ತಿ ಪರಿಚಯ ಎಂದು ಮಾರ್ಪಾಡು ಮಾಡುತ್ತೇನೆ. ಆಗ ಯಾರು ಬೇಕಾದರೂ ತಮ್ಮ ಹವ್ಯಾಸಗಳು ಮುಂತಾದವುಗಳನ್ನು ನನಗೆ ಬರೆದು ಕಳಿಸಬಹುದು. ನಾನು ಸೂಕ್ತ ವ್ಯಕ್ತಿಗಳನ್ನು ಪ್ರತಿಭಾ ಪತ್ರಿಕೆಯಲ್ಲಿ ಹಾಕುತ್ತೇನೆ. ತಮ್ಮೆಲ್ಲರ ಸಹಕಾರಕ್ಕೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ವಿಚಾರ - ತಾಯಿಯ ಬೆಲೆ ಎಷ್ಟು ? ನೀವೇ ಹೇಳಿ . ಇದು, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ. ಜೂನ್ ಸಂಚಿಕೆಯ ಬಹುಮಾನ ವಿಜೇತರು ಶ್ರೀಮತಿ ಸೌಮ್ಯ ನ...