Posts

Showing posts from May, 2025

ಮೇ 2025 test

Image
ಸಂಪಾದಕರ ಮಾತು   ಮಾರ್ಚ್ ಸಂಚಿಕೆಯ ಮಾಹುಮಾನ ವಿಜೇತರು. ಏಪ್ರಿಲ್ ಸಂಚಿಕೆಯ ಸ್ಪರ್ಧೆಯ ಉತ್ತರಗಳು  ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ  ಮುದ್ದುಮಕ್ಕಳ ಮುಗ್ಧ ಮನ - ಭಾಗ 10. ಲೇಖನಗಳು   1. ಶ್ರೀ ರಾಮ ನಾಮ  ಡಾ || ಎ ಎಸ್ ಚಂದ್ರಶೇಖರ ರಾವ್  ಭಗವನ್ನಾಮ ಭಗವಂತನಿಗಿಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಎಂದು ಅನೇಕ ಭಕ್ತರು ನಂಬುತ್ತಾರೆ. ಅದರಲ್ಲೂ ಶ್ರೀರಾಮನಾಮ ತುಂಬ ಶ್ರೇಷ್ಠವಾದುದು. ದಾಸರು ಹೇಳಿದಂತೆ ನೀನ್ಯಾಕೋ ನಿನ್ನ ಹಂಗ್ಯಾಕೊ ನಿನ್ನ ನಾಮದ ಬಲವೊಂದಿದ್ದರೆ ಸಾಕು. ಇದು ಭಗವಂತನ ನಾಮದ ಶಕ್ತಿ. ಪರಮೇಶ್ವರನು ಸದಾ ಧ್ಯಾನ ಮಗ್ನನಾಗಿ ತಪಸ್ಸು ಮಾಡುತ್ತಿರುತ್ತಾನೆ. ಆತ ಯಾರನ್ನು ಕುರಿತು ಧ್ಯಾನ ಮಾಡುತ್ತಾನೆ? ಎಂಬ ಪ್ರಶ್ನೆಗೆ ಪಂಡಿತರೊಬ್ಬರು ಹೇಳಿದ್ದು - ಪರಮೇಶ್ವರನು ಶ್ರೀರಾಮನನ್ನು ಕುರಿತು ಧ್ಯಾನ ಮಾಡುತ್ತಾನೆ ಅಂತ, ಶ್ರೀರಾಮ ಶಿವ ಎಲ್ಲ ಒಂದೇ ಅಲ್ಲವೆ. ಆದರೂ ರಾಮನಾಮಕ್ಕೆ ಅಷ್ಟೊಂದು ಶಕ್ತಿ ಇದೆ ಎನ್ನುತ್ತಾರೆ. ಒಂದು ಸಾರಿ ಪಾರ್ವತಿಯು ಪರಮೇಶ್ವರನನ್ನು ಕುರಿತು ಕೇಳುತ್ತಾಳೆ "ಯಾರ ನಾಮವನ್ನು ಜಪಿಸಿದರೆ ಸಕಲ ಇಷ್ಟಾರ್ಥ ಸಿದ್ಧಿಸುವುದು ಮತ್ತು ಮೋಕ್ಷಕ್ಕೆ ಸಹಾಯವಾಗುತ್ತೆ". ಅದಕ್ಕೆ ಪರಮೇಶ್ವರನು ಉತ್ತರಿಸುತ್ತಾನೆ "ಶ್ರೀ ವಿಷ್ಣು ಸಹಸ್ರನಾಮ ಜಪಿಸಿದರೆ ಈ ಫಲ ಸಿಗುತ್ತೆ" ಆದರೆ ಪಾರ್ವತಿಗೆ ಇದರಿಂದ ಪೂರ್ತಿ ಸಮಾಧಾನವಾಗುವುದಿಲ್ಲ....