testing word file

ವಿಷಯ ನಾನು ಕೊಟ್ಟಿದ್ದಕ್ಕೆ ಒಂದು ಬಲವಾದ ಕಾರಣವಿದೆ.
ಇದು ಸುಮಾರು
50 ವರ್ಷಗಳ ಹಿಂದೆ ನಡೆದ ಘಟನೆ ಅದಕ್ಕೆ ಸ್ವಲ್ಪ ಒಗ್ಗರಣೆ ಹಾಕಿ ಬರೆದಿದ್ದೇನೆಆಗ ನನ್ನ ತಂದೆಯ ತಂಗಿ ಭಾಗ್ಯಳಿಗೆ ಮದುವೆಗೆ ಗಂಡು ನೋಡುತ್ತಿದ್ದರು. ಅವರ ಇನ್ನೂ ಒಬ್ಬ ತಂಗಿ ಪುಷ್ಪ (ಹೆಸರುಗಳನ್ನು ಬದಲಾಯಿಸಲಾಗಿದೆ). ಯಾವಾಗಲೂ ಏನಾದರೂ ಅಂಗಡಿಯಿಂದ ತರಬೇಕಾದರೆ ಪುಷ್ಪ ಅವರೇ ಹೋಗುತ್ತಿದ್ದರು.ಅವರ ಜೊತೆಗೆ ನಾನು ಹೋಗುತ್ತಿದ್ದೆ. ಅಳಿದುಳಿದ ಚಿಲ್ಲರೆಯಲ್ಲಿ ನಾನು ಅವರು ಚಾಕಲೇಟು, ಪೆಪ್ಪರ್ಮೆಂಟು ಬಿಸ್ಕೆಟ್ ಗಳನ್ನು ಕೊಂಡು ತಿಂದು ಬರುತ್ತಿದ್ದೆವು . ಇದು ಎಲ್ಲರಿಗೊ ತಿಳಿದಿತ್ತು.
ಒಮ್ಮೆ ಇದ್ದಕ್ಕಿದ್ದಂತೆ ಯಾರೋ ಗಂಡಿನ ಕಡೆಯವರು ಭಾಗ್ಯಳನ್ನು ನೋಡಲು ಬರುತ್ತೇವೆ ಎಂದು ಫೋನ್ ಮಾಡಿ ತಿಳಿಸಿದರು .ನಂತರ ಕೆಲವೇ ಸಮಯದಲ್ಲಿ ಹುಡುಗ ಹಾಗೂ ಅವನ ತಂದೆ ತಾಯಿಯರು ನಮ್ಮ ಮನೆಗೆ ಬಂದೇ ಬಿಟ್ಟರು .ನಮ್ಮ ಅಜ್ಜಿ , ಭಾಗ್ಯಲನ್ನು ಅಲಂಕಾರ ಮಾಡಿ ಕೂಡಿಸುವುದರಲ್ಲಿಯೇ ಮಗ್ನರಾಗಿದ್ದರು. ಅವರು ಬಂದಮೇಲೆ, ಇದ್ದಕ್ಕಿದ್ದಂತೆ ನಮ್ಮ ಅಜ್ಜಿಯವರಿಗೆ ಮನೆಯಲ್ಲಿ ಉಪ್ಪಿಟ್ಟು ಮಾಡಲು ಕೆಲವು ತರಕಾರಿಗಳು ಇಲ್ಲವೆಂದು ತಿಳಿಯಿತು. ಎಂದಿನಂತೆ ಪುಷ್ಪ ಹಾಗು ನಾನು ಅಂಗಡಿಗೆ ಹೊರಟು ನಿಂತೆವು. ಕೋಟಿನ ಜೇಬಿನಲ್ಲಿದ್ದ ಐದು ರೂಪಾಯಿ ತೆಗೆದುಕೊಂಡೆವು .ಆ ಕಾಲದಲ್ಲಿ ಐದು ರೂಪಾಯಿ ತುಂಬಾ ಸಾಮಾನುಗಳು ಬರುತ್ತಿದ್ದವು. ಇದಕ್ಕೆ ಇದ್ದಂತೆ ಹುಡುಗನ ತಂದೆ ಗಾಬರಿಯಿಂದ ಎದ್ದು ನಿಂತು 'ಏನೂ ತರುವುದು ಬೇಡ, ತಿಂಡಿ ಮಾಡುವುದು ಬೇಡ" ಎಂದು ಆತಂಕದಿಂದ ಹೇಳಿದರು. ನಮ್ಮ ತಾತನವರು "ಅವರು ಎಲ್ಲೋ ತರಾತುರಿಯಲ್ಲಿ ಹೋಗಬೇಕಾಗಿದೆ ಅದಕ್ಕೇ ಹೇಗೆ ಹೇಳುತ್ತಿದ್ದಾರೆ" ಎಂದುಕೊಂಡರು. ಆದರೂ ಬಲವಂತ ಮಾಡಿ ಅವರನ್ನು ಕೂಡಿಸಿ 'ತಿಂಡಿ ತಿಂದುಕೊಂಡೇ ಹೋಗಬೇಕು " ಎಂದು ಹೇಳಿದರು .ನಂತರ ನಾನು ಪುಷ್ಪ ಅಂಗಡಿಗೆ ಹೋಗಿ ಏನು ಬೇಕೋ ಅದನ್ನು ತಂದು ಚಿಲ್ಲರೆ ಕಾಸಿನಲ್ಲಿ ಪೆಪ್ಪರ ಮೆಂಟ್ ಕೊಂಡು ತಿಂದು ಬಂದೆವು .
ಕೆಲವೇ ನಿಮಿಷಗಳ ನಂತರ ನಮ್ಮ ಅಜ್ಜಿ ಇನ್ನೂ ಕೆಲವು ತರಕಾರಿಗಳು ಬೇಕೆಂದು ಹೇಳಿದರು. ಮತ್ತೆ ಪುಷ್ಪ ಹೋಗಿ ಇನ್ನ ಐದು ರೂಪಾಯಿ ಕೋಟಿನಿಂದ ತೆಗೆದುಕೊಂಡು ಹೊರಡಲು ತಯಾರಾಗುತ್ತಿದ್ದಂತೆ , ಹುಡುಗನ ತಂದೆ ಮೊದಲಿಗಿಂತ ಹೆಚ್ಚು ಗಾಬರಿಯಾಗಿ "ದಯವಿಟ್ಟು ಬೇಡ, ಕಾಫಿ ಕೊಟ್ಟುಬಿಡಿ ಸಾಕು "ಎಂದರು ಅವರನ್ನು ಬಲವಂತವಾಗಿ ಕೂಡಿಸಿದ ಮೇಲೆ ನಮ್ಮ ತಾತನವರು ನಮ್ಮ ಹಿಂದೆಯೇ ಬೀದಿ ಬಾಗಿಲಿಗೆ ಓಡಿ ಬಂದರು.
ಪುಷ್ಪಳನ್ನು ಕೇಳಿದರು "ಆಗ ತೆಗೆದುಕೊಂಡು ಹೋದ ದುಡ್ಡು ಎಷ್ಟು? "
ಪುಷ್ಪ ಹೇಳಿದರು" ಐದು ರೂಪಾಯಿಗಳು"
ತಾತ : "ಈಗ ತೆಗೆದುಕೊಂಡು ಹೋಗುತ್ತಿರುವ ದುಡ್ಡು ಎಷ್ಟು?"
ಪುಷ್ಪ : " ಇನ್ನೊಂದು ಐದು ರೂಪಾಯಿಗಳು"
ನಮ್ಮ ತಾತನಿಗೆ ವಿಪರೀತ ಗಾಬರಿಯಾಯಿತು. "ನಾನು ಕೋಟಿನಲ್ಲಿ ಇಟ್ಟಿದ್ದು ಐದು ರೂಪಾಯಿ ಅದು ಹೇಗೆ ಇನ್ನೂ ಐದು ರೂಪಾಯಿ ತೆಗೆದುಕೊಂಡು ಹೋಗುತ್ತಿರುವೆ?" ಎಂದು ಕೇಳಿದರು.
ಪುಷ್ಪ ಹೇಳಿದಳು "ಇಷ್ಟೇ ಅಲ್ಲ ಇನ್ನೂ ಕೆಲವು ನೋಟುಗಳು ಆ ಕೋಟಿನಲ್ಲಿ ಇವೆ" ಎಂದಾಗ ನಮ್ಮ ತಾತನಿಗೆ ವಿಪರೀತ ಗಾಬರಿಯಾಯಿತು .
ಕೋಟಿನ ಜೇಬಿನಲ್ಲಿದ್ದ ಐದು ರೂಪಾಯಿ ಇಷ್ಟೊಂದು ಜಾಸ್ತಿಯಾದದ್ದು ಹೇಗೆ ಎಂದು ವಿಪರೀತ ತಲೆ ಕೆಡಿಸಿಕೊಂಡರು ಆಗ ಪುಷ್ಪ ಹೇಳಿದಳು." ನನಗೆ ಗೊತ್ತಪ್ಪ. ನಿನ್ನ ಹಳೆಯ ಕೋಟಿನಲ್ಲಿ ಕಡಿಮೆ ದುಡ್ಡು ಇರುತ್ತೆ ಅಂದುಕೊಂಡು ಹೊಸಕೋಟು ತೂಗು ಹಾಕಿದಿಯಲ್ಲ, ಅದರಲ್ಲಿ ದುಡ್ಡು ತೆಗೆದುಕೊಂಡು ಹೋಗುತ್ತಿರುವುದು" ಎಂದಳು
ನಮ್ಮ ತಾತ ಗಾಬರಿಯಿಂದ ಅಲ್ಲೇ ಕುಳಿತುಕೊಂಡರು. " ಏನು ಹೇಳುತ್ತಿರುವೆ ನೀನು? ನನಗೆ ಇರುವುದು ಒಂದೇ ಕೋಟು. ಯಾವ ಹೊಸಕೋಟೂ ಇಲ್ಲ"
ಪುಷ್ಪ ಕೇಳಿದಳು "ನೀನು ಆ ಬ್ರೌನ್ ಕಲರ್ ಕೋಟು ತೂಗು ಹಾಕಿದ್ಯಲ್ಲ ಗೂಟಕ್ಕೆ, ಅದೇನು ಹೊಸದಲ್ಲವೇ ?"
ನಮ್ಮ ತಾತ ಒಂದೇ ಉಸಿರಿಗೆ ಎದ್ದು ಹೇಳಿದರು" ಅಯ್ಯೋ ,ನಮ್ಮ ಗಂಡಿನ ತಂದೆಯವರು ಕೋಟು ಹಾಕಿಕೊಂಡು ಬಂದಿದ್ದರು. ತುಂಬಾ ಶೆಖೆ . ಕೋಟು ಬಿಚ್ಚಿ ಎಲ್ಲಿ ತೂಗು ಹಾಕಲಿ ?ಎಂದು ಕೇಳಿದರು .ಆಗ ನಾನು ನನ್ನ ಕೋಟಿನ ಪಕ್ಕದಲ್ಲಿ ತೂಗಿ ಹಾಕಿ ಎಂದು ಹೇಳಿದೆ "ಎಂದರು
ಆಗ ನಾನು ಪುಷ್ಪ ಮತ್ತು ನಮ್ಮ ತಾತನಿಗೆ ಅರಿವಾಯಿತು. ಹುಡುಗನ ತಂದೆ ಏಕೆ ಪ್ರತಿಸಾರಿ ದುಡ್ಡು ತೆಗೆದುಕೊಂಡಾಗಲೂ ಗಾಬರಿಯಿಂದ ಎದ್ದು ನಿಂತು "ಏನು ತರಬೇಡಿ" ಎಂದು ಹೇಳುತ್ತಿದ್ದಿದ್ದು ಎಂಬುದು. "ಹೀಗೆ ಬಿಟ್ಟರೆ ವಾಪಸೂ ಹೋಗಲು ಆಟೋಗೂ ದುಡ್ಡಿಲ್ಲದಂತೆ ಆಗುವದು" ಎಂದು ಅವರು ಅಂದುಕೊಡಿರಬೇಕು.

🎁

                 testing                        

ತಕ್ಷಣ ನಮ್ಮ ತಾತ ಹಾಗೂ ಪುಷ್ಪ ಇಬ್ಬರೂ ಹುಡುಗನ ತಂದೆಯ ಕಾಲಿಗೆ ಬಿದ್ದು , ನಡೆದ ವಿಷಯವನ್ನೆಲ್ಲಾ ಅವರಿಗೆ ಹೇಳಿ ಕ್ಷಮಾಪಣೆ ಕೇಳಿದರು. ಅವರು "ಹೋಗಲಿ ಬಿಡಿ" ಎಂದು ಹೇಳಿದರು .ಅವರ ಎದುರಿಗೆ ನಾವು ಮತ್ತೆ ಅವರ ಕೋಟಿಗೆ ದುಡ್ಡು ಹಾಕಲು ಆಗಿನ SBI ಹಣ ಬೇಕಾಯಿತು. ( SBI ಹಣ ಎಂದರೆ ಹಾಸ್ಯಮಯವಾಗಿ ನನ್ನ ವಿವರಣೆ : S=ಸಾಸಿವೆಡಬ್ಬದಲ್ಲಿ B= ಬಚ್ಚಿ I= ಇಟ್ಟ ಹಣ ) ವಿಷಯ ತಿಳಿದು, ನಮ್ಮ ಅಜ್ಜಿಯವರೂ ಅವರಲ್ಲಿ ಕ್ಷಮೆ ಕೇಳಿದರು.
ಅವರು ನಂತರ ಸ್ವಲ್ಪ ಹೊತ್ತಿಗೆ ತಿಂಡಿ ತಿಂದು ಹೊರಟರು. ಅವರಿಗೆ "ನಮ್ಮೆದುರಿಗೆ ನಮ್ಮ ಕೋಟಿನಲ್ಲಿಯೇ ದುಡ್ಡು ತೆಗೆದುಕೊಂಡು ಹೋಗಿ ನಮಗೇ ತಿಂಡಿ ಮಾಡಿ ಹಾಕುತ್ತಾರಲ್ಲ ,ಇಷ್ಟೊಂದು ಬುದ್ಧಿವಂತರು ನಮಗೆ ಬೇಡ" ಎನಿಸಬೇಕು. ಭಾಗ್ಯಳನ್ನು ಅವರು ಒಪ್ಪಲಿಲ್ಲ.

                  ============================

ರಾಮೋತ್ಸವ


Comments